ಗೋಣಿಕೊಪ್ಪಲು, ಸೆ. 27: ಅಕ್ರಮವಾಗಿ ಮರ ಸಾಗಿಸುತ್ತಿದ್ದಾಗ ಧಾಳಿ ನಡೆಸಿರುವ ಪೊನ್ನಂಪೇಟೆ ಅರಣ್ಯ ವಲಯ ಅಧಿಕಾರಿಗಳು ಲಾರಿ ಹಾಗೂ ಮರ ಸೇರಿ ಸುಮಾರು 3 ಲಕ್ಷ ಮೌಲ್ಯದ ಮಾಲು ವಶ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಲಾರಿ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದು, ಹಲಸಿನ ಮರದ 26 ನಾಟಗಳನ್ನು ವಶಕ್ಕೆ ಪಡೆದು ಮರ ಸಂಗ್ರಹಾಲಯದಲ್ಲಿ ಇಡಲಾಗಿದೆ. 3,878 ಘನ ಮೀಟರ್ ಅಳತೆಯ ಮರಕ್ಕೆ ಸುಮಾರು 1.5 ಲಕ್ಷ ಎಂದು ಅಂದಾಜಿಸಲಾಗಿದೆ. 1.5 ಲಕ್ಷ ಮೌಲ್ಯದ ಲಾರಿ ಸೇರಿದಂತೆ ಒಟ್ಟು 3 ಲಕ್ಷ ಮೌಲ್ಯದ ಮಾಲು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಹರಿಹರ ಗ್ರಾಮದ ಒಂಟಿಯಂಗಡಿ ಜಂಕ್ಷನ್ ಬಳಿ ರಾತ್ರಿ 12 ಗಂಟೆ ಸುಮಾರಿಗೆ ದಾಳಿ ನಡೆಸಲಾಗಿದೆ.

ಧಾಳಿಯ ಸುಳಿವು ಅರಿತು ಲಾರಿಯನ್ನು ಕೆಟ್ಟು ನಿಲ್ಲುವಂತೆ ಮಾಡಿ ಪರಾರಿಯಾಗಿದ್ದ ಕಾರಣ, ಲಾರಿ ಸ್ಟಾರ್ಟ್ ಆಗದ ಕಾರಣ

ಟ್ರ್ಯಾಕ್ಟರ್ ಮೂಲಕ ಲಾರಿಯನ್ನು ಪೊನ್ನಂಪೇಟೆ ಮರ ಸಂಗ್ರಹಾಲಯಕ್ಕೆ ತರಲಾಯಿತು.

ಡಿಸಿಎಫ್ ಕ್ರೈಸ್ತರಾಜ್ ಹಾಗೂ ಎಸಿಎಫ್ ಮಾರ್ಗದರ್ಶನದಂಂತೆ ಆರ್‍ಎಫ್‍ಒ ಗಂಗಾಧರ್, ಡಿಆರ್‍ಎಫ್‍ಒಗಳಾದ ಹಂಸ, ಮುತಿ, ಸಿಬ್ಬಂದಿ ಜನಾರ್ಧನ್ ಹಾಗೂ ಸಂಜಯ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.