ಮಡಿಕೇರಿ, ಸೆ. 27: ಕಳೆದ ಐದು ವರ್ಷಗಳ ಹಿಂದೆ ಮಕ್ಕಂದೂರು ಸಮೀಪ ನಡೆದಿದ್ದ ಆಗಿನ ಭಜರಂಗದಳ ತಾಲೂಕು ಸಹ ಸಂಚಾಲಕ ಗಣೇಶ್ ಕೊಲೆಯತ್ನ ಪ್ರಕರಣದಲ್ಲಿ ಸಜೆಗೆ ಒಳಗಾದ ಎಲ್ಲಾ ಆರೋಪಿಗಳಿಗೆ ತಾತ್ಕಾಲಿಕ ವಿಮುಕ್ತಿ ದೊರೆತಿದೆ.
ಕೊಡಗು ಜಿಲ್ಲಾ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸಜೆ ತೀರ್ಪನ್ನು ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀನಿವಾಸ್ ಹರೀಶ್ ಕುಮಾರ್ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಆರೋಪಿಗಳಾದ ಕಲೀಲ್ ಬಾಷಾ, ಮುಸ್ತಫ, ಜುನೈದ್ ಹಾಗೂ ರಿಜ್ವಾನ್ ಇವರುಗಳ ಒಟ್ಟು ರೂ. 50 ಸಾವಿರ ದಂಡದ ಹಣವನ್ನು ಮುಂದಿನ ಎರಡು ವಾರಗಳ ಒಳಗೆ ನ್ಯಾಯಾಲಯದಲ್ಲಿ ಭದ್ರತಾ ಠೇವಣಿ ಇರಿಸುವಂತೆ ಸೂಚಿಸಿದ್ದಾರೆ.
ಈ ಸಂಬಂಧ ಉಚ್ಛನ್ಯಾಯಾಲಯದಲ್ಲಿ ಮುಂದೆ ವಿಚಾರಣೆ ನಡೆಯಲಿದ್ದು, ಸದ್ಯಕ್ಕೆ ಆರೋಪಿಗಳು ಶಿಕ್ಷೆಯಿಂದ ಮುಕ್ತಗೊಂಡಿದ್ದಾರೆ. ಅಲ್ಲದೆ ಮತ್ತೊಬ್ಬ ಆರೋಪಿ ಹಮೀದ್ ಕಳೆದ ವಾರವೇ ನ್ಯಾಯಾಲಯದಲ್ಲಿ ಮೇಲ್ಮವಿ ಸಲ್ಲಿಸಿ ತಾತ್ಕಾಲಿಕವಾಗಿ ಬಿಡುಗಡೆಗೊಂಡಿದ್ದಾನೆÉ.