ಮಡಿಕೇರಿ, ಸೆ. 25 : ಕೊಡಗು ಜಿಲ್ಲಾ ನಿವೃತ್ತ ಪೆÀÇಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆ ಮತ್ತು ಸ್ನೇಹ ಮಿಲನ ಕಾರ್ಯಕ್ರಮ ಅಕ್ಟೋಬರ್ 3 ರಂದು ನಗರದ ಪೆÀÇಲೀಸ್ ಸಮುದಾಯ ಭವನ ಮೈತ್ರಿಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಇಲಾಖೆಯಲ್ಲಿ ಸಾಧನೆಗೈದ ಪೆÀÇಲೀಸ್ ಅಧಿಕಾರಿಗಳನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವ ದೆಂದು ಸಂಘದ ಅಧ್ಯಕ್ಷ ಎಂ.ಎ. ಅಪ್ಪಯ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 3 ರಂದು ಬೆಳಗ್ಗೆ 11.30 ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಐಜಿಪಿ ರೂಪ ಕುಮಾರ್ ದತ್ತ, ಎಡಿಜಿಪಿ ಕಮಲ್ ಪಂತ್, ದಕ್ಷಿಣ ವಲಯದ ಐಜಿಪಿ ವಿಪÀÅಲ್ ಕುಮಾರ್, ಮಂಗಳೂರು ಪೆÀÇಲೀಸ್ ಆಯುಕ್ತ ಟಿ.ಆರ್. ಸುರೇಶ್ ಹಾಗೂ ಕೊಡಗು ಜಿಲ್ಲಾ ಪೆÀÇಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಮುಖ್ಯ ಅತಿಥಿಗಳಾಗಿ ಪಾಲ್ಗೊಲಿದ್ದಾರೆಂದು ತಿಳಿಸಿದರು.

ಸಭೆಯಲ್ಲಿ ಸಂಘದ ಚಟುವಟಿಕೆ, ಆರ್ಥಿಕ ಸ್ಥಿತಿ ಗತಿ ಮತ್ತು ಆರೋಗ್ಯ ಯೋಜನೆಯ ಬಗ್ಗೆ ಚರ್ಚಿಸಲಾಗುವದೆಂದು ಎಂ.ಎ.ಅಪ್ಪಯ್ಯ ಹೇಳಿದರು. ರಾಜ್ಯ ಸರ್ಕಾರ ಈಗಾಗಲೆ ನಿವೃತ್ತ ಪೆÀÇಲೀಸರ ಆರೋಗ್ಯ ನಿಧಿಗಾಗಿ 20 ಕೋಟಿ ರೂ.ಗಳನ್ನು ಘೋಷಣೆ ಮಾಡಿದ್ದು, ಇದರ ಫಲಾನುಭವಿಗಳ ಆಯ್ಕೆಯ ಬಗ್ಗೆಯೂ ಸಭೆಯಲ್ಲಿ ಸಮಾಲೋಚಿಸಲಾಗುವದೆಂದರು. ನಿವೃತ್ತ ಪೆÀÇಲೀಸ್ ಅಧಿಕಾರಿಗಳ ಸಮಸ್ಯೆಗಳ ಕುರಿತು ಹಿರಿಯ ಅಧಿಕಾರಿಗಳ ಗಮನ ಸೆಳೆಯ ಲಾಗುವದು. ಪೆÀÇಲೀಸ್ ಸಿಬ್ಬಂದಿಗಳ ಪ್ರತಿಭಾವÀಂತ ಮಕ್ಕಳಿಗೆ ವಿದ್ಯಾರ್ಥಿ ಪೆÇ್ರೀತ್ಸಾಹ ಧನ ವಿತರಿಸುವ ಕಾರ್ಯಕ್ರಮ ಕೂಡ ನಡೆಯಲಿದೆ. ಮಣವಟ್ಟೀರ ಪೆÀÇನ್ನಪ್ಪ ಸ್ಮರಣಾರ್ಥ ರಾಜ್ಯದ ನಿವೃತ್ತ ಪೆÀÇಲೀಸ್ ಮಹಾ ನಿರ್ದೇಶಕ ಶಂಕರ ಬಿದರಿ ಮತ್ತು ಉಡುಪಿಯ ಆಚಾರ್ಯ ಅವರು ತಮ್ಮ ತಾಯಿ ಸರಸ್ವತಿ ಹೆಸರಿನಲ್ಲಿ ನೀಡಿರುವ ದತ್ತಿನಿಧಿಯಡಿ ಈ ಬಾರಿ ಇಬ್ಬರು ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹ ಧನವನ್ನು ನೀಡಲಾಗುತ್ತದೆ ಎಂದು ಹೇಳಿದರು.

ರಾಷ್ಟ್ರಪತಿ ಪದಕ ವಿಜೇತ ಜಿಲ್ಲಾ ಪೆÀÇಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಮಂಡುವಂಡ ಕೆ.ಗಣೇಶ್, ಪಂದಿಕಂಡ ಸುಬ್ಬಯ್ಯ ನಿವೃತ್ತ ಪೆÀÇಲೀಸ್ ಅಧಿಕಾರಿಗಳಾದ ಪಿ.ಎಂ.ಪೆಮ್ಮಯ್ಯ ಹಾಗೂ ಕೆ.ಎಸ್.ಕುಮಾರ್ ಕರ್ನಿಂಗ್ ಅವರುಗಳನ್ನು ಸನ್ಮಾನಿಸ ಲಾಗುವದೆಂದು ತಿಳಿಸಿದರು.

ಸಂಘದ ಮೂಲಕ ಈ ಬಾರಿ ಗೋಣಿಕೊಪ್ಪಲು ವೃತ್ತ ನಿರೀಕ್ಷಕ ಪಿ.ಕೆ. ರಾಜು ಅವರನ್ನು ಗುರುತಿಸಿ ಸನ್ಮಾನಿಸಲಾಗುವದೆಂದರು. ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಪರಮಶಿವ, ಕಾರ್ಯದರ್ಶಿ ಅಚ್ಯುತ ನಾಯರ್, ಸಲಹೆಗಾರ ಪÀÇಣಚ್ಚ, ನಿರ್ದೇಶಕರುಗಳಾದ ಮಾದಯ್ಯ ಹಾಗೂ ಚೀಯಣ್ಣ ಉಪಸ್ಥಿತರಿದ್ದರು.