ಮಡಿಕೇರಿ, ಸೆ. 27: ಭಾರತೀಯ ಪುರಾತತ್ವ ಇಲಾಖೆ ವತಿಯಿಂದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ಯುನೋಸ್ಕೊದಿಂದ ಆಯ್ಕೆಯಾಗಿರುವ ರಾಷ್ಟ್ರದ ಪ್ರಸಿದ್ಧ ಪ್ರವಾಸಿ ಸ್ಥಳಗಳ ಛಾಯಾಚಿತ್ರ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ನಗರದ ಕೋಟೆಯ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಬುಧವಾರ ಚಾಲನೆ ನೀಡಿದರು.
ರಾಜ್ಯದ ಹಂಪಿ, ಪಟ್ಟದಕಲ್ಲು, ದೆಹಲಿಯ ಕೆಂಪುಕೋಟೆ, ಆಗ್ರಾದ ತಾಜ್ಮಹಲ್, ಅಜಂತಾ, ಎಲ್ಲೋರಾ, ಕುತುಬ್ ಮಿನಾರ್, ಸಾಂಚಿ, ಕೋನಾರ್ಕ್, ಗೋವಾದ ಚರ್ಚ್ ಹೀಗೆ ಸುಮಾರು 28 ಛಾಯಾಚಿತ್ರಗಳು ನೋಡುಗರನ್ನು ಆಕರ್ಷಿಸುತ್ತಿವೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಮಮ್ತಾಜ್, ಭಾರತೀಯ ಪುರಾತತ್ವ ಇಲಾಖೆಯ ಬೆಂಗಳೂರು ವೃತ್ತದ ಮೇಲ್ವೀಚಾರಕರಾದ ಕೆ.ಮೂರ್ತೇಶ್ವರಿ, ಮೈಸೂರು ವೃತ್ತದ ಸಮನ್ವಯಾಧಿಕಾರಿ ಎನ್. ಸುನಿಲ್ ಕುಮಾರ್ ಇತರರು ಇದ್ದರು. ಛಾಯಾಚಿತ್ರ ಪ್ರದರ್ಶನವು ತಾ. 29 ರ ವರೆಗೆ ಸಾರ್ವಜನಿಕರ ವೀಕ್ಷಣೆ ಅವಕಾಶವಿದೆ.