ಸೋಮವಾರಪೇಟೆ: ಸಮೀಪದ ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನÀ ಸಹಕಾರ ಸಂಘವು 2016-17ನೇ ಸಾಲಿನಲ್ಲಿ 37.44 ರೂ. ಗಳ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಸ್.ಬಿ. ಭರತ್ ಕುಮಾರ್ ಹೇಳಿದರು.

ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯದ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದಲ್ಲಿ 1945 ಸದಸ್ಯರಿದ್ದು, 152.05 ಲಕ್ಷ ರೂ. ಪಾಲು ಬಂಡವಾಳವಿದೆ. 436.98ಲಕ್ಷ ರೂ.ಗಳನ್ನು ವಿವಿಧ ಠೇವಣಿಗಳ ಮೂಲಕ ಸಂಗ್ರಹಿಸಲಾಗಿದೆ. ಕೆ.ಸಿ.ಸಿ. ಸಾಲ, ಸ್ವ.ಸ.ಗುಂಪು ಸಾಲ, ಅಭರಣ ಸಾಲ, ಠೇವಣಿ ಸಾಲ, ವ್ಯಾಪಾರ ಅಭಿವೃದ್ಧಿ ಸಾಲ, ಜಾಮೀನು ಸಾಲ ಇವುಗಳಿಗೆ 21.30 ಕೋಟಿ ರೂ.ಗಳನ್ನು ನೀಡಲಾಗಿದೆ. 20.95 ಕೋಟಿ ರೂ. ವಸೂಲಾತಿಯೊಂದಿಗೆ ಶೇ. 98.38 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಮಾಹಿತಿ ನೀಡಿದರು. ಕೆಡಿಸಿಸಿ ಬ್ಯಾಂಕ್‍ನಿಂದ ಪಡೆದ ಕೆಸಿಸಿ ಸಾಲವನ್ನು ಶೇ. 100 ರಷ್ಟು ಮರುಪಾವತಿಸಲಾಗಿದೆ. ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯಲ್ಲಿ 1526 ಮಂದಿ ನೋಂದಾಯಿತರಾಗಿದ್ದಾರೆ. ಸಂಘದಲ್ಲಿ ಎರಡು ಮಾರಾಟ ಮಳಿಗೆಯಿದ್ದು, ಗೊಬ್ಬರ ಹಾಗೂ ಸರ್ಕಾರದ ಪಡಿತರ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ ಎಂದರು. ರಾಜ್ಯ ಸರ್ಕಾರದ ಸಾಲಮನ್ನಾ ಯೋಜನೆಯಡಿ 991 ಸದಸ್ಯರಿಗೆ ಒಟ್ಟು 4,46,28,795 ರೂ. ಪ್ರಯೋಜನ ಸಿಗುತ್ತದೆ. ಇದರಲ್ಲಿ 282 ಸದಸ್ಯರು ರೂ. 50 ಸಾವಿರ ರೂ.ಗಳಿಗೆ ಒಳಪಟ್ಟವರಾಗಿದ್ದು, ಇವರೆಲ್ಲರೂ ಸಾಲದಿಂದ ಋಣಮುಕ್ತರಾಗಿದ್ದಾರೆ ಎಂದು ಹೇಳಿದರು. ಸಭೆಯಲ್ಲಿ ಉಪಾಧ್ಯಕ್ಷ ಹೆಚ್.ಆರ್. ಸುರೇಶ್, ನಿರ್ದೇಶಕರುಗಳಾದ ಎಸ್.ಆರ್. ಷಡಕ್ಷರಿ, ಎಸ್.ಎ. ಸುರೇಶ್, ಜಿ.ಎ. ಮಹೇಶ್, ಜಿ.ಪಿ. ಸುನೀಲ್ ಕುಮಾರ್, ಎಸ್.ಕೆ. ಕೃಷ್ಣ, ಕೆ.ಟಿ. ಕಾವೇರಿ, ಸಿ.ಎ. ಮಮತ, ಜಿ.ಜೆ. ಪವಿತ್ರ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಎಸ್. ಪರಮೇಶ್, ಲೆಕ್ಕಿಗರಾದ ಕೆ.ಕೆ. ಶಿವಪ್ರಕಾಶ್ ಉಪಸ್ಥಿತರಿದ್ದರು.

ಶನಿವಾರಸಂತೆ: ಸದಸ್ಯರ ಸಹಕಾರದಿಂದ ಸಹಕಾರ ಸಂಘ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು ಪ್ರಸ್ತುತ ರೂ 21,15,000 ನಿವ್ವಳ ಲಾಭಗಳಿಸಿದೆ ಎಂದು ಹಂಡ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಎಸ್. ಗಣೇಶ್ ಹೇಳಿದರು. ಹಂಡ್ಲಿ ಗ್ರಾಮದ ಸಂಘದ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಂಘದ 2016-17ನೇ ಸಾಲಿನ 61ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘದಲ್ಲಿ 2,452 ಮಂದಿ ಸದಸ್ಯರಿದ್ದು ರೂ 1,01,30,710 ರ ‘ಎ’ ತರಗತಿ ಪಾಲು ಬಂಡವಾಳವಿರುತ್ತದೆ. ಹಿರಿಯ ಸಹಕಾರಿಗಳು ಸರ್ವ ಸದಸ್ಯರು ಸಲಹೆ ಸೂಚನೆ ನೀಡುತ್ತಾ ಸಹಕರಿಸುತ್ತಿರುವದರಿಂದ ಸಂಘ ಪ್ರಗತಿ ಸಾಧಿಸುತ್ತಿದೆ ಎಂದರು.

ಸಭೆಯಲ್ಲಿ ಬೆಳೆ ವಿಮೆ, ಕಾಫಿ ತೋಟಗಳಲ್ಲಿ ಶಂಕುಹುಳು, ಕೋರ್ಟ್ ವ್ಯವಹಾರ, ಪ್ರತಿಭಾ ಪುರಸ್ಕಾರ, ಹಣ ದುರುಪಯೋಗ ಇತ್ಯಾದಿ ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಾರಳ್ಳಿ, ಹಂಡ್ಲಿ, ಕೆರಳ್ಳಿ, ಹುಲುಸೆ ಗ್ರಾಮಗಳ ಕಾಫಿ ತೋಟಗಳಲ್ಲಿ ಶಂಕು ಹುಳು ನಿಯಂತ್ರಣದ ಬಗ್ಗೆ ಬೆಳೆಗಾರರು ಚರ್ಚಿಸಿ, ಸಂಘದ ಸಹಕಾರ ಕೋರಿದರು, ಸ್ಪಂದಿಸಿದ ಸಂಘದ ಅಧ್ಯಕ್ಷ ಗಣೇಶ್, ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರ ಒಪ್ಪಿಗೆ ಪಡೆದು ರೂ 1 ಲಕ್ಷ ದೇಣಿಗೆ ನೀಡುವದಾಗಿ ಘೋಷಿಸಿದರು. ಪ್ರತಿಭಾಪುರಸ್ಕಾರದ ಮೊತ್ತ ಅಧಿಕಗೊಳಿಸುವಂತೆ ಕೆಲ ಸದಸ್ಯರು ಒತ್ತಾಯಿಸಿದರು. ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹದ ದೃಷ್ಟಿಯಿಂದ ಪುರಸ್ಕಾರ ನೀಡಲು ಒಮ್ಮತದಿಂದ ತೀರ್ಮಾನಿಸಲಾಯಿತು.

ಆಡಳಿತ ಮಂಡಳಿ ನಿರ್ದೇಶಕರಿಗೆ ಬೈಲಾ ಹಾಗೂ ಕಾನೂನು ಪ್ರಕಾರದ ಅಧಿಕಾರದ ಬಗ್ಗೆ, ಮಾಹಿತಿ ಸಭೆಯಲ್ಲಿ ತರಬೇತಿ ನೀಡುವಂತೆ ಹಿರಿಯ ಸಹಕಾರಿಗಳಾದ ಕೆ.ವಿ. ಮಂಜುನಾಥ್, ಎಸ್.ಕೆ. ವೀರಪ್ಪ ಹಾಗೂ ಎಸ್.ಕೆ. ಶಿವಪ್ಪ ಸಲಹೆ ನೀಡಿದರು. ಸಂಘದಲ್ಲಿ ಆಗಿರುವ ಲಕ್ಷಾಂತರ ರೂಪಾಯಿ ದುರುಪಯೋಗ ಹಾಗೂ ಇತರ ಖರ್ಚುಗಳ ಬಗ್ಗೆ ಅಧಿಕೃತ ದಾಖಲೆ ಇಲ್ಲದ ಬಗ್ಗೆಯೂ ಗಂಭೀರ ಆರೋಪ ಸಭೆಯಲ್ಲಿ ಕೇಳಿ ಬಂದಿತು. ಸಂಘದಲ್ಲಿ ನಡೆದ ಮಾಸಿಕ ಸಭೆಯ ಖರ್ಚು ಹಾಗೂ ಇತರ ಖರ್ಚುಗಳ ಬಗ್ಗೆ ಲೆಕ್ಕವಿಟ್ಟು ಮುಂದಿನ ದೂರು ನ್ಯಾಯಾಲಯದಲ್ಲಿದ್ದು ಪರಿಹರಿಸಲಾಗುವದು ಎಂಬ ಸಮಜಾಯಿಸಿಕೆ ಅಧ್ಯಕ್ಷರಿಂದ ದೊರೆಯಿತು. ಸಂಘದ ಸದಸ್ಯರ ಕೋರಿಕೆಗೆ ಸ್ಪಂದಿಸಿ ಶೇ. 12 ರಷ್ಟು ಡಿವಿಡೆಂಡ್ ಕೊಡಲು ಆಡಳಿತ ಮಂಡಳಿ ನಿರ್ಧರಿಸಿತು. ಸದಸ್ಯರಾದ ಮೋಹನ್, ಶಿವಾನಂದ್, ಸುಬ್ಬಯ್ಯ, ಮಹೇಶ್, ಪ್ರೇಮ್‍ಕುಮಾರ್, ಮುತ್ತಪ್ಪ ಜಯಚಂದ್ರ ಕುಮಾರ್, ಪಾಪಣ್ಣ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್. ಬಸಪ್ಪ, ವಾರ್ಷಿಕ ವರದಿ ಹಾಗೂ ಲೆಕ್ಕ ಪರಿಶೋಧನಾ ವರದಿ ಮಂಡಿಸಿದರು ಅಗಲಿದ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು. ಸಂಘದ ಉಪಾಧ್ಯಕ್ಷ ಕೆ.ಸಿ. ಹಿತೇಶ್, ನಿರ್ದೇಶಕರುಗಳಾದ ಕೆ.ಎಂ. ವಿನೂತ್‍ಶಂಕರ್, ಎಸ್.ಜೆ. ರವಿಕುಮಾರ್, ಎಂ.ಎಂ. ಕುಸುಮ, ಎಸ್.ವಿ. ನೇತ್ರಾ, ಎಂ. ಎಸ್. ಚಂದ್ರಶೇಖರ್, ನಾಗರಾಜು, ಬಿ. ಟಿ. ಶಿವರಾಜು, ಮೇಲ್ವಿಚಾರಕ ಎಸ್. ಡಿ. ಶಶಿಕುಮಾರ್ ಉಪಸ್ಥಿತರಿದ್ದರು.

ಸೋಮವಾರಪೇಟೆ : ಸೋಮವಾರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಮೀಪದ ಬಳಗುಂದ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶಾಖಾ ಕಟ್ಟಡ, ಗೋದಾಮು ಮತ್ತು ವಾಣಿಜ್ಯ ಸಂಕೀರ್ಣಗಳ ಉದ್ಘಾಟನೆಯನ್ನು ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ಅಧ್ಯಕ್ಷ ಬಿ.ಡಿ. ಮಂಜುನಾಥ್ ನೆರವೇರಿಸಿದರು. ಸುಮಾರು 60ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಶಾಖಾ ಕಟ್ಟಡದಲ್ಲಿರುವ ಭದ್ರತಾ ಕೊಠಡಿಯನ್ನು ಸಂಘದ ಹಿರಿಯ ಸದಸ್ಯ ಬಿದ್ದಪ್ಪ ಅವರು ಲೋಕಾರ್ಪಣೆಗೊಳಿಸಿದರು.

ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಬಲ್ಲಾರಂಡ ಮಣಿ ಉತ್ತಪ್ಪ, ಕೊಮಾರಪ್ಪ, ತಾ.ಪಂ. ಸದಸ್ಯ ಬಿ.ಬಿ. ಸತೀಶ್, ಬೇಳೂರು ಗ್ರಾ.ಪಂ. ಅಧ್ಯಕ್ಷೆ ಭಾಗ್ಯ, ಸಂಘದ ಅಧ್ಯಕ್ಷ ಹೆಚ್.ಕೆ. ಮಾದಪ್ಪ, ಉಪಾಧ್ಯಕ್ಷೆ ಸುಮಾ ಸುದೀಪ್, ನಿರ್ದೇಶಕರುಗಳಾದ ಕೆ.ಎಸ್. ದಾಸಪ್ಪ, ಲಕ್ಷ್ಮೀಕಾಂತ್, ಬಿ.ಎಂ. ಸುರೇಶ್, ಜಿ.ಬಿ. ಸೋಮಯ್ಯ, ಎಸ್.ಎನ್. ಸೋಮಶೇಖರ್, ಕೆ.ಜಿ. ಸುರೇಶ್, ನಳಿನಿ ಗಣೇಶ್, ರೂಪ ಸತೀಶ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ಹೆಚ್.ಡಿ. ರವಿಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಆಲೂರು-ಸಿದ್ದಾಪುರ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2016-17ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು.

ವಾರ್ಷಿಕ ಮಹಾಸಭೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎಸ್. ಲೀಲಕುಮಾರ್ ಸಂಘದ 2016-17ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯನ್ನು ಮಂಡಿಸುತ್ತಾ, 2017ನೇ ಸಾಲಿನಲ್ಲಿ ಸಂಘದಲ್ಲಿ ಒಟ್ಟು 2868 ಮಂದಿ ಸದಸ್ಯರಿದ್ದು ಇದರಲ್ಲಿ ‘ಎ’ ತರಗತಿ ಪಾಲು ಹಣ 92 ಲಕ್ಷದ 31 ಸಾವಿರದ 225 ರೂ. ಇದ್ದು, 2017ನೇ ಸಾಲಿನಲ್ಲಿ ಸಂಘದಲ್ಲಿ ಒಟ್ಟು 3 ಕೋಟಿ 71 ಲಕ್ಷದ 72 ಸಾವಿರದ 491 ರೂ. ಠೇವಣಾತಿಗಳು ಇರುತ್ತದೆ, ಸಂಘದಿಂದ ಸದಸ್ಯರಿಗೆ 2016-17ನೇ ಸಾಲಿಗೆ 7 ಕೋಟಿ 72 ಲಕ್ಷದ 1 ಸಾವಿರದ 693 ರೂ. ಕೆಸಿಸಿ ಸಾಲವನ್ನು ನೀಡಿದೆ, ಆಭರಣ ಸಾಲ, ಸ್ವಸಹಾಯ ಗುಂಪುಗಳಿಗೆ ಸಾಲ ಇತರೆ ಸಾಲಗಳು ಸೇರಿದಂತೆ ಒಟ್ಟು 9 ಕೋಟಿ 56 ಲಕ್ಷದ 2 ಸಾವಿರದ 119 ರೂ. ಸಾಲವನ್ನು ವಿತರಿಸಿದ್ದು ಶೇ. 92 ರಷ್ಟು ಸಾಲ ಮರುಪಾವತಿಯಾಗಿದ್ದು, ಸಂಘವು 2016-17ನೇ ಸಾಲಿನಲ್ಲಿ 1128 ಮಂದಿಗೆ ಯಶಸ್ವಿನಿ ಆರೋಗ್ಯ ವಿಮೆ ನೋಂದಾವಣೆ ಮಾಡಿರುವದಾಗಿ ತಿಳಿಸಿದರು. ಅಲ್ಲದೆ 827 ಸದಸ್ಯರು ಯಶಸ್ವಿನಿ ಯೋಜನೆಯಿಂದ ಸವಲತ್ತುಗಳನ್ನು ಪಡೆದುಕೊಂಡಿದ್ದಾರೆ, ಸಂಘದ ವ್ಯಾಪ್ತಿಯಲ್ಲಿ ಒಟ್ಟು 90 ಸ್ವಸಹಾಯ ಗುಂಪುಗಳಿದ್ದು ಈ ಪೈಕಿ 29 ಗುಂಪುಗಳಿಗೆ 44 ಲಕ್ಷದ 87 ಸಾವಿರ ರೂ. ಸಾಲವನ್ನು ವಿತರಿಸಿದ್ದು ಇದರಲ್ಲಿ ಶೇ. 90 ರಷ್ಟು ಸಾಲ ಮರುಪಾವತಿಯಾಗಿದ್ದು ಸಂಘವು 2016-17ನೇ ಸಾಲಿನಲ್ಲಿ 1 ಕೋಟಿ 1 ಲಕ್ಷದ 83 ಸಾವಿರದ 519 ರೂ. ವಿವಿಧ ವ್ಯಾಪಾರ ವಹಿವಾಟು ನಡೆಸಿ ಇದರಿಂದ ಸಂಘಕ್ಕೆ 6 ಲಕ್ಷದ 3 ಸಾವಿರದ 623 ರೂ. ವ್ಯಾಪಾರ ಲಾಭವನ್ನುಗಳಿಸಿದೆ. 2016-17ನೇ ಸಾಲಿನಲ್ಲಿ ನಮ್ಮ ಸಂಘಕ್ಕೆ 25 ಲಕ್ಷದ 26 ಸಾವಿರದ 928 ರೂ. ನಿವ್ವಳ ಲಾಭವಾಗಿದೆ ಎಂದರು.

