ವೀರಾಜಪೇಟೆ, ಸೆ. 25: ಗ್ರಾ.ಪಂ. ವ್ಯಾಪ್ತಿಯಲ್ಲಿ ಮನೆ ಅಥವಾ ಯಾವದೇ ಕಾಮಗಾರಿ ನಿರ್ವಹಿಸಲು ಖಾಸಗಿ ಯವರಿಗೆ ಅಧಿಕೃತ ಪರವಾನಗಿ ಬೇಕು, ಭೂ ಪರಿವರ್ತನೆಯೂ ಆಗಬೇಕು. ಈ ಎಲ್ಲಾ ಕಾನೂನು ಬಗ್ಗೆ ಬೂದಿಮಾಳದಲ್ಲಿ ಚರ್ಚ್ ನಿರ್ಮಾಣಕ್ಕೆ ಮುಂದಾದ ಜಾನ್ ಡಿಸೋಜ ಅವರಿಗೆ ಸೂಕ್ತ ರೀತಿಯಲ್ಲಿ ತಿಳಿಸಬೇಕಿತ್ತು. ಆದರೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸತೀಶ್ ಕುಮಾರ್ ಅದನ್ನು ತಿಳಿಸದೆ ಬೇಜವಾಬ್ದಾರಿಯಿಂದ ನಡೆದುಕೊಂಡಿ ದ್ದಾರೆ ಎಂದು ಜಿ.ಪಂ. ಸದಸ್ಯ ಅಚ್ಚಪಂಡ ಮಹೇಶ್ ಅಭಿವೃದ್ಧಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಆರ್ಜಿ ಮಹಿಳಾ ಸಮಾಜದಲ್ಲಿ ಇಂದು ನಡೆದ ಬೇಟೋಳಿ ಗ್ರಾ.ಪಂ. ಗ್ರಾಮ ಸಭೆಯು ಅಧ್ಯಕ್ಷೆ ಬಿ.ಬಿ. ಚೋಂದಮ್ಮ ಅಧ್ಯಕ್ಷತೆಯಲ್ಲಿ ನಡೆದು, ಅಭಿವೃದ್ಧಿ ಅಧಿಕಾರಿ ಸತೀಶ್ ಕುಮಾರ್ ವಿರುದ್ಧ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂಬಂಧ ಮಾತನಾಡಿದ ಗ್ರಾಮಸ್ಥರಾದ ಬೊಳ್ಯಪಂಡ ಬೋಪಣ್ಣ, ತಾನು ಈ ವಿಚಾರವಾಗಿ ಮಾಹಿತಿ ಹಕ್ಕಿನಲ್ಲಿ ಗ್ರಾ.ಪಂ. ನಡಾವಳಿಯ ಪ್ರತಿ ಪಡೆದಿದ್ದು. ಅಲ್ಲಿ ಚರ್ಚ್ ನಿರ್ಮಾಣಕ್ಕೆ ಅನುಮತಿ ಪತ್ರ ಕೋರಿ ಅರ್ಜಿ ಸಲ್ಲಿಸಿದ್ದರೂ ಕಾರಣಾಂತರದಿಂದ ಗ್ರಾ.ಪಂ. ಅನುಮತಿ ನೀಡಿಲ್ಲ. ಹೀಗಿರುವಾಗ ಜಾನ್ ಡಿಸೋಜ, ಅನಧಿಕೃತವಾಗಿ ಏಸು ಪ್ರತಿಮೆ ಸ್ಥಾಪಿಸಿದಾಗ ಅದನ್ನು ಗ್ರಾ ಪಂ ತೆರವು ಮಾಡಲಿಲ್ಲ. ಗ್ರಾ ಪಂ ಸಾಮಾನ್ಯ ಸಭೆಯಲ್ಲಿ ಉಪಾದ್ಯಕ್ಷರು ಮತ್ತು ಸದಸ್ಯರಲ್ಲಿ ಈ ಸಂಬಂಧದಲ್ಲಿ ಗೊಂದಲ ಮೂಡು ವಂತಾಯಿತು ಎಂದರು.

ಉಪಾಧ್ಯಕ್ಷ ವಸಂತ ಕಟ್ಟಿ ಸಮಾಜಾಯಿಷಿಕೆ ನೀಡಿ ತಾ ಪಂ ಕಾರ್ಯನಿರ್ವಹಣಾಧಿಕಾರಿ ನೀಡಿದ ತೆರವು ಪತ್ರ ಆದೇಶದ ನಿ¨ಂಧನೆಗಳು ನಮಗೆ ಸಂಬಂಧಿಸಿದ್ದಲ್ಲ. ಗ್ರಾ ಪಂ ಗೆ ಅರ್ಜಿಗಳು ಬಂದಾಗ ಗ್ರಾ ಪಂ ಸಾಮಾನ್ಯ ಸಭೆಯಲ್ಲಿ ಆ ಕುರಿತು ಚರ್ಚೆ ಆಗಿದೆ ಎಂದರು.

