ಕೂಡಿಗೆ, ಸೆ. 25: ತೊರೆನೂರು ಗ್ರಾ.ಪಂ ವ್ಯಾಪ್ತಿಯ ಸಿದ್ದಲಿಂಗಪುರ ಗ್ರಾಮದ ನಾಪಂಡ ಭೋಜಮ್ಮ ಮತ್ತು ಕುಟುಂಬದವರು ಆಯೋಜಿಸಿಕೊಂಡು ಬರುತ್ತಿರುವ ಐದನೇ ವರ್ಷದ ನವರಾತ್ರಿಯ ಕಾರ್ಯಕ್ರಮ ದೊಂದಿಗೆ ತಾ.30 ರಂದು ಪುಣ್ಯಾಹ, ಮಹಾಸಂಕಲ್ಪ, ಗಣಹೋಮ, ದುರ್ಗಾಹೋಮ, ದೀಪನಮಸ್ಥಾರ, ಭಗವತಿ ದುರ್ಗಾ ಹೋಮ, ಕುಮಾರಿ ದುರ್ಗಾಹೋಮ, ಅಂಬಿಕಾ ದುರ್ಗಾ ಹೋಮ, ಮಹಿಷ ಮರ್ಧಿನಿ ದುರ್ಗಾ ಹೋಮ, ಚಂಡಿಕಾ ದುರ್ಗಾ ಹೋಮ, ಸರಸ್ವತಿ ದುರ್ಗಾ ಹೋಮ, ವಾಗೀಶ್ವರಿ ದುರ್ಗಾ ಹೋಮ ಹಾಗೂ ವಿಶೇಷ ಮಹಾಶತ ಚಂಡಿಕಾಯಾಗ, ಅನ್ನಸಂತರ್ಪಣೆ ನಡೆಯಲಿವೆ.
ಮಹಾ ಶತಚಂಡಿಕಾಯಾಗವು ಬೆಳಿಗ್ಗೆ 5.30 ಗಂಟೆಯಿಂದ ಪ್ರಾರಂಭಗೊಳ್ಳಲಿದೆ. ಅ. 3 ರಂದು ವಿಶೇಷ ಶಾಂತಿ ಪೂಜೆ ನಡೆಯಲಿದೆ ಎಂದು ಕುಟುಂಬದ ಪ್ರಕಟಣೆ ತಿಳಿಸಿದೆ.
ದೊಡ್ಡಮ್ಮತಾಯಿ ದೇವಾಲಯದಲ್ಲಿ ನವರಾತ್ರಿ ಪೂಜೆ
* ಕೂಡಿಗೆ: ಕೂಡುಮಂಗಳೂರು ಗ್ರಾ.ಪಂ.ವ್ಯಾಪ್ತಿಯ ದೊಡ್ಡಮ್ಮತಾಯಿ ಸೇವಾಸಮಿತಿಯ ವತಿಯಿಂದ ನವರಾತ್ರಿಯ ಪೂಜೋತ್ಸವವು ದೇವಾಲಯ ಆವರಣದಲ್ಲಿ ನಡೆಯಿತ್ತು. ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದು, ಬೆಳ್ಳಿಗೆನಿಂದಲೇ ದೇವಿಗೆ ವಿಶೇಷ ಪೂಜಾ ಹೋಮ ಹವನಗಳು ನಡೆದವು. ಪೂಜೆಗೆ ಎರಡು ಗ್ರಾಮಗಳ ಸುತ್ತ-ಮುತ್ತಲಿನ ಸಾವಿರಾರು ಭಕ್ತಾದಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಜೊತೆಯಲ್ಲಿ ಸುಗಮ ಸಂಗೀತ ಕಾರ್ಯಕ್ರಮವು ನಡೆದವು. ಭಕ್ತಾದಿಗಳಿಗೆ ಅನ್ನದಾನ ನೆರೆವೇರಿತು. ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷಿಣಿ ಗೌರಿ, ಮಂಜುಳ ಸೇರಿದಂತೆ ಸಮಿತಿಯ ನಿರ್ದೇಶಕರು ಹಾಜರಿದ್ದರು.