ಮಹಾಸಭೆಯಲ್ಲಿ ಭಾಗವಹಿಸಿದ ಸಂಘದ ಸಹಕಾರಿ ಸದಸ್ಯರುಗಳು ಸಂಘವು 25 ಲಕ್ಷ ಕ್ಕಿಂತ ಹೆಚ್ಚಿನ ಲಾಭಗಳಿಸಿರುವ ಹಿನ್ನೆಲೆ ಸದಸ್ಯರ ಡಿವಿಡೆಂಡ್ ಫಂಡ್ ಅನ್ನು ಶೇ. 15 ಕ್ಕೆ ಏರಿಸಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ಸದಸ್ಯರುಗಳು ಮತ್ತು ಆಡಳಿತ ಮಂಡಳಿಯವರು ಸುದೀರ್ಘ ಚರ್ಚೆ ನಡೆಸಿದ ಬಳಿಕ ಲಾಭದ ಹಣವನ್ನು ಸಂಘದ ಹೆಚ್ಚುವರಿ ಕಟ್ಟಡ ಕಾಮಗಾರಿಗೆ ವಿನಿಯೋಗಿಸುವಂತೆ ತೀರ್ಮಾನಿಸಲಾಯಿತು. ಸಭೆಯಲ್ಲಿ ಸಂಘದ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಮಾತನಾಡಿ, ನಮ್ಮ ಸಂಘವು ಕಳೆದ 2 ವರ್ಷಗಳಿಂದ 25 ಲಕ್ಷ ರೂ. ಗಿಂತ ಹೆಚ್ಚಿನ ಲಾಭವನ್ನುಗಳಿಸುತ್ತಿದೆ, ಸಂಘದ ಅಭಿವೃದ್ಧಿಗೆ ಸಂಘದ ಸಹಕಾರಿಗಳೆ ಮೂಲ ಕಾರಣರು, ಸಂಘದಲ್ಲಿ ಮಾಡಿದ ಸಾಲವನ್ನು ಸಂಘದ ಸದಸ್ಯರು ಸಕಾಲದಲ್ಲಿ ಮರುಪಾವತಿಸಿದರೆ ಸಂಘಕ್ಕೆ ಹೆಚ್ಚಿನ ಲಾಭವಾಗುತ್ತದೆ. ಈ ನಿಟ್ಟಿನಲ್ಲಿ ಮುಂದಿನ ಸಾಲಿನಲ್ಲೂ ಸಂಘವು ಲಾಭಗಳಿಸಲು ಸಹಕಾರಿ ಸದಸ್ಯರು ಸಹಕರಿಸುವಂತೆ ಮನವಿ ಮಾಡಿದರು. ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷ ಎ.ಜೆ. ವಿಜಯ್, ನಿರ್ದೇಶಕರುಗಳಾದ ಡಿ.ಎಂ. ಸುಬ್ಬಯ್ಯ, ಎಸ್.ಜೆ. ಪ್ರಸನ್ನಕುಮಾರ್, ಸಿ.ಕೆ. ದೇವಯ್ಯ, ಜಿ.ಬಿ. ಸಿದ್ದಲಿಂಗಪ್ಪ, ಹೆಚ್. ಪಾಪಯ್ಯ, ಎಂ.ಕೆ. ಲೀಲಾ, ಪಿ.ಕೆ. ರಮಾವತಿ ಸಹಕಾರ ಸಂಘಗಳ ಮೇಲ್ವೀಚಾರಕ ಹೆಚ್.ಎಂ. ಚಂದ್ರಶೇಖರ್ ಇದ್ದರು.ಐಗೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ರೂ. 33.04 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ಎಂ. ಬೋಪಯ್ಯ ತಿಳಿಸಿದರು. ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2016-17 ಸಾಲಿನಲ್ಲಿ ಸಂಘವು 19 ಕೋಟಿ ವಹಿವಾಟು ನಡೆಸಿದ್ದು ರೂ. 33,04,181 ಲಾಭಗಳಿಸುವ ಮೂಲಕ ಉತ್ತಮ ಪ್ರಗತಿ ಸಾಧಿಸಿದೆ ಎಂದರು. ಸಭೆಯಲ್ಲಿ ಬೈಲಾ ತಿದ್ದುಪಡಿಗೆ ಸಂಬಂಧಿಸಿದಂತೆ ಈ ಹಿಂದೆ ಇದ್ದ 11 ನಿರ್ದೇಶಕರ ಸ್ಥಾನವನ್ನು 13ಕ್ಕೆ ಹೆಚ್ಚಿಸುವಂತೆ ನಿರ್ಣಯ ಕೈಗೊಳ್ಳಲಾಯಿತು. ಕಳೆದ ಸಾಲಿನಲ್ಲಿ ಶೇ.12 ಡಿವಿಡೆಂಡ್ ನೀಡಲಾಗಿದ್ದು, ಈ ಬಾರಿ ಶೇ.15ಕ್ಕೆ ಹೆಚ್ಚಿಸುವಂತೆ ಸದಸ್ಯರು ಮನವಿ ಮಾಡಿದರು. ಸಂಘದ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಉತ್ತಮ ಗೊಳ್ಳುವವರೆಗೆ ಹೆಚ್ಚಿಸುವದು ಬೇಡ ಎಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಿಕ್ಕಿರಾಜ್ ಸಲಹೆ ನೀಡಿದರು. ಸದಸ್ಯರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ನಿರ್ದೇಶಕ ಟಿ.ಕೆ. ರಮೇಶ್ ಅವರು ಶೇ. 1 ರಷ್ಟು ಹೆಚ್ಚಳ ಮಾಡೋಣ ಎಂದಾಗ ಸಭೆಯು ಅನುಮೋದನೆ ನೀಡಿತು. ಕುಡಿಯುವ ನೀರಿಗೆ ಬೋರ್‍ವೆಲ್ ತೆಗೆಸಲು ಗಂಭೀರ ಚರ್ಚೆ ನಡೆಯಿತು.

ಸದಸ್ಯರಾದ ಎಸ್.ಪಿ. ಪೊನ್ನಪ್ಪ, ಡಿ.ಎಸ್. ಪೊನ್ನಪ್ಪ, ಬಿ.ಬಿ. ಸತೀಶ್, ಚನ್ನಕೇಶವ, ಶಿವಕುಮಾರ್, ಎಂ.ಸಿ. ಮುದ್ದಪ್ಪ, ಎಂ.ಎನ್. ಅಶೋಕ್, ಎಂ.ಪಿ. ಜೋಯಪ್ಪ, ಸುಬ್ಬಯ್ಯ ಮತ್ತಿತರರು ಕುಡಿಯುವ ನೀರಿಗೆ ಅನುಮತಿಯನ್ನು ಗ್ರಾಮ ಪಂಚಾಯಿತಿಯಿಂದ ಪಡೆದು ಬೋರ್‍ವೆಲ್ ತೆಗೆಸಬೇಕು ಹಾಗೂ ಅಡ್ಡಿಪಡಿಸಿದ ಸದಸ್ಯರ ಸದಸ್ಯತ್ವವನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರಲ್ಲದೇ, ತಪ್ಪಿದ್ದಲ್ಲಿ ಗ್ರಾ.ಪಂ. ವತಿಯಿಂದಲೇ ನೀರು ಸರಬರಾಜು ಮಾಡಲಿ ಎಂದು ಹೇಳಿದರು. ಸಭೆಯಲ್ಲಿ ಉಪಸ್ಥಿತರಿದ್ದ ಸಂಘದ ಹಿರಿಯ ಸದಸ್ಯ ಹಾಗೂ ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಎಸ್. ಚಂಗಪ್ಪ ಮಾತನಾಡಿ, ಬೋರ್‍ವೆಲ್ ತೆಗೆಸಲು ಗ್ರಾ.ಪಂ.ನಿಂದ ನಿರಾಕ್ಷೇಪಣಾ ಪತ್ರ ನೀಡುವದಾಗಿ ತಿಳಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಬಿ.ಬಿ. ಕರುಂಬಯ್ಯ, ನಿರ್ದೇಶಕರಾದ ಸಬಿತಾ ಚನ್ನಕೇಶವ, ವಿಶ್ವನಾಥರಾಜೇ ಅರಸ್, ಎಂ.ಎಸ್. ಮುತ್ತಪ್ಪ, ಕೆ.ಎಲ್. ಹೊನ್ನಪ್ಪ, ಹೆಚ್.ಜೆ. ಬಸಪ್ಪ, ಕೆ.ಪಿ. ರೋಷನ್, ಎನ್.ಎಂ. ಲಲಿತ ಉಪಸ್ಥಿತರಿದ್ದರು. ಸ್ವಸಹಾಯ ಗುಂಪಿನ ಸಾಲ ಪಡೆದು ಪ್ರಪ್ರಥಮವಾಗಿ ಮರುಪಾವತಿಸಿದ ಗುಂಪುಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಪದವಿ, ಇಂಜಿನಿಯರಿಂಗ್, ವೈದ್ಯಕೀಯ ಕೋರ್ಸುಗಳಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ದರ್ಜೆ ಸಹಾಯಕ ಜಯರಾಂ ವಂದಿಸಿದರು.

ಕುಶಾಲನಗರ: ಕುಶಾಲನಗರದ ನಾಡಪ್ರಭು ಪತ್ತಿನ ಸಹಕಾರ ಸಂಘ 2016-17ನೇ ಸಾಲಿನಲ್ಲಿ ರೂ. 436.09 ಲಕ್ಷ ವ್ಯವಹಾರ ನಡೆಸಿದ್ದು, 18,734 ರೂಪಾಯಿ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ ತಿಳಿಸಿದರು. ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ ಎ ತರಗತಿಯ 759 ಮತ್ತು ಸಿ ತರಗತಿಯ 33 ಮಂದಿ ಸದಸ್ಯರಿದ್ದಾರೆ. ಜಾಮೀನು ಸಾಲ, ಪಿಗ್ಮಿ ಸಾಲ ಹಾಗೂ ಆಭರಣ ಸಾಲ ಸೇರಿ 63.24 ಲಕ್ಷ ಸಾಲ ನೀಡಲಾಗಿದೆ. ಸಂಘ ಆರಂಭವಾಗಿ 1 ವರ್ಷವಾಗಿದ್ದು, ಸದಸ್ಯರು ಸಂಘದಲ್ಲಿ ಇಟ್ಟಿರುವ ಠೇವಣಿಗೆ ಉತ್ತಮ ಬಡ್ಡಿ ನೀಡಲಾಗುತ್ತಿದೆ. ಮುಂದೆ ವಾಹನ ಸಾಲ ನೀಡಲು ಕೂಡ ಉದ್ದೇಶಿಸಲಾಗಿದೆ. ಭವಿಷ್ಯದಲ್ಲಿ ಸ್ವಂತ ಕಟ್ಟಡ ಹೊಂದುವ ಯೋಜನೆ ರೂಪಿಸಲಾಗಿದ್ದು, ಇದಕ್ಕೆ ಬೇಕಾದ ಸಿದ್ಧತೆಗಳನ್ನು ನಡೆಸಲಾಗಿದೆ ಎಂದರು. ಸಂಘದ ಉಪಾಧ್ಯಕ್ಷ ಹೆಚ್.ಎನ್. ರಾಮಚಂದ್ರ, ವ್ಯವಸ್ಥಾಪಕಿ ಸುನಿತಾ ಹಾಗೂ ನಿರ್ದೇಶಕರು ಸುದ್ದಿಗೋಷ್ಠಿಯಲ್ಲಿ ಇದ್ದರು.

ಕರಿಕೆ: ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಕಟ್ಟೆಕೋಡಿ ರಘುರಾಮ ಅವರ ಅಧ್ಯಕ್ಷತೆಯಲ್ಲಿ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು. ಬಳಿಕ ಮಾತನಾಡಿದ ಅವರು ಪ್ರಸಕ್ತ ವರ್ಷ ಸಹಕಾರ ಸಂಘವು 10,82,992 ರೂ. ಲಾಭಗಳಿಸಿದೆ, ಸಂಘದಲ್ಲಿ 1704 ಸದಸ್ಯರಿದ್ದು, 427 ಮಂದಿ ಕೃಷಿ 2,35000 ರೂಪಾಯಿ ಸಾಲ ಮನ್ನವಾಗಿರುವದಾಗಿ ಸಭೆಗೆ ಮಾಹಿತಿ ನೀಡಿದರು. ಸಂಘದಿಂದ ಮಧ್ಯಮಾವಧಿ ಕೃಷಿ ಸಾಲ ಹೈನುಗಾರಿಕೆ, ಕೃಷಿಯಂತ್ರೋಪಕರಣ ಹಾಗೂ ವಾಹನ ಸಾಲ ಸೌಲಭ್ಯ ನೀಡುತ್ತಿದ್ದು, ಕಾಫರ್ ಸಲ್ಫೇಟ್ ಹಾಗೂ ಕೃಷಿ ಸೌಲಭ್ಯವನ್ನು ರಿಯಾಯಿತಿ ದರದಲ್ಲಿ ವಿತರಿಸುತ್ತಿರುವದಾಗಿ ತಿಳಿಸಿದರು. ಅಲ್ಲದೆ, 7ನೇ ತರಗತಿ, 10ನೇ ತರಗತಿ ಹಾಗೂ ದ್ವಿತೀಯ ಪಿ.ಯು.ಸಿ. ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷ ಪಿ. ಪಿ. ಬೆನ್ನಿ, ಸದಸ್ಯರಾದ ದೇವರಾಜ್, ಬಾಲಕೃಷ್ಣ ಪಿ. ಟಿ. ಐಸಾಕ್, ಯಶೋಧ, ಬಿ. ಎ. ನಾರಾಯಣ, ಕೆ.ಎಂ. ಬಶೀರ್, ರಮ್ಯ, ದಾಮೋದರ ಉಪಸ್ಥಿತರಿದ್ದರು. ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿ ಗಂಗಾಧರ್ ವರದಿ ವಾಚಿಸಿದರು.

