ಕುಶಾಲನಗರ, ಸೆ. 26: ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಔಷಧಿ ಮಳಿಗೆಯಲ್ಲಿ ಅವ್ಯವಹಾರವಾಗಿರುವ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸದಸ್ಯರು ಒತ್ತಾಯಿಸಿದ್ದಾರೆ. ಸಂಘದ ಮಹಾಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು ಆಡಳಿತ ಮಂಡಳಿ ಮೂಲಕ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಸಂಘದ ನಿರ್ದೇಶಕ ಮಂಡಳಿಗೆ ಆಯ್ಕೆಯಾಗುವ ಪ್ರಕ್ರಿಯೆ ಹಾಲಿ ಬೈಲಾ ಪ್ರಕಾರ ಕುಶಾಲನಗರ, ನಂಜರಾಯಪಟ್ಟಣ ಹಾಗೂ ಸುಂಟಿಕೊಪ್ಪ ಊರುಗಳನ್ನು 3 ಬ್ಲಾಕ್‍ಗಳನ್ನಾಗಿಸಿ ಚುನಾವಣೆ ನಡೆಸಲಾಗುತ್ತಿತ್ತು, ಈ ಪ್ರಕ್ರಿಯೆಯಿಂದ ಕುಶಾಲನಗರ ಬ್ಲಾಕ್‍ನಲ್ಲಿ ಸದಸ್ಯರ ಸಂಖ್ಯೆ ಹೆಚ್ಚಾಗಿದ್ದರೂ ನಿರ್ದೇಶಕರ ಸಂಖ್ಯೆಯಲ್ಲಿ ಹೆಚ್ಚುವರಿ ನಿರ್ದೇಶಕರಿಗೆ ಆಸ್ಪದ ಕಲ್ಪಿಸಬೇಕೆಂದು ಹಿರಿಯ ಮಕ್ಕಳಿಗೆ ಎಸ್.ಎಸ್.ಎಲ್.ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪ್ರಸನ್ನ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಉಪಾಧ್ಯಕ್ಷ ಕೃಷ್ಣರಾಜು, ನಿರ್ದೇಶಕರುಗಳಾದ ಹೆಚ್.ಬಿ. ಚಂದ್ರಪ್ಪ, ಟಿ.ಕೆ. ರಘು, ನೀಲಮ್ಮ, ಎ.ಪಿ. ಸರೋಜಾ, ಟಿ.ಬಿ. ಜಗದೀಶ್, ಆರ್.ಕೆ. ಚಂದ್ರ್ರು ಮತ್ತು ಬಿ.ಎಸ್. ಚಂದ್ರಶೇಖರ್, ಬಿ.ಎಂ. ಸೋಮಯ್ಯ ಕಾರ್ಯದರ್ಶಿ ಬಿ.ಎಂ. ಪಾರ್ವತಿ ಮತ್ತಿತರರು ಇದ್ದರು.