ಮಡಿಕೇರಿ, ಸೆ. 25: ಮಡಿಕೇರಿ ದಸರಾ ಜನೋತ್ಸವದ ಅಂಗವಾಗಿ ಸಾಂಸ್ಕøತಿಕ ಸಮಿತಿ ವತಿಯಿಂದ ಗಾಂಧಿಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ತಾ. 24ರಂದು ಮಹಿಳಾ ದಸರಾ ಹಿನ್ನೆಲೆಯಲ್ಲಿ ಮಹಿಳೆಯ ರಿಂದಲೇ ಸಾಂಸ್ಕøತಿಕ ವೈವಿಧ್ಯಮಯ ಕಾರ್ಯಕ್ರಮ ಜರುಗಿತು.ನಾಯರ್ಸ್ ಸರ್ವೀಸ್ ಸೊಸೈಟಿ ವತಿಯಿಂದ ತಿರುವಾದಿರ ನೃತ್ಯ, ಮಡಿಕೇರಿಯ ಸ್ಪಂದನ ಮಹಿಳಾ ತಂಡದಿಂದ ನೃತ್ಯ ವೈವಿಧ್ಯ, ಧನ್ಯಶ್ರೀ ಮಹಿಳಾ ಸಂಘದಿಂದ ಸಮೂಹನೃತ್ಯ, ಕೊಡಗು ಗೌಡ ಮಹಿಳಾ ಒಕ್ಕೂಟದಿಂದ ನೃತ್ಯ ವೈವಿಧ್ಯ, ಬಂಟರ ಮಹಿಳಾ ಸಂಘದಿಂದ ನೃತ್ಯ ವೈವಿಧ್ಯ, ನೆಲ್ಲಕ್ಕಿ ಯುವತಿ ಮಂಡಳಿಯವರಿಂದ ಜನಪದ ವೈವಿಧ್ಯ, ಗಾಯಕಿ ಡಾ. ಶಮಿತಾ ಮಲ್ನಾಡ್ ತಂಡ ಶಮಲೈವ್ ಇನ್ ಕನ್ಸರ್ಟ್ ಕಾರ್ಯಕ್ರಮ ನಡೆಯಿತು.ಇಂದಿನ ದಸರಾ ಸಂಜೆಇಂದಿನ ದಸರಾ ಸಂಜೆಯ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲಾ ಮಕ್ಕಳಿಂದ ವಚನ ನೃತ್ಯ, ಮಡಿಕೇರಿಯ ಕಿಡ್ಸ್ ಪ್ಯಾರಡೈಸ್ ಚಿಣ್ಣರಿಂದ ನೃತ್ಯ, ಮಡಿಕೇರಿ ಲಿಟಲ್ ಫ್ಲವರ್ ತಂಡದಿಂದ ರಾಮಾಯಣ ನೃತ್ಯ ರೂಪಕ- ಉಡುಪಿಯ ಭಾರ್ಗವಿ ಮತ್ತು ತಂಡದಿಂದ ನೃತ್ಯ ವೈಭವ ನಡೆಯಲಿದೆ.