ಮಡಿಕೇರಿ, ಸೆ.25 : ಮಡಿಕೇರಿ ದಸರಾ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ 6ನೇ ವರ್ಷದ ಮಕ್ಕಳ ದಸರಾ ತಾ. 24ರಂದು (ಇಂದು) ಮಕ್ಕಳ ಸಂಭ್ರಮದೊಂದಿಗೆ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಆಯೋಜಿತವಾಗಿದೆ.

ಬೆಳಿಗ್ಗೆ 9.30 ಗಂಟೆಗೆ ಮಡಿಕೇರಿಯ ಗಾಂಧಿ ಮೈದಾನದಲ್ಲಿರುವ ಕಲಾಸಂಭ್ರಮ ವೇದಿಕೆಯಲ್ಲಿ 6ನೇ ವರ್ಷದ ಮಕ್ಕಳ ದಸರಾವನ್ನು ಚಿಣ್ಣರು ಉದ್ಘಾಟಸಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಮಡಿಕೇರಿ ದಸರಾ ಸಮಿತಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಕಾರ್ಯಾಧ್ಯಕ್ಷ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿ ಎ.ಸಿ.ದೇವಯ್ಯ, ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ರೋಟರಿ ಮಿಸ್ಟಿ ಹಿಲ್ಸ್ ನ ಗೌರವ ಕಾರ್ಯದರ್ಶಿ ಪಿ.ಎಂ. ಸಂದೀಪ್, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ, ಮಡಿಕೇರಿ ತಾಲೂಕು ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಸಂಗೀತಾ ಪ್ರಸನ್ನ, ಖಜಾಂಚಿ ಅಂಬೆಕಲ್ ನವೀನ್ ಕುಶಾಲಪ್ಪ ಪಾಲ್ಗೊಳ್ಳಲಿದ್ದಾರೆ.

ಅನಂತರ ಜಿಲ್ಲೆಯ ಮಕ್ಕಳಿಗಾಗಿ ಸಂತೆ, ಅಂಗಡಿ, ಸ್ಥಬ್ದ ಮಂಟಪ, ಚಲನವಲನವಿರುವ ಮಂಟಪ, 5 ವರ್ಷದೊಳಗಿನ ಮತ್ತು 6 ರಿಂದ 9 ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ಛದ್ಮವೇಶ ಸ್ಪರ್ಧೆ, ಕ್ಲೇ ಮಾಡೆಲ್, ಸೈನ್ಸ್ ಮಾಡೆಲ್ ಸ್ಪರ್ಧೆಗಳು ಆಯೋಜಿಸಲ್ಪಟ್ಟಿದೆ.

ಅಲ್ಲದೆ ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ಎರಡನೇ ವರ್ಷದ ಜಾನಪದ ಕ್ರೀಡೋತ್ಸವ ಕೂಡ ಈ ಬಾರಿ ಜರುಗಲಿದ್ದು, ಕಲ್ಲಾಟ, ಲಗೋರಿ, ಬಳೆಯಾಟ ಗೋಲಿಯಾಟ, ಬುಗುರಿ, ಕುಂಟೆಬಿಲ್ಲೆ, ಚೌಕಾಬಾರ, ಚನ್ನಮಣೆ ಸ್ಪರ್ಧೆಗಳು ಆಯೋಜಿತವಾಗಿದೆ.

ಮಕ್ಕಳ ದಸರಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳ ಬಯಸುವ ಮಕ್ಕಳು ಬೆಳಿಗ್ಗೆ 9.30ರೊಳಗಾಗಿ ಸ್ಥಳದಲ್ಲಿಯೇ ಹೆಸರು ನೋಂದಾಯಿಸಬಹುದು ಎಂದು ದಸರಾ ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ತಿಳಿಸಿದ್ದಾರೆ.

ಸಂಜೆ 6.30 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ. ಕೃಪಾ ಅಮರ್ ಆಳ್ವಾ ಮುಖ್ಯ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ದಸರಾ ಸಮಿತಿ ಪ್ರಮುಖರಾದ ಎಂ.ಬಿ. ದೇವಯ್ಯ, ಎಚ್.ಸಿ. ಸುಬ್ರಮಣಿ, ಸತೀಶ್ ಪೈ, ಬಿ.ಕೆ. ಅರುಣ್ ಕುಮಾರ್, ಬಿ.ಎಂ. ರಾಜೇಶ್, ಬಿ.ಎಂ. ಪ್ರಶಾಂತ್, ಕಾನೆಹಿತ್ಲು ಮೊಣ್ಣಪ್ಪ, ನಗರಸಭಾ ಸದಸ್ಯರಾದ ಅಮೀನ್ ಮೊಹಿಸಿನ್, ಮನ್ಸೂರ್, ಪೀಟರ್, ಕೆ.ಯು. ಅಬ್ದುಲ್ ರಜಾಕ್, ಕೆ.ಎಂ. ವೆಂಕಟೇಶ್, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ, ರೋಟರಿ ಮಿಸ್ಟಿ ಹಿಲ್ಸ್ ಗೌರವ ಕಾರ್ಯದರ್ಶಿ ಪಿ.ಎಂ. ಸಂದೀಪ್ ಪಾಲ್ಗೊಳ್ಳಲಿದ್ದಾರೆ.

ಸಂಜೆ ಉಡುಪಿಯ ಭಾರ್ಗವಿ ತಂಡದ ಗ್ರಾವಿಟಿ ಡಾನ್ಸ್ ಸೇರಿದಂತೆ ಆಕರ್ಷಕ ನೃತ್ಯ ಪ್ರದರ್ಶನದೊಂದಿಗೆ ಕೊಡಗು ಜಿಲ್ಲೆಯ ಪ್ರತಿಭಾವಂತ ಮಕ್ಕಳ ಕಲಾ ತಂಡಗಳಿಂದ ನೃತ್ಯ ವೈವಿಧ್ಯಗಳು ಆಯೋಜಿತವಾಗಿದೆ.