ಮಡಿಕೇರಿ, ಸೆ. 24: ಕೊಡವ ಲ್ಯಾಂಡ್ ಕೇಂದ್ರಾಡಳಿತ ಪ್ರದೇಶ, ಕೊಡವ ಲ್ಯಾಂಡ್ ಸ್ವಾಯತ್ತತೆ, ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ 340 - 342 ನೇ ವಿಧಿ ಪ್ರಕಾರ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಬೇಕು, ಮೈಕ್ರೊ ಮೈನಾರಿಟಿ ಕೊಡವ ಬುಡಕಟ್ಟನ್ನು ವಿಶ್ವಸಂಸ್ಥೆಯ ಯುನೆಸ್ಕೋದ ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಪಟ್ಟಿಗೆ ಸೇರಿಸಬೇಕು ಹಾಗೂ ನಕ್ಸಲ್ ಮಾವೋವಾದಿ ರೆಡ್ ಕಾರಿಡಾರ್ -ರೊಹಿಂಗ್ಯಾ ಮತ್ತು ಐ.ಎಸ್.ಐ ಹಾಗೂ ಐ.ಎಸ್.ಐ.ಎಸ್ ವಾದಿಗಳ ಗ್ರೀನ್ ಘಜ್ವಾ ತುರ್ ಹಿಂದ್ ಕಾರಿಡಾರ್ ಪಿತೂರಿಯ ಮೂಲಕ ಕೊಡವ ಕುಲವನ್ನು ಮೂಲೋತ್ಪಾಟನೆ ಮಾಡಲು ಹೊಂಚು ಹಾಕುತ್ತಿರುವ ಅಂತರರಾಷ್ಟ್ರೀಯ ಭಯೋತ್ಪಾದನೆ ನಿಗ್ರಹಿಸಬೇಕೆಂದು ಅದಕ್ಕಾಗಿ ಕೊಡವರಿಗೆ ಸಂವಿಧಾನ ಖಾತ್ರಿ ಬೇಕೆಂದು ಆಗ್ರಹಿಸಿ ತಾ. 26 ರಂದು (ನಾಳೆ) ಹಾಲುಗುಂದ (ಪಾಲಂದ) ಮೇಕೇರಿರ ಮನೆಯಲ್ಲಿ ಸಂಜೆ 5 ಗಂಟೆಗೆ ಸಿ.ಎನ್.ಸಿ ವತಿಯಿಂದ ಜನಜಾಗೃತಿ ಸಭೆ ನಡೆಯಿಲಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು ನಾಚಪ್ಪ ತಿಳಿಸಿದ್ದಾರೆ.