ಸುಂಟಿಕೊಪ್ಪ, sಸೆ. 25: ಗದ್ದೆಹಳ್ಳದ ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಇಲಾಖೆ ವತಿಯಿಂದ ನೀಡುತ್ತೀರುವ ಶಾಲಾ ಸಮವಸ್ತ್ರವನ್ನು ಗ್ರಾ.ಪಂ. ಉಪಾಧ್ಯಕ್ಷ ಪಿ.ಆರ್.ಸುಕುಮಾರ್ ಹಾಗೂ ತಾ.ಪಂ.ಸದಸ್ಯೆ ಓಡಿಯಪ್ಪನ ವಿಮಾಲಾವತಿ ವಿತರಿಸಿದರು.

ಈ ಸಂದರ್ಭ ಗದ್ದೆಹಳ್ಳ ಸರಕಾರಿ ಮಾದರಿ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ರೇಷ್ಮ, ದೇವರಾಜು ಅರಸು ಹಿಂದುಳಿದ ವರ್ಗಗಳ ಹಾಸ್ಟೇಲ್ ಮೇಲ್ವಿಚಾರಕ ಚಿಣ್ಣಪ್ಪ ಹಾಗೂ ಸಹಾಯಕ ಮಲ್ಲಿಕಾರ್ಜುನ, ಅಡುಗೆ ಸಹಾಯಕಿ ವಸಂತಿ ಹಾಗೂ ನಿಲಯದ ಬಾಲಕರು ಉಪಸ್ಥಿತರಿದ್ದರು.

ಹಾಸ್ಟೇಲ್ ವಿದ್ಯಾರ್ಥಿ ಪ್ರಾರ್ಥಿಸಿ, ಹಾಸ್ಟೇಲ್ ಮೇಲ್ವಿಚಾರಕರಾದ ಚಿಣ್ಣಪ್ಪ ಸ್ವಾಗತಿಸಿ, ವಂದಿಸಿದರು.