ಪೊನ್ನಂಪೇಟೆ, ಸೆ. 24: ಚಿಕ್ಕಮುಂಡೂರು ಶ್ರೀ ಭಗವತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಅಂದಾಜು ರೂ. 30 ಲಕ್ಷ ವೆಚ್ಚದಲ್ಲಿ ನಡೆಯುತ್ತಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ಅವರು ರೂ. 1 ಲಕ್ಷ ಸಹಾಯ ಧನವನ್ನು ನೀಡಿದ್ದಾರೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸದಾಶಿವಗೌಡ ಹಾಗೂ ಮೇಲ್ವಿಚಾರಕ ಪ್ರೇಮಾನಂದ್ ದೇವಸ್ಥಾನಕ್ಕೆ ಭೇಟಿ ನೀಡಿ ಸಹಾಯಧನದ ಡಿ.ಡಿ.ಯನ್ನು ಶ್ರೀ ಭಗವತಿ ದೇವಸ್ಥಾನದ ಅಧ್ಯಕ್ಷ ಕಳ್ಳಿಚಂಡ ಉಮೇಶ್ ಮತ್ತು ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಧರ್ಮಸ್ಥಳ ಜನಜಾಗೃತಿ ಸಮಿತಿಯ ಜಿಲ್ಲಾಧ್ಯಕ್ಷ ಬಾನಂಗಡ ಅರುಣ ಸೇರಿದಂತೆ ಅಜ್ಜಿಕುಟ್ಟಿರ ಶಾಂತಿ, ಚಿಮ್ಮಣಮಾಡ ಧರಣಿ, ಊರಿನ ಹಿರಿಯರಾದ ಕಳ್ಳಿಚಂಡ ಬೋಪುಣಿ, ದೇವಸ್ಥಾನ ಸಮಿತಿ ಸದಸ್ಯರಾದ ಐನಂಡ ಕೆ. ತಮ್ಮಯ್ಯ, ಚಿಮ್ಮಣಮಡ ಸೋಮಯ್ಯ, ಅಜ್ಜಿಕುಟ್ಟಿರ ಅಚ್ಚಯ್ಯ, ಮೊಣ್ಣಪ್ಪ, ಪೊನ್ನಪ್ಪ, ಕಳ್ಳಿಚಂಡ ಗಣಪತಿ, ಕೊರ್ಕಂಡ ಪೊನ್ನಪ್ಪ, ಮಲಚೀರ ನಿಶಾನ್, ಚಿಮ್ಮಣಮಾಡ ಮನು ಹಾಜರಿದ್ದರು.