ಸೋಮವಾರಪೇಟೆ, ಸೆ. 24: ಹಾಸನ ಜಿಲ್ಲೆ, ಚನ್ನರಾಯ ಪಟ್ಟಣದ ಮಲ್ಲಪ್ಪನ ಬೆಟ್ಟ ಅರಣ್ಯ ಪ್ರದೇಶಕ್ಕೆ ಬೇಟೆಗೆಂದು ತೆರಳಿದ್ದ ತಾಲೂಕಿನ ನಾಲ್ವರು ಬೇಟೆಗಾರರು ಅಲ್ಲಿನ ಅರಣ್ಯ ಇಲಾಖಾಧಿಕಾರಿ ಗಳಿಗೆ ಸಿಕ್ಕಿಬಿದ್ದಿದ್ದು, ವಿಚಾರಣೆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸ ಲಾಗಿದೆ.
ಚನ್ನರಾಯಪಟ್ಟಣದ ಮಲ್ಲಪ್ಪನ ಬೆಟ್ಟದ ಅರಣ್ಯ ಪ್ರದೇಶದಲ್ಲಿ ನಿನ್ನೆ ದಿನ ಬೇಟೆಗೆ ತೆರಳಿದ್ದ ಸೋಮವಾರಪೇಟೆ ತಾಲೂಕಿನ ಕೂಗೂರು ಗ್ರಾಮ ನಿವಾಸಿ ಕುಮಾರಪ್ಪ, ಚಿಕ್ಕಾರ ಗ್ರಾಮದ ಸುನಿಲ್, ಹೆಗ್ಗಳ ಗ್ರಾಮದ ಎಚ್.ಕೆ. ತಮ್ಮೇಗೌಡ ಹಾಗೂ ಗೊಂದಳ್ಳಿಯ ಜಿ.ಆರ್. ಕೊಮಾರಪ್ಪ ಅವರುಗಳೇ ಬೇಟೆಗೆ ತೆರಳಿ ಬಂದಿತರಾದವರು.
ಮಲ್ಲಪ್ಪನ ಬೆಟ್ಟದಲ್ಲಿ ಕಾಡುಹಂದಿಯ ಬೇಟೆಗೆ ತೆರಳಿದ್ದ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆಗಿಳಿದ ಅರಣ್ಯಾದಿ üಕಾರಿ ಎಚ್.ಆರ್. ಹೇಮಂತ್ ಕುಮಾರ್ ಮತ್ತು ಸಿಬ್ಬಂದಿಯನ್ನು ನೋಡಿದ ತಕ್ಷಣ ಬೇಟೆಗಾರರು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ಯತ್ನ ಸಫಲ ವಾಗದೇ ಅರಣ್ಯ ಇಲಾಖಾ ಸಿಬ್ಬಂದಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಬೇಟೆಗಾರರಿಂದ ಮೂರು ಬಂದೂಕುಗಳನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿ ಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.