ಮಡಿಕೇರಿ, ಸೆ. 24: ಮಡಿಕೇರಿ ದಸರಾ ಜನೋತ್ಸವದ ಅಂಗವಾಗಿ ಸಾಂಸ್ಕøತಿಕ ಸಮಿತಿ ವತಿಯಿಂದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ತಾ. 23 ರಂದು ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗಮಂಡಲ ಅಭಿನಯ ಕಲಾ ಮಿಲನ ಚಾರಿಟೇಬಲ್ ಟ್ರಸ್ಟ್ ತಂಡದಿಂದ ಸಿರಿ ಸುಗ್ಗಿ ಹಾಗೂ ಕೊಟ್ರೇಶ್ ಕೂಡ್ಲಿಗಿ ಮತ್ತು ಮಿಮಿಕ್ರಿ ಗೋಪಿ ಅವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಿತು.

ಇಂದಿನ ದಸರಾ ಸಂಜೆ

ಮಡಿಕೇರಿ ದಸರಾ ಜನೋತ್ಸವ ಸಾಂಸ್ಕøತಿಕ ಸಮಿತಿ ವತಿಯಿಂದ ಗಾಂಧಿ ಮೈದಾನದಲ್ಲಿ ಕಲಾ ಸಂಭ್ರಮ ವೇದಿಕೆಯಲ್ಲಿ ಇಂದಿನ ದಸರಾ ಸಂಜೆ ಕಾರ್ಯಕ್ರಮದಲ್ಲಿ ಚೇರಂಬಾಣೆ ನೆಕ್ಸ್ಟ್ ಡ್ಯಾನ್ಸ್ ಇನ್ಸಿಟಿಟ್ಯೂಟ್ ತಂಡದಿಂದ ಬಾಲಿವುಡ್ ಹಿಪ್‍ಅಪ್, ಸಾಗರದ ಸಿ.ಎನ್. ಮಾಧವ ಭಟ್ ಅವರಿಂದ ಶಿಳ್ಳೆ ವಾದನ-ವಿಶಿಷ್ಟ ಕಲಾ ಪ್ರದರ್ಶನ, ವಿನಯ ರಂಗಧೋಳ್ ಸಾರಥ್ಯದಲ್ಲಿ ಝೀ ವಾಹಿನಿಯ ಜನಪ್ರಿಯ ಸರಿಗಮಪ ಖ್ಯಾತಿಯ ಶ್ರೀಹರ್ಷ, ಸುಪ್ರೀತ್ ಫಲ್ಗುಣ, ಶ್ರೀರಕ್ಷಾ, ಮೈತ್ರಿ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.