ಕಕ್ಕಬೆ: ಹಿರಿಯರು ಗ್ರಾಮದ ಅಭಿವೃದ್ಧಿಗಾಗಿ ಸ್ಥಾಪಿಸಿದ ಸಂಘ-ಸಂಸ್ಥೆಗಳನ್ನು ನಾವು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕಾಗಿದ್ದು, ಇದಕ್ಕೆ ಎಲ್ಲಾ ಸದಸ್ಯರ ಸಹಾಯ, ಸಹಕಾರ ಅಗತ್ಯ ಎಂದು ಕುಂಜಿಲ ವಿವಿಧೋದ್ದೇಶ ಸಹಕಾರ ಧವಸ ಭಂಡಾರದ ಅಧ್ಯಕ್ಷ ಕಲ್ಯಾಟಂಡ ರಘು ತಮ್ಮಯ್ಯ ಹೇಳಿದರು.

ಕಕ್ಕಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಧವಸ ಭಂಡಾರದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಿಂದೆ ಧವಸ ಭಂಡಾರಗಳು ಗ್ರಾಮಸ್ಥರಿಗೆ ಭತ್ತ ಸಾಲ ನೀಡುವ ಮೂಲಕ ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಿಂದ ಭತ್ತದ ಕೃಷಿಯ ಕೊರತೆಯ ಕಾರಣ ಇದು ಸಾಧ್ಯವಾಗುತ್ತಿಲ್ಲ. ಸಂಘದಿಂದ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದರು. ವೇದಿಕೆಯಲ್ಲಿ ನಿರ್ದೇಶಕರಾದ ಕಲಿಯಂಡ ಅಪ್ಪಣ್ಣ, ಅಬ್ದುಲ್ ರಹಿಮಾನ್, ಪೇರಿಯಂಡ ಸೋಜಾ ಇದ್ದರು. ಪಿ.ವಿ. ಕೃಷ್ಣಯ್ಯ ಪ್ರಾರ್ಥನೆ, ಸಂಘದ ಕಾರ್ಯದರ್ಶಿ ಕಂಬೆಯಂಡ ಕುಂಞಪ್ಪ ಸ್ವಾಗತ. ಕಂಬೆಯಂಡ ಪಳಂಗಪ್ಪ ಲೆಕ್ಕಪತ್ರ ಮಂಡಿಸಿ, ಕಣಿಯರ ನಾಣಯ್ಯ ವಂದಿಸಿದರು.

ಶಾಂತಳ್ಳಿ: ಸೋಮವಾರಪೇಟೆ ಸಮೀಪದ ಶಾಂತಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2016-17ನೇ ಸಾಲಿನಲ್ಲಿ ಒಟ್ಟು ರೂ. 10.66 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಕುಂದಳ್ಳಿ ದಿನೇಶ್ ತಿಳಿಸಿದರು.

ಶಾಂತಳ್ಳಿ ಕುಮಾರಲಿಂಗೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2016-17ನೇ ಸಾಲಿನ ಡಿವಿಡೆಂಡ್ ರೂ. 3,18,271 ಗಳನ್ನು ಸಂಘದ ಗೋದಾಮು ದುರಸ್ತಿಗಾಗಿ ನೀಡಿದ್ದಾರೆ. ಇದರೊಂದಿಗೆ ಸರ್ಕಾರದಿಂದ 5 ಲಕ್ಷ ಮಂಜೂರಾಗಿದ್ದು, ಕಾಮಗಾರಿ ಪೂರ್ಣಗೊಂಡಿದೆ ಎಂದರು. 2330 ಸದಸ್ಯರನ್ನು ಹೊಂದಿರುವ ಸಂಘವು ರೂ. 1.11 ಕೋಟಿ 99 ಸಾವಿರದಷ್ಟು ಪಾಲು ಬಂಡವಾಳ ಹೊಂದಿದೆ. ಸದಸ್ಯರು ಮತ್ತಿ ಸದಸ್ಯೇತರರಿಂದ 1655 ಉಳಿತಾಯ ಖಾತೆಗಳನ್ನು ತೆರೆದಿದ್ದು, 44,52,803 ರೂ. ಠೇವಣಿ ಸಂಗ್ರಹ ಮಾಡಲಾಗಿದೆ. ವಿವಿಧ ಠೇವಣಿಗಳು ಸೇರಿ ಒಟ್ಟು 1 ಕೋಟಿ 23 ಲಕ್ಷದ 69 ಸಾವಿರ ರೂಪಾಯಿಯನ್ನು ಸಂಗ್ರಹ ಮಾಡಲಾಗಿದೆ ಎಂದು ದಿನೇಶ್ ಹೇಳಿದರು.

