ಗೋಣಿಕೊಪ್ಪಲು, ಸೆ. 24: ಎಲ್ಲೆಲ್ಲೂ ಮಹಿಳೆಯರ ಕಲರವ. ಮಹಿಳೆಯರ ಸಂತೆ, ವಿವಿಧ ರುಚಿಕರ ತಿಂಡಿ ತಿನಿಸು ತಯಾರಿ, ಹೂವಿನ ಅಲಂಕಾರ, ಮನಸ್ಸಿಗೆ ಮುದ ನೀಡಿದ ಸಮೂಹ ನೃತ್ಯ ಕಾರ್ಯಕ್ರಮ, ವಿಶೇಷವಾಗಿ ಪ್ರತ್ಯೇಕ ಜನಾಂಗದ ಸಾಂಪ್ರದಾಯಿಕ ತಯಾರಿ, ಸುಮಾರು 16 ವಿಭಾಗಗಳಲ್ಲಿ ನಡೆದ ಪೈಪೆÇೀಟಿ ಕಾರ್ಯಕ್ರಮ. ಇದೇ ಪ್ರಥಮ ಬಾರಿಗೆ ಅತ್ಯಧಿಕ ಮಹಿಳೆಯರನ್ನು ಸೆಳೆಯುವ ಮೂಲಕ ಗೋಣಿಕೊಪ್ಪÀಲು 4 ನೇ ವರ್ಷದ ಮಹಿಳಾ ದಸರಾ ಪ್ರಶಂಸೆಗೆ ಪಾತ್ರವಾಯಿತು.ಮಹಿಳೆಯರ ತಯಾರಿಯಾದ ಬಿದಿರು ಕಣಿಲೆ, ಗಾಂಧಾರಿ ಮೆಣಸು, ಬೆಳ್ಳುಳ್ಳಿ ಉಪ್ಪಿನ ಕಾಯಿ, ಊಟಿ ಕೀರೆ, ಬಸಳೆ, ನುಗ್ಗೆಸೊಪ್ಪು, ದೊಡ್ಡಿಪತ್ರೆ, ವೀಳ್ಯದೆಲೆ ಮಾರಾಟ ಮಳಿಗೆ, ಕೊಡಗಿನ ಕಿತ್ತಳೆ ಒಳಗೊಂಡಂತೆ ವಿವಿಧ ಹಣ್ಣು ಮಳಿಗೆಗಳು, ಲೋಳಿಸರ ಇತ್ಯಾದಿ ಔಷಧಿ ಗುಣವುಳ್ಳ ಗಿಡಗಳ ಮಾರಾಟ, ಕೊಡವ ಸಾಂಪ್ರದಾಯಿಕ ಆಹಾರ ತಯಾರಿಕೆ, ಮುಸ್ಲಿಂ, ಗೌಡ ಜನಾಂಗ, ತಿರುವಳ್ಳುವರ್ ತಮಿಳ್ ಸಂಘಂ, ವೀರಶೈವ ಸಾಂಪ್ರದಾಯಿಕ ಆಹಾರ ತಯಾರಿಕೆ ಮಳಿಗೆ ವಿಶೇಷವಾಗಿ ಗಮನಸೆಳೆದವು.

ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿಪೆÇನ್ನಪ್ಪ ವಸ್ತುಪ್ರದರ್ಶನ ಹಾಗೂ ಮಹಿಳಾ ದಸರಾವನ್ನು ಉದ್ಘಾಟಿಸಿದರು.

ಸಂಸ್ಕೃತಿಯ ಪ್ರತಿಬಿಂಬ ನಾಡಹಬ್ಬ ದಸರಾ

ಉದ್ಘಾಟನಾ ಭಾಷಣ ಮಾಡಿದ ಪದ್ಮಿನಿಪೆÇನ್ನಪ್ಪ,

ಗೋಣಿಕೊಪ್ಪಲು ದಸರಾ: ಇಂದು ಜಾದೂ ಆಕರ್ಷಣೆ

ಶ್ರೀ ಕಾವೇರಿ ದಸರಾ ಸಮಿತಿಯ 39ನೇ ವರ್ಷದ ದಸರಾ ಆಚರಣೆ ಅಂಗವಾಗಿ 5 ನೇ ದಿನವಾದ ತಾ. 25 ರಂದು (ಇಂದು) ವಿಶ್ವ ವಿಖ್ಯಾತ ಜಾದೂ ಪ್ರದರ್ಶನ ಆಕರ್ಷಣೆಯಾಗಲಿದೆ.

ರಾತ್ರಿ 9 ಗಂಟೆಯಿಂದ 11 ಗಂಟೆಯವರೆಗೆ ಕುದ್ರೋಳಿ ಗಣೇಶ್ ತಂಡದ ಜಾದೂ ಪ್ರದರ್ಶನ ನಡೆದರೆ, ಇದಕ್ಕೂ ಮುನ್ನ ಸಂಜೆ 6.30ಕ್ಕೆ ಎಸ್.ಟಿ. ಗಿರೀಶ್ ಹಾಗೂ ನಾಗರಾಜ್ ಕಲಾತಂಡ ಕಾರ್ಯಕ್ರಮ, 8.30 ರಿಂದ 9 ಗಂಟೆಯವರೆಗೆ ಜಗನ್ಮೋಹನ ನಾಟ್ಯಾಲಯ ತಂಡದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.

ಸಭಾ ಕಾರ್ಯಕ್ರಮ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ.ವಿನ್ಸೆಂಟ್ ಡಿಸೋಜಾ, ತಹಶೀಲ್ಧಾರ್ ಆರ್.ಗೋವಿಂದರಾಜು, ವೀರಾಜಪೇಟೆ ಡಿವೈಎಸ್‍ಪಿ ನಾಗಪ್ಪ, ಎಪಿಎಂಸಿ ಅಧ್ಯಕ್ಷ ಮಾಚಿಮಂಡ ಸುವಿನ್‍ಗಣಪತಿ, ಜಿ.ಪಂ.ಸದಸ್ಯ ಬಾನಂಡ ಪ್ರಥ್ಯು, ಸೆಸ್ಕ್ ಸಹಾಯಕ ಕಾರ್ಯಪಾಲಕ ಅಭಿಯಂತರ ಅಂಕಯ್ಯ, ಗೋಣಿಕೊಪ್ಪಲು ಮರ್ಚೆಂಟ್ ಬ್ಯಾಂಕ್ ಅಧ್ಯಕ್ಷ ಕಿರಿಯಮಾಡ ಅರುಣ್ ಪೂಣಚ್ಚ, ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲ ಪಟ್ಟಡ ಪೂವಣ್ಣ, ಸಿ.ಡಿ.ಧ್ಯಾನ್ ಸುಬ್ಬಯ್ಯ, ಗುಮ್ಮಟ್ಟಿರ ಕಿಲನ್‍ಗಣಪತಿ, ಗೋಣಿಕೊಪ್ಪಲು ಪ್ರೆಸ್ ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್‍ನಾಚಪ್ಪ, ಜೀವನ್ ಟಿ.ಬಿ., ಕೆ.ಬಿ.ಸಂಜೀವ, ಕೃಷ್ಣಮೂರ್ತಿ ತೋಟಂತಿಲ್ಲಾಯ ಮುಂತಾದವರು ಪಾಲ್ಗೊಳ್ಳಲಿದ್ದಾರೆ.