ಮಡಿಕೇರಿ, ಸೆ. 27: ಐತಿಹಾಸಿಕ ಮಡಿಕೇರಿ ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸರ್ವ ಸಿದ್ಧತೆಗಳು ನಡೆಯುತ್ತಿದ್ದು, ವಿಜಯದಶಮಿಯ ಶೋಭಾಯಾತ್ರೆಗೆ ಮೆರುಗು ನೀಡುವ ದಶಮಂಟಪಗಳಿಗೆ ತಲಾ 2 ಲಕ್ಷ ರೂ. ಮತ್ತು ಶಕ್ತಿ ದೇವತೆಗಳ ನಾಲ್ಕು ಕರಗಗಳಿಗೆ ತಲಾ 1 ಲಕ್ಷ ರೂ. ಅನುದಾನವನ್ನು ನೀಡಲಾಗುವದೆಂದು ಮಡಿಕೇರಿ ನಗರ ದಸರಾ ಸಮಿತಿ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ದಸರಾ ಸಮಿತಿ ಕಾರ್ಯಾಧ್ಯಕ್ಷರಾದ ಮಹೇಶ್ ಜೈನಿ, ಸರಕಾರದಿಂದ ಲಭ್ಯ 50 ಲಕ್ಷ ಅನುದಾನ ಮತ್ತು ದಾನಿಗಳು ನೀಡಿದ 20 ಲಕ್ಷ ರೂ. ಸೇರಿದಂತೆ ಒಟ್ಟು 70 ಲಕ್ಷಕ್ಕೆ ಸೀಮಿತವಾಗಿ ಈ ನಿರ್ಧಾರವನ್ನು ತಳೆಯಲಾಗಿದೆ ಎಂದು ತಿಳಿಸಿದರು.

ಆಯುಧಪÀÇಜಾ ಸಮಾರಂಭ

ಆಯುಧ ಪÀÇಜಾ ಉತ್ಸವದ ದಿನವಾದ ತಾ. 29 ರಂದು ಸಂಜೆ 6.30 ಗಂಟೆಗೆ ಗಾಂಧಿ ಮೈದಾನದಲ್ಲಿ ನಡೆಯುವÀ ಸಮಾರಂಭವನ್ನು ನಗರ ದಸರಾ ಸಮಿತಿಯ ಉಪಾಧ್ಯಕ್ಷರು ಹಾಗೂ ನಗರಸಭಾ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಉದ್ಘಾಟಿಸಲಿದ್ದು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಾಜೇಂದ್ರ ಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ, ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ನಗರಸಭಾ ಸದಸ್ಯರಾದ ಹೆಚ್.ಎಂ. ನಂದ ಕುಮಾರ್, ಕೆ.ಎಂ. ಗಣೇಶ್, ದಶಮಂಟಪ ಸಮಿತಿ ಅಧ್ಯಕ್ಷ ಸತೀಶ್ ಧರ್ಮಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮಣಜೂರು ಮಂಜುನಾಥ್ ಪಾಲ್ಗೊಳ್ಳಲಿದ್ದಾರೆ ಎಂದು ಮಹೇಶ್ ಜೈನಿ ತಿಳಿಸಿದರು.

ಅಂದು ರಾತ್ರಿ ನಡೆಯುವ ಆಯುಧಪೂಜೆಯ

(ಮೊದಲ ಪುಟದಿಂದ) ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿಗಳಾದ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ವಹಿಸಲಿದ್ದು, ಜಿಲ್ಲಾ ಪತ್ರಕರ್ತರ ಸಂಘÀದ ಅಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತರಾದ ಜಿ. ಚಿದ್ವಿಲಾಸ್, ಸಮಾಜ ಸೇವಕರಾದ ಹರೀಶ್ ಬೋಪಣ್ಣ, ದಸರಾ ಸಮಿತಿ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಕಾರ್ಯಾಧ್ಯಕ್ಷ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿ ಎ.ಸಿ. ದೇವಯ್ಯ, ಖಜಾಂಚಿ ಸಂಗೀತ ಪ್ರಸನ್ನ, ಪೌರಾಯುಕ್ತರಾದ ಶುಭ, ಜಿಪಂ ಮಾಜಿ ಸದಸ್ಯರಾದ ರವಿ ಕುಶಾಲಪ್ಪ ಪಾಲ್ಗೊಳ್ಳಲಿದ್ದಾರೆ ಎಂದರು.

ವಿಜಯದಶಮಿ ಸಂಭ್ರಮ

ವಿಜಯದಶಮಿಯ ದಿನವಾದ ತಾ. 30 ರಂದು ಸಂಜೆ 6.30 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತರಾದ ಜಿ. ರಾಜೇಂದ್ರ ವಹಿಸಲಿದ್ದು, ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಸಮಾರಂಭ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಪಂ ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶಿವು ಮಾದಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಬಿ.ಬಿ. ಭಾರತೀಶ್, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸಂಕೇತ್ ಪೂವಯ್ಯ, ದಸರಾ ಸಮಿತಿ ಅಧ್ಯಕ್ಷರಾದ ಕಾವೇರಮ್ಮ ಸೊಮಣ್ಣ, ಕಾರ್ಯಾಧ್ಯಕ್ಷರಾದ ಮಹೇಶ್ ಜೈನಿ, ಪ್ರÀಧಾನ ಕಾರ್ಯದರ್ಶಿ ಎ.ಸಿ. ದೇವಯ್ಯ, ಖಜಾಂಚಿ ಸಂಗೀತ ಪ್ರಸನ್ನ ಪಾಲ್ಗೊಳ್ಳಲಿದ್ದಾರೆ.

ಅಂದು ರಾತ್ರಿ 10 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮವನ್ನು ಆಹಾರ ಇಲಾಖಾ ಸಚಿವರಾದ ಯು.ಟಿ. ಖಾದರ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್ ವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್. ಸೀತಾರಾಂ, ವಿಧಾನ ಪರಿಷತ್ತಿನ ಸಭಾಪತಿಗಳಾದ ಡಿ.ಹೆಚ್. ಶಂಕರಮೂರ್ತಿ, ಶಾಸಕರಾದ ಕೆ.ಜಿ. ಬೋಪಯ್ಯ ಎಂಎಲ್‍ಸಿಗಳಾದ ಗಣೇಶ್ ಕಾರ್ಣಿಕ್, ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ, ಸಮಸದ ಪ್ರತಾಪ ಸಿಂಹ, ಜಿಪಂ ಅಧ್ಯಕ್ಷರಾದ ಬಿ.ಎ. ಹರೀಶ್ ಸೇರಿದಂತೆ ಹಲ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಹೇಶ್ ಜೈನಿ ತಿಳಿಸಿದರು.

ಉಷಾ ಕೋಕಿಲ ರಸಮಂಜರಿ

ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಎ.ಸಿ. ದೇವಯ್ಯ ಮಾತನಾಡಿ, ವಿಜಯದಶಮಿಯಂದು ರಾತ್ರಿ ಉಷಾ ಕೋಕಿಲ ಮತ್ತು ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ದಶಮಂಟಪ ಶೋಭಾ ಯಾತ್ರೆಯಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ 24 ಗ್ರಾಂ ಚಿನ್ನದ ನಾಣ್ಯ, ದ್ವಿತೀಯ ಸ್ಥಾನ ಪಡೆಯುವ ಮಂಟಪಕ್ಕೆ 16 ಗ್ರಾಂ ಚಿನ್ನ ಮತ್ತು ತೃತೀಯ ಸ್ಥಾನ ಪಡೆಯುವ ಮಂಟಪಕ್ಕೆ 12 ಗ್ರಾಂ ಚಿನ್ನದ ನಾಣ್ಯವನ್ನು ಬಹುಮಾನವಾಗಿ ನೀಡಲಾಗುತ್ತದೆ. ಉಳಿದ ಮಂಟಪಗಳಿಗೆ ಹಾಗೂ ನಾಲ್ಕು ಕರಗಗಳಿಗೆ ಬೆಳ್ಳಿಯ ಪೂಜಾ ಸಾಮಗ್ರಿಗಳನ್ನು ವಿತರಿಸಲಾಗುವ ದೆಂದು ಮಾಹಿತಿ ನೀಡಿದರು.

