*ಗೋಣಿಕೊಪ್ಪಲು, ಸೆ. 28: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ವಿಯೇಟ್ನಾಂ ಕಾಳು ಮೆಣಸು ಆಮದು ಮಾಡಿ ಸ್ಥಳಿಯ ರೈತರಿಗೆ ವಂಚಿಸುತ್ತಿದ್ದ ವ್ಯಾಪಾರಿಯ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಆರ್.ಎಂ.ಸಿ. ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ಘೋಷಿಸಿದ್ದಾರೆ. ಆರ್.ಎಂ.ಸಿ. ಸಭಾಂಗಣದಲ್ಲಿ ನಡೆದ ಬೆಳೆಗಾರರ ಒಕ್ಕೂಟ ಹಾಗೂ ಆರ್.ಎಂ.ಸಿ. ಸದಸ್ಯರ ಮುಕ್ತ ಮಾತುಕತೆ ಸಭೆಯಲ್ಲಿ ಈ ನಿರ್ದಾರ ಕೈಗೊಂಡಿದ್ದಾರೆ. ಅಕ್ಟೋಬರ್ 16ರಂದು ಸರ್ವ ಸದಸ್ಯರ ಸಭೆ ಕರೆದು ವ್ಯಾಪಾರಿಯನ್ನು ಮಾರುಕಟ್ಟೆ ಸಭಾಂಗಣದಿಂದ ತೆರವುಗೊಳಿಸಲು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ. ಈತ ನಡೆಸಿದ ಅವ್ಯವಹಾರದ ಬಗ್ಗೆ ತನಿಖೆಗೆ ಶಿಫಾರಸ್ಸು ಮಾಡಿದ್ದು ಪ್ರಗತಿಯಲ್ಲಿದೆ. ಗೋದಾಮಿನಲ್ಲಿ ದೊರೆತ 1045 ಕಲಬೆರಕೆ ಕರಿಮೆಣಸಿನ ಚೀಲಗಳು ಪತ್ತೆಯಾಗಿದೆ. ಈ ಬಗ್ಗೆ ಆಹಾರ ಭದ್ರತೆ ಕಾಯಿದೆಯಡಿಯಲ್ಲಿ ತನಿಖೆ ನಡೆಸುತ್ತಿದ್ದೇವೆ. ಶೀಘ್ರದಲ್ಲೇ ವರದಿ ಬರಲಿದೆ.

(ಮೊದಲ ಪುಟದಿಂದ) ನಂತರ ವ್ಯಾಪಾರಿಯ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. ಮೂಲತಃ ರೈತನಾದ ತಾನು ರೈತರ ಪರವಾಗಿ ಹೋರಾಟಕ್ಕೆ ಸಿದ್ದನಾಗಿ ದ್ದೇನೆ. ಆರ್.ಎಂ.ಸಿ. ಸದಸ್ಯನಾಗಿ ಕೇವಲ 8 ತಿಂಗಳಷ್ಟೇ ಕಳೆದಿದೆ. ಇಲ್ಲಿ ಆಡಳಿತ ವ್ಯವಸ್ಥೆಯನ್ನು ಅರಗಿಸಿ ಕೊಳ್ಳಲು ಕಾಲಾವಕಾಶ ಬೇಕಾಗಿದೆ. ಬೆಳೆಗಾರರು ಸಹಕರಿಸ ಬೇಕು ಎಂದು ಈ ಸಂದರ್ಭ ಮನವಿ ಮಾಡಿದರು. ಆರ್. ಎಂ.ಸಿ. ಕಾಯಿದೆಯ ಪ್ರಕಾರ ಇಲ್ಲಿರುವ 34 ಮಳಿಗೆಗಳಿಗೆ ಶ್ರೀಘ್ರದಲ್ಲೇ ಟೆಂಡರ್ ಕರೆಯಲಾಗುವದು ಅಲ್ಲದೆ ಬೆಳೆಗಾರ ಅನುಕೂಲಕ್ಕಾಗಿ ಆರ್.ಎಂ.ಸಿ. ಆವರಣದಲ್ಲಿ ಕರಿಮೆಣಸು ವ್ಯಾಪಾರಕ್ಕೆ ಮುಕ್ತ ಮಾರುಕಟ್ಟೆಗೆ ಅವಕಾಶ ನೀಡಿ ಕೊಡಗಿನ ಕಾಳುಮೆಣಸಿಗೆ ಬೆಲೆ ನಿಗಧಿಪಡಿಸಲು ಕ್ರಮ ಕೈಗೊಳ್ಳಲಾಗು ವದು ಎಂದು ಹೇಳಿದರು.

ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕೈಬಿಲೀರ ಹರೀಶ್ ಮಾತನಾಡಿ ವ್ಯಾಪಾರಿಯನ್ನು ಗಡಿಪಾರು ಮಾಡಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಕೊಡಗಿನ ಬೆಳೆಗಾರರಿಗೆ ನಿರಂತರವಾಗಿ ವಂಚಿಸುತ್ತಿರುವ ಈತನನ್ನು ಸಮಿತಿಯ ಆವರಣದಲ್ಲಿ ವ್ಯಾಪಾರ ನಡೆಸದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಕೊಡಗಿನ ಜನತೆಗೆ ಮೋಸ ಮಾಡುತ್ತಿರುವ ವ್ಯಾಪಾರಿಯ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮಲ್ಚೀರ ಬೋಸ್ ತಿಳಿಸಿದರು.

ವ್ಯಾಪಾರ ಮಳಿಗೆಗೆ ಎಂದು ಗುತ್ತಿಗೆ ಪಡೆದುಕೊಂಡು ಗೋದಾಮು ಗಳಲ್ಲಿ ಯಾಂತ್ರೀಕರಣ ಗೊಳಿಸಿ ಕಾಳು ಮೆಣಸಿನ ಗ್ರೇಡಿಂಗ್ ನಡೆಸುತ್ತಿರುವದು ಯಾವ ಕಾನೂನು ರೀತಿಯಾಗಿದೆ ಎಂದು ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಆರ್.ಎಂ.ಸಿ. ಸದಸ್ಯ ಗುಮ್ಮಟ್ಟೀರ ಕಿಲನ್ ಗಣಪತಿ ಆರ್. ಎಂ.ಸಿ. ಕಾಯಿದೆಯನ್ವಯ ಕೃಷಿ ಚಟುವಟಿಕೆ ಗಳಿಗೆ ಉಪಯೋಗ ವಾಗುವಂತಹ ಯಂತ್ರೋಪಕರಣ ಗಳನ್ನು ಅಳವಡಿಸಿಕೊಳ್ಳಬಹುದು. ಶುಂಠಿ ಶುದ್ದೀಕರಣ, ವಸ್ತುಗಳ ರಕ್ಷಣೆಗೆ ಶಿಥೀಲಿಕರಣ ಯಂತ್ರಗಳನ್ನು ಬಳಸಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು. ಬೆಳೆಗಾರರ ಒಕ್ಕೂಟದ ಸಲಹೆಗಾರ ಚೆಪ್ಪುಡೀರ ಶರಿ ಸುಬ್ಬಯ್ಯ ಮಾತನಾಡಿ ಬೆಳೆಗಾರ ಅನುಕೂಲಕ್ಕಾಗಿ ಆರ್.ಎಂ.ಸಿ. ಆವರಣದಲ್ಲಿ ಕನಿಷ್ಠ 2 ತಿಂಗಳಿ ಗಾದರೂ ಸಭೆಗಳನ್ನು ಕರೆದು ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭ ಬೆಳೆಗಾರರ ಒಕ್ಕೂಟ ಪದಾಧಿಕಾರಿಗಳಾದ ಮಾಣೀರ ವಿಜಯ ನಂಜಪ್ಪ, ಅಳಮೇಂಗಡ ಬೋಸ್ ಮಂದಣ್ಣ, ಜಮ್ಮಡ ಮೋಹನ್, ಅಳಮೇಂಗಡ ಸುರೇಶ್ ಸುಬ್ಬಯ್ಯ, ಐನಂಡ ಜಪ್ಪು, ಯಮುನಾ ನಾಣಯ್ಯ, ಆಶಾ ಜೇಮ್ಸ್, ಆರ್.ಎಂ.ಸಿ. ಉಪಾಧ್ಯಕ್ಷ ಕಳ್ಳಂಗಡ ಬಾಲಕೃಷ್ಣ, ಆದೇಂಗಡ ವಿನು ಚಂಗಪ್ಪ, ಹೆಚ್.ಎನ್. ಮೋಹನ್ ರಾಜು, ಮಾಚಂಗಡ ಸುಜಾ ಪೂಣಚ್ಚ, ಚಿಯಕ್‍ಪೂವಂಡ ಸುಬ್ರಮಣಿ, ಅಜ್ಜೀಕುಟ್ಟಿರ ