ಮಡಿಕೇರಿ, ಸೆ. 26: ನಗರದ ಶ್ರೀ ಕೋದಂಡರಾಮ ದೇವಾಲಯ ದಸರಾ ಮಂಟಪ ಸಮಿತಿ 43ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗುತ್ತಿದೆ ಎಂದು ಸಮಿತಿಯ ಅಧ್ಯಕ್ಷರುಗಳಾದ ಹೆಚ್.ವಿ. ಸುಧಾಕರ್ ಹಾಗೂ ಎಸ್. ಭರತ್ ತಿಳಿಸಿದ್ದಾರೆ.
ಎರಡು ಟ್ರ್ಯಾಕ್ಟರ್ಗಳನ್ನು ಬಳಸಲಾಗುತ್ತಿದ್ದು, ದಿಂಡಿಗಲ್ನ ಅಂಥೋಣಿ ಲೈಟಿಂಗ್ ಬೋರ್ಡ್ ಅಳವಡಿಸಲಿದ್ದಾರೆ. ಧ್ವನಿವರ್ಧಕ ಹಾಗೂ ಸ್ಟುಡಿಯೋ ಸೆಟ್ಟಿಂಗ್ಸ್ನ್ನು ಮಡಿಕೇರಿಯ ರಮೇಶ್ ಸೌಂಡ್ಸ್ ಅಂಡ್ ಲೈಟ್ನವರು ವ್ಯವಸ್ಥೆ ಮಾಡಲಿದ್ದಾರೆ.
ವಿಶ್ವ, ಸುರೇಶ್ ಮತ್ತು ಕಾಳಪ್ಪ ಪ್ಲಾಟ್ಫಾರಂ ನಿರ್ಮಿಸಲಿದ್ದು, 18 ಕಲಾಕೃತಿಗಳನ್ನು ಬಳಸಲಾಗುತ್ತಿದೆ. ಕಲಾಕೃತಿಗಳನ್ನು ಉದುಬೂರಿನ ಮಹದೇವಪ್ಪ ಅಂಡ್ ಸನ್ಸ್ ತಯಾರಿಸಲಿದ್ದು, ಟ್ರ್ಯಾಕ್ಟರ್ ಸೆಟ್ಟಿಂಗ್ಸ್ ಹಾಗೂ ಕಲಾಕೃತಿಗಳಿಗೆ ಚಲನವಲನ ವ್ಯವಸ್ಥೆಯನ್ನು ಮಂಜು, ರವೀಂದ್ರ ಮತ್ತು ತಂಡದವರು ಮಾಡಲಿದ್ದಾರೆ.
ಬೆಂಗಳೂರಿನ ಪ್ರಸಾದ್ ತಂಡ ಡಬಲ್ ಕಲರ್ ಸ್ಟಾರ್ಕ್ ಅಂಡ್ ಕಲರ್ ಬಾಂಬ್ ಎಫೆಕ್ಟ್ ಒದಗಿಸಲಿದ್ದು, ರೂ. 13 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದೆ. ಜನಾಕರ್ಷಣೆ ಯೊಂದಿಗೆ ಪ್ರಥಮ ಬಹುಮಾನಕ್ಕೆ ಪೈಪೋಟಿ ನೀಡುವ ದಾಗಿ ಭರತ್ ಹಾಗೂ ಸುಧಾಕರ್ ಮಾಹಿತಿಯಿತ್ತರು.
- ಉಜ್ವಲ್ ರಂಜಿತ್