ದಶಮಂಟಪಗಳು ಸಾಗುವ ಹಾದಿಯ ತಾತ್ಕಾಲಿಕ ದುರಸ್ತಿ ಕಾರ್ಯಗಳನ್ನು ಈಗಾಗಲೇ ನಡೆಸಲಾಗಿದ್ದು, ಮಳೆಯಿಂದಾಗಿ ದುರಸ್ತಿ ಕಾರ್ಯಕ್ಕೆ ಒಂದಷ್ಟು ತೊಡಕುಂಟಾಗಿರುವದಾಗಿ ತಿಳಿಸಿದರು.

ಹೆಚ್ಚುವರಿ ಅನುದಾನದ ನಿರೀಕ್ಷೆ

ದಸರಾ ಸಮಿತಿ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಮಾತನಾಡಿ, 50 ಲಕ್ಷ ರೂ. ಅನುದಾನ ಸರ್ಕಾರದಿಂದ ಲಭ್ಯವಾಗಿದ್ದು, ಹೆಚ್ಚುವರಿ 10 ಲಕ್ಷ ರೂ. ಅನುದಾನ ದೊರಕುವ ವಿಶ್ವಾಸವಿದೆ ಎಂದು ತಿಳಿಸಿದರು.

ಪತ್ರಕರ್ತರ ಪ್ರಶ್ನೆಯೊಂದಕ್ಕೆ ಅಧ್ಯಕ್ಷರು ಮತ್ತು ಕಾರ್ಯಾಧ್ಯಕ್ಷರು ಉತ್ತರಿಸಿ, ದಸರಾ ಸಾಂಸ್ಕøತಿಕ ಸಮಿತಿಗೆ ತಾವು ಸ್ಥಳೀಯ ಕಲಾವಿದರಿಗೆ ಭತ್ಯೆ ನೀಡುವದು ಬೇಡವೆಂದು ತಿಳಿಸಿಲ್ಲ. ಪ್ರಸಕ್ತ ಸಾಲಿನಲ್ಲಿ ಅನುದಾನ ಕಡಿಮೆ ಇರುವದರಿಂದ ಲಭ್ಯ ಅನುದಾನದ ಮಿತಿಯಲ್ಲಿ ಕಾರ್ಯಕ್ರಮ ನಡೆಸುವಂತೆ ಮಾತ್ರ ಸೂಚಿಸಿರುವದಾಗಿ ಸ್ಪಷ್ಟಪಡಿಸಿದರು.

ಜಿಎಸ್‍ಟಿಯಿಂದ ವೆಚ್ಚ ಹೆಚ್ಚು

ದಸರಾ ಉತ್ಸವದ ಕಾರ್ಯಕ್ರಮಗಳಿಗೆ ಪೂರಕವಾಗಿ ಗಾಂಧಿ ಮೈದಾನದಲ್ಲಿ ಪೆಂಡಾಲ್ ಅಳವಡಿಕೆ, ಲೈಟಿಂಗ್ ಮತ್ತು ಆಸನಗಳ ವ್ಯವಸ್ಥೆಗೆ ಈ ಬಾರಿ ಜಿಎಸ್‍ಟಿ ಹಿನ್ನೆಲೆಯಲ್ಲಿ 30.50 ಲಕ್ಷ ಪಾವತಿಸಬೇಕಾಗಿದೆ. ಕಳೆದ ಬಾರಿ ಈ ವೆಚ್ಚ 25 ರಿಂದ 26 ಲಕ್ಷಗಳಿತ್ತು ಎಂದು ಪ್ರಧಾನ ಕಾರ್ಯದರ್ಶಿ ಎ.ಸಿ. ದೇವಯ್ಯ ಅವರು ಇದೇ ಸಂದರ್ಭ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ದಸರಾ ಸಮಿತಿಯ ಖಜಾಂಚಿ ಸಂಗೀತ ಪ್ರಸನ್ನ ಮತ್ತು ಅರುಣ್ ಕುಮಾರ್ ಉಪಸ್ಥಿತರಿದ್ದರು.