ಸೋಮವಾರಪೇಟೆ, ಸೆ. 26: ಸಮೀಪದ ಗೋಣಿಮರೂರು ಗ್ರಾಮದ ಯಡುಂಡೆಯಲ್ಲಿ ಶ್ರೀ ಸಾಯಿ ಆರ್ಗನಿಕ್ ವತಿಯಿಂದ ಕಿಸಾನ್ ಬಯೋಗೋಲ್ಡ್ ಯೋಜನೆಯಡಿ ಶುಂಠಿ, ಕಾಫಿ ಮತ್ತು ಅಡಿಕೆ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮ ನಡೆಯಿತು.

ಸಾವಯವ ಯೋಜನೆಯಡಿ ಕೃಷಿ ಕೈಗೊಂಡಿರುವ ಯಡುಂಡೆ ಗ್ರಾಮದ ನಾಗೇಶ್ (ರಮೇಶ್) ಅವರ ಗದ್ದೆಯಲ್ಲಿ ಆಯೋಜಿಸಲಾಗಿದ್ದ ಕ್ಷೇತ್ರೋತ್ಸವದಲ್ಲಿ ಸುತ್ತಮುತ್ತಲಿನ ಕೃಷಿಕರು ಭಾಗವಹಿಸಿ ಮಾಹಿತಿ ಪಡೆದುಕೊಂಡರು.

ಸಾಯಿ ಆರ್ಗನಿಕ್ ಸಂಸ್ಥೆಯ ವ್ಯವಸ್ಥಾಪಕ ಶಾಂತೇಗೌಡ, ವಲಯಾಧಿಕಾರಿ ಕಾಂತರಾಜು ಕೃಷಿಕರಿಗೆ ಸಾವಯವ ಕೃಷಿಯ ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು. ಕೃಷಿಕರಾದ ಗಗನ್, ಸಂತೋಷ್, ಗಂಗಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.