ಮಡಿಕೇರಿ, ಸೆ. 25: ದೇಶದ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಜಾಲತಾಣದಲ್ಲಿ ನಿಂದಿಸಿರುವ ಪ್ರಕರಣ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿ ಸಮೀಲ್ ಎಂಬವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.ಅಲ್ಲದೆ ಸಾಮಾಜಿಕ ಕಾರ್ಯಕರ್ತರೊಬ್ಬರು ನೀಡಿರುವ ದೂರಿನ ಮೇರೆಗೆ, ಪೊಲೀಸ್ ವಿರುದ್ಧ ಮೊಕದ್ದಮೆ ದಾಖಲಿಸುವ ಮೂಲಕ ಇಲಾಖೆಯಿಂದ ತನಿಖೆ ನಡೆಸುತ್ತಿರುವದಾಗಿ ತಿಳಿದುಬಂದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಪ್ರಕರಣ ಸಂಬಂಧ ಸಾರ್ವಜನಿಕ ವಲಯದಲ್ಲಿ ಸಿಬ್ಬಂದಿ ವಿರುದ್ಧ ಜಿಲ್ಲಾ ಪೊಲೀಸ್ ಅಧೀಕ್ಷಕರು ಕ್ರಮ ಜರುಗಿಸಿ ಆದೇಶಿಸಿದ್ದಾರೆ.

ಈ ಸಂಬಂಧ ಆರೋಪಕ್ಕೆ ಒಳಗಾಗಿರುವ ಪೊಲೀಸ್ ಸಿಬ್ಬಂದಿ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಏಕವಚನದಲ್ಲಿ ಪದ ಪ್ರಯೋಗದೊಂದಿಗೆ ಮಾಹಿತಿ ರವಾನಿಸಿದ್ದ ಬಗ್ಗೆ ಮಕ್ಕಂದೂರುವಿನ ಬಿ.ಎಸ್. ನಂದಕುಮಾರ್ ಕಳೆದ ತಾ. 12ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಅವರಿಗೆ ದೂರು ಸಲ್ಲಿಸಿದ್ದರು. ಆ ಮೇರೆಗೆ ಎಸ್ಪಿ ಕ್ರಮ ಕೈಗೊಂಡಿದ್ದಾರೆ.