ಸ್ಥಳೀಯರಾದ ಪಟ್ರಪಂಡ ರಘು ನಾಣಯ್ಯ ಮಾತನಾಡಿ, ನಿಯಮದಂತೆ ಪ್ರತಿ ಕಾಮಗಾರಿಗೂ ಗ್ರಾ.ಪಂ. ಅನುಮತಿ ಆಗತ್ಯ. ಆದರೆ ಇಲ್ಲಿ ಅದನ್ನು ಪಾಲಿಸದೆ ಹೇಗೆ ಚರ್ಚ್ ನಿರ್ಮಾಣ ಮಾಡಲಾಯಿತು, ಎಂದಾಗ ಅಭಿವೃದ್ದಿ ಅಧಿಕಾರಿ ಸತೀಶ್ ಕುಮಾರ್, ಮುಂದೆ ಸಕ್ರಮ ಮಾಡಲು ಅವಕಾಶ ಇದೆ ಎಂದರು. ರಘುರವರು ನಾನು ನಿಯಮ ಪಾಲಿಸದೆ, ರಸ್ತೆಯಲ್ಲಿ ಮನೆ ಕಟ್ಟಿದರೆ ಅದನ್ನು ಸಕ್ರಮ ಮಾಡುತ್ತೀರಾ ಎಂದು ಪ್ರಶ್ನಿಸಿದರು.

ಚರ್ಚೆ ಕುರಿತು ಮಾತನಾಡಿದ ನೋಡಲ್ ಅಧಿಕಾರಿ ವೆಂಕಟೇಶ್, ಈ ವಿಚಾರದಲ್ಲಿ ಅಭಿವೃದ್ಧಿ ಅಧಿಕಾರಿ ಸೂಕ್ತ ರೀತಿ ನಡೆದುಕೊಂಡಿಲ್ಲ ಇದರಿಂದ ಇಲ್ಲಿ ಅಭಿವೃದ್ದಿ ಅಧಿಕಾರಿಯ ತಪ್ಪು ಕಾಣಿಸುತ್ತಿದೆ, ಅವರು ಆಡಳಿತ ಮಂಡಳಿಯವರಿಗೂ ನಿಯಮಗಳನ್ನು ತಿಳಿಸಿಕೊಡುವ ಕೆಲಸ ಮಾಡಬೇಕು. ಗ್ರಾಮದಲ್ಲಿ ಎಲ್ಲಾ ಕೆಲಸÀಕ್ಕೆ ಗ್ರಾ ಪಂ ಅನುಮತಿ ಬೇಕೆ ಬೇಕು, ಆದ್ದರಿಂದ ಯಾವ ಗೊಂದಲವಿಲ್ಲದೆ ಸೂಕ್ತ ರೀತಿ ಕರ್ತವ್ಯ ನಿರ್ವಹಿಸಬೇಕು ಎಂದರು.

ಗ್ರಾಮದ ರಸ್ತೆ ಅದರ ದುಸ್ಥಿತಿ ಬಗ್ಗೆ ಪಟ್ರಪಂಡ ಶೋಭಾ ಅವರು ಮಾತನಾಡಿ ಗ್ರಾಮದ ರಸ್ತೆಗೆ ಚರಂಡಿ ಇಲ್ಲ, ರಸ್ತೆ ಬದಿಗೆ ಬೇಲಿ ಹಾಕುತ್ತಾರೆ. ರಸ್ತೆ ಅಂಚಿನ ಕಾಡು ಕಡಿಯದರಿಂದ ವಾಹನ ಸಂಚಾರ ಹಾಗೂ ಜನ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದರು. ಗ್ರಾ.ಪಂ. ಉಪಾಧ್ಯಕ್ಷ ವಸಂತ ಕಟ್ಟಿ ಅವರು ಗ್ರಾ.ಪಂ.ಯಿಂದ ರಸ್ತೆ ಅಂಚಿನ ಕಾಡು ತೆರವಿಗೆ ಆಗುತ್ತಿರುವ ತೊಂದರೆಯನ್ನು ವಿವರವಾಗಿ ಸಭೆಯ ಮುಂದಿಟ್ಟರು.

ಸಭೆಯಲ್ಲಿ ತಾ.ಪಂ. ಸದಸ್ಯ ಬಿ.ಎಂ. ಗಣೇಶ್, ಸೆಸ್ಕ್ ಸಹಾಯಕ ಅಭಿಯಂತರÀ ಶಿವಾನಂದ ಪಾಟಿಲ್, ವಿ.ಪೇ ಅರಣ್ಯ ಇಲಾಖೆಯ ಸಿದ್ದಾರ್ಥ, ಮಾಕುಟ್ಟ ಅರಣ್ಯಧಿಕಾರಿ ಹನೀಫ್, ಕಂದಾಯ ಪರಿವೀಕ್ಷಕ ಪಳಂಗಪ್ಪ, ನೀರು ಸರಬರಾಜು ಇಲಾಖೆಯ ಅಭಿಯಂತರ ಸುನಿಲ್, ಉದ್ಯೋಗ ಖಾತ್ರಿ ಸಮನ್ವಯಧಿಕಾರಿ ಸತೀಶ್, ಎ.ಎಸ್.ಐ. ಮಾದಪ್ಪ, ಗ್ರಾ.ಪಂ. ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.