ಮಡಿಕೇರಿ, ಸೆ. 27: ಮಡಿಕೇರಿ ದಸರಾ ಉತ್ಸವದಲ್ಲಿ ಕಳೆದ ಬಾರಿ ದ್ವಿತೀಯ ಸ್ಥಾನ ಪಡೆದ; ನಾಲ್ಕು ಶಕ್ತಿ ದೇವತೆಗಳಲ್ಲೊಂದಾದ ಶ್ರೀ ಕಂಚಿಕಾಮಾಕ್ಷಿ ಮುತ್ತು ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ 54ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗುತ್ತಿದೆ ಎಂದು ಸಮಿತಿಯ ಅಧ್ಯಕ್ಷ ಕನ್ನಂಡ ಸಂಜು ಸೋಮಯ್ಯ ತಿಳಿಸಿದ್ದಾರೆ.

ಎರಡು ಟ್ರ್ಯಾಕ್ಟರ್‍ಗಳನ್ನು ಬಳಸಲಾಗುತ್ತಿದ್ದು, ‘ರಾಮಾಂಜನೇಯ ನಿಂದ ರಾವಣ ಸಂಹಾರ’ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ. ದಿಂಡಿಗಲ್‍ನ ಜೇಮ್ಸ್ ಲೈಟಿಂಗ್ ಬೋರ್ಡ್ ಅಳವಡಿ ಸಿದ್ದು, ಸ್ಟುಡಿಯೋ ಸೆಟ್ಟಿಂಗ್ಸ್ ಹಾಗೂ ಧ್ವನಿ ವರ್ಧಕ ವ್ಯವಸ್ಥೆಯನ್ನು ಕೇರಳ ಏಷ್ಯಾನೆಟ್ ಸಂಸ್ಥೆಯ ವಿಷ್ಣು ತಂಡ ಮಾಡಲಿದೆ. 21 ಕಲಾಕೃತಿ ಗಳನ್ನು ಬಳಸಲಾಗುತ್ತಿದ್ದು, ಮಡಿಕೇರಿಯ ಶೋ ಮ್ಯಾನ್ ಕ್ರಿಯೇಷನ್ಸ್ ಹಾಗೂ ಮೈಸೂರಿನ ಉದಯ್ ಮತ್ತು ತಂಡ ಕಲಾಕೃತಿಗಳನ್ನು ತಯಾರಿಸಲಿದ್ದಾರೆ.

ಕಲಾಕೃತಿಗಳಿಗೆ ಚಲನವಲನ ವ್ಯವಸ್ಥೆಯನ್ನು ಶೋ ಮ್ಯಾನ್ ಕ್ರಿಯೇಷನ್ಸ್ ತಂಡ ಆಯ್ಕೆ ಮಾಡಲಿದ್ದು, ಕಥಾ ಸಾರಾಂಶವನ್ನು ಕೂಡ ಶೋ ಮ್ಯಾನ್ ತಂಡವೇ ಮಾಡಿದೆ. ಫ್ಲಾಟ್‍ಫಾರಂನ್ನು ಸುಜಿ, ಕುಮಾರ್, ರಾಘವೇಂದ್ರ, ಹರೀಶ್, ಪುರುಷು ಹಾಗೂ ತಂಡದವರು ನಿರ್ಮಿಸಲಿದ್ದು, ಧ್ವನಿಮುದ್ರಣವನ್ನು ರಘುರಾಂ ಮಾಡಲಿದ್ದಾರೆ ಎಂದು ಸಂಜು ಸೋಮಯ್ಯ ವಿವರಿಸಿದರು.

ಕೊಚ್ಚಿನ್‍ನ ತಂತ್ರಜ್ಞರು ಸ್ಪೆಷಲ್ ಎಫೆಕ್ಟ್ ಲೈಟ್‍ಗಳನ್ನು ಅಳವಡಿಸ ಲಿದ್ದು, 35 ಅಡಿ ಎತ್ತರದ ರಾವಣನ ಕಲಾಕೃತಿ ಗಮನ ಸೆಳೆಯಲಿದೆ. ಟ್ರ್ಯಾಕ್ಟರ್ ಸೆಟ್ಟಿಂಗ್ಸ್‍ನ್ನು ಬಿಪಿನ್, ಮಣಿ ಮತ್ತು ತಂಡದವರು ಮಾಡಲಿದ್ದಾರೆ. ಉಮೇಶ್ ಸುಬ್ರಮಣಿ, ಕೆ.ಟಿ. ಪ್ರಶಾಂತ್, ಗಿರಿಶ್ ಹಾಗೂ ಭೌತಮ್ ಸುವರ್ಣ ಇವರುಗಳು ಮಂಟಪದ ಉಸ್ತುವಾರಿ ಯನ್ನು ನಿರ್ವಹಿಸಲಿದ್ದಾರೆ. 21 ಲಕ್ಷ ರೂ. ವೆಚ್ಚದಲ್ಲಿ ಮಂಟಪ ವನ್ನು ಹೊರತರ ಲಾಗುತ್ತಿದ್ದು, ಜನಾಕರ್ಷಣೆಗೆ ಹೆಚ್ಚಿನ ಒತ್ತು ನೀಡುವದರ ಜೊತೆಗೆ ಪ್ರಥಮ ಬಹುಮಾನಕ್ಕೆ ಪೈಪೋಟಿ ನೀಡಲಾಗುವದು ಎಂದು ಸಂಜು ಸೋಮಯ್ಯ ಮಾಹಿತಿಯಿತ್ತರು.

- ಉಜ್ವಲ್ ರಂಜಿತ್