ಮಡಿಕೇರಿ ಸೆ.27 : ಐಎನ್‍ಟಿಯುಸಿ ರಾಜ್ಯ ಘಟಕದ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಅವರ ವ್ಯಕ್ತಿ ಚಿತ್ರಣವಿರುವ “ಶ್ರಮ ಜೀವಿ” ಮಡಿಕೇರಿ ಸೆ.27 : ಐಎನ್‍ಟಿಯುಸಿ ರಾಜ್ಯ ಘಟಕದ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಅವರ ವ್ಯಕ್ತಿ ಚಿತ್ರಣವಿರುವ “ಶ್ರಮ ಜೀವಿ” ಪ್ರೋತ್ಸಾಹಿಸುವ ಉದ್ದೇಶದಿಂದ ಹಣವನ್ನು ನೀಡುತ್ತಿದ್ದು, ನಮ್ಮನ್ನು ಸಂಪರ್ಕಿಸಿದ 8 ಮಂಟಪದÀವರಿಗೆ ತಲಾ 50,000 ರೂ. ನೀಡಿದ್ದೇನೆ ಎಂದು ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಗೋಷ್ಠಿಯಲ್ಲಿ ಪುಸ್ತಕ ಬಿಡುಗಡೆ ಮಾಡಿದ ನಂತರ ಮಾತ ನಾಡಿದ ನಾಪಂಡ ಮುತ್ತಪ್ಪ ಮಡಿಕೇರಿ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಮನೆಗೂ ಈ ಪುಸ್ತಕವನ್ನು ತಲುಪಿಸಲಾಗುವದು ಎಂದರು. ಸುಮಾರು 65 ಸಾವಿರ ಪುಸ್ತಕಗಳನ್ನು ಹಂಚಲು ಕಾರ್ಯಕರ್ತರು ಉತ್ಸುಕ ರಾಗಿದ್ದಾರೆ ಎಂದರು.

ಇಂದು ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ಜನರು ಅಭ್ಯರ್ಥಿಗಳನ್ನು ಆಯ್ಕೆ ಮಾಡುವದು ಸೂಕ್ತ, ಮುಂದಿನ ಚುನಾವಣೆಗೆ ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದು, ಪಕ್ಷದ ಸಾವಿರಾರು ಯುವಕರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ನಾಪಂಡ ಮುತ್ತಪ್ಪ ಹೇಳಿದರು.

ಐಎನ್‍ಟಿಯುಸಿ ಜಿಲ್ಲಾ ಅಧ್ಯಕ್ಷ ಟಿ.ಪಿ.ಹಮೀದ್ ಮಾತನಾಡಿ, ನಾಪಂಡ ಮುತ್ತಪ್ಪ ತಮ್ಮ 25ವರ್ಷಗಳ ಸಾಮಾಜಿಕ ಸೇವೆಯಲ್ಲಿ ಜನಪರ ಕಾಳಜಿಯನ್ನು ಹೊಂದಿದ್ದಾರೆ. ಹಲವಾರು ವೃದ್ಧಾಶ್ರಮ, ಅನಾಥ ಆಶ್ರಮಗಳಿಗೆ, ಸಮುದಾಯ ಭವನ, ದೇವಾಲಯಗಳಿಗೆ, ಬಡ ರೋಗಿಗಳಿಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿದ್ದಾರೆ. ಇವರ ಈ ಕಾರ್ಯವನ್ನು ಮೆಚ್ಚಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡುವದು ಸೂಕ್ತ ಎನ್ನುವದು ನಮ್ಮ ಅಭಿಪ್ರಾಯವಾಗಿದೆ ಎಂದು ತಿಳಿಸಿದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರ ಮೈನಾ ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಬಲಯುತವಾಗಲು ಉತ್ತಮ ನಾಯಕರ ಅಗತ್ಯವಿದೆ ಎಂದರು.

ದಸರಾ ತುರ್ತು ಸಭೆಯಲ್ಲಿ ಕಲಾವಿದರ ಸಂಭಾವನೆ ಕಡಿತದ ಬಗ್ಗೆ ವಿಚಾರ ತಿಳಿದು ಸ್ಪಂದಿಸಿದ ಮುತ್ತಪ್ಪ ಅವರು, ತಕ್ಷಣ ಹಣ ನೀಡುವದಾಗಿ ಭರವಸೆ ನೀಡಿದ್ದಾರೆ. ಇದರಿಂದ ದಸರಾ ಆಚರಣೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಐಎನ್‍ಟಿಯುಸಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಪವನ್ ಪೆಮ್ಮಯ್ಯ ಮಾತನಾಡಿ, ಇಂದು ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂದರು.

ಸಾಂಸ್ಕøತಿಕ ಸಮಿತಿಗೆ ರೂ.1.08 ಲಕ್ಷ

ಇದೇ ಸಂದರ್ಭ ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಮೂಲಕ ನಡೆಯುತ್ತಿರುವ ಸಾಂಸ್ಕøತಿಕ ಕಾರ್ಯಕ್ರಮಗಳ ಕಲಾವಿದರಿಗೆ ಸೂಕ್ತ ಸಂಭಾವನೆ ನೀಡಲು 1.08ಲಕ್ಷ ರೂ,ಗಳನ್ನು ಸಮಿತಿಯ ಅಧ್ಯಕ್ಷ ಅನಿಲ್ ಹೆಚ್.ಟಿ. ಅವರಿಗೆ ನಾಪಂಡ ಮುತ್ತಪ್ಪ ಹಸ್ತಾಂತರಿಸಿದರು. ದಸರಾದ ಎಂಟು ಮಂಟಪಗಳಿಗೆ ತಲಾ 50 ಸಾವಿರದಂತೆ ಚೆಕ್‍ನ್ನು ಆಯಾ ಸಮಿತಿ ಪದಾಧಿಕಾರಿಗಳಿಗೆ ವಿತರಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಮುಖ ತ್ರಿನೇಶ್ ಉಪಸ್ಥಿತರಿದ್ದರು.