ಸದಸ್ಯರಿಗೆ ರೂ. 10,11,86,261 ರೂ ಅಲ್ಪಾವಧಿ ಕೆಸಿಸಿ ಸಾಲ ವಿತರಿಸಲಾಗಿದೆ. ರೂ. 46,64,089 ವೇತನ ಆಧಾರಿತ ಸಾಲ, ರೂ. 98,47,586 ಠೇವಣಿ ಆಧಾರಿತ ಸಾಲ, ರೂ. 20,74,710 ಆಭರಣ ಸಾಲ, ರೂ. 42,79,520 ರಸಗೊಬ್ಬರ ಸಾಲ, ರೂ. 27,04,110 ಸ್ವಸಹಾಯ ಗುಂಪುಗಳಿಗೆ ಸಾಲ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕೆಸಿಸಿ ಸಾಲ ಶೇ. 98.82 ರಷ್ಟು ವಸೂಲಿಯಾಗಿದೆ. ಇತರ ಸಾಲಗಳ ವಸೂಲಾತಿ ಶೇ. 90 ರಷ್ಟಿದೆ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನಿಂದ ಪಡೆದಿದ್ದ ರೂ. 8,65,32,682 ಸಾಲವನ್ನು ಅವಧಿಗೂ ಮುನ್ನವೇ ಮರುಪಾವತಿ ಮಾಡಲಾಗಿದೆ. 2017-18ನೇ ಸಾಲಿನಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ ರೂ. 8,91,15,653 ಸಾಲ ಪಡೆದು ಇದರೊಂದಿಗೆ ರೂ. 3,56,40,618 ಸ್ವಂತ ಬಂಡವಾಳ ಸೇರಿಸಿ ಸಂಘದ ಸದಸ್ಯರಿಗೆ ಒಟ್ಟು ರೂ. 12,47,56,271 ಅಲ್ಪಾವಧಿ ಸಾಲ ವಿತರಿಸಿರುವದಾಗಿ ತಿಳಿಸಿದರು.

ಈಗಿರುವ ರೂ. 5 ಸಾವಿರ ಮರಣ ನಿಧಿಯನ್ನು 10 ಸಾವಿರ ರೂಪಾಯಿಗಳಿಗೆ ಏರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ವಾರ್ಷಿಕ ಮಹಾಸಭೆಯಲ್ಲಿ ಉಪಾಧ್ಯಕ್ಷೆ ಕೆ.ಕೆ. ಚಂದ್ರಾವತಿ, ನಿರ್ದೇಶಕರುಗಳಾದ ಕೆ.ಕೆ. ಗೋಪಾಲ್, ಬಿ.ಎ. ಧರ್ಮಪ್ಪ, ಯು.ಎಂ. ಬಸವರಾಜು, ಜಿ.ಹೆಚ್. ರಾಜೇಶ್, ಕೆ.ಪಿ. ಗೌರಮ್ಮ, ಯು.ಕೆ. ದೇಶ್‍ರಾಜ್, ಬಿ.ಈ. ಜಯೇಂದ್ರ, ಬಿ.ಪಿ. ಅನಿಲ್ ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಪಿ. ಜೋಯಪ್ಪ ಉಪಸ್ಥಿತರಿದ್ದರು.ಸಿದ್ದಾಪುರ: ಸಿದ್ದಾಪುರದ ಗುಹ್ಯ ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಗತಿಯತ್ತ ಸಾಗಿದೆ ಎಂದು ಸಂಘದ ಅಧ್ಯಕ್ಷ ಎಂ.ಎಸ್. ವೆಂಕಟೇಶ್ ತಿಳಿಸಿದರು. ಸಂಘವು 2016-17 ನೇ ಸಾಲಿನಲ್ಲಿ ರೂ. 144.40 ಕೋಟಿ ವ್ಯವಹಾರ ನಡೆಸಿರುತ್ತದೆ ಎಂದ ಅವರು, ಪ್ರಸಕ್ತ ವರ್ಷ ರೂ. 64.89 ಲಕ್ಷ ನಿವ್ವಳ ಲಾಭ ಗಳಿಸಿದ್ದು ಸಂಘದ ಸದಸ್ಯರಗಳಿಗೆ ಶೇ. 25 ಡಿವಿಡೆಂಡ್ ನೀಡಲು ಮಹಾಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.

ಸಂಘವು ಪ್ರತೀ ವರ್ಷದಂತೆ ಈ ಬಾರಿಯು ಶೇ. 100 ಫಸಲು ಸಾಲ ವಸೂಲಾತಿಗಾಗಿ ಜಿಲ್ಲಾ ಸಹಕಾರ ಬ್ಯಾಂಕಿನಿಂದ ಪ್ರಶಸ್ತಿ ಪತ್ರದೊಂದಿಗೆ ರೂ. 3,000 ಬಹುಮಾನ ಪಡೆದಿದೆ. ಡಿಸೇಲ್-ಪೆಟ್ರೋಲ್ ವ್ಯಾಪಾರದಲ್ಲಿ ರೂ. 16.46 ಕೋಟಿ ವ್ಯವಹಾರ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಉತ್ತಮ ಸಂಘ ಎಂದು ಹೆಸರು ಗಳಿಸಿದ್ದು ಸಂಘದಲ್ಲಿ ಒಟ್ಟು 1942 ಸದಸ್ಯರಿದ್ದು ಸಂಘಗಕ್ಕೆ 87 ವರ್ಷಗಳ ಇತಿಹಾಸ ಇದೆ ಎಂದು ತಿಳಿಸಿದರು. ಸಂಘದ ವತಿಯಿಂದ ವರ್ಷಂಪ್ರತಿ ಸಂಘದ ಸದಸ್ಯರ ಮಕ್ಕಳಿಗೆ 10ನೇ ತರಗತಿ ಹಾಗೂ ದ್ವೀತಿಯ ಪಿ.ಯು.ಸಿ. ಉತ್ತೀರ್ಣರಾದವರಿಗೆ ಪ್ರೋತ್ಸಾಹಿಸುವ ಸಲುವಾಗಿ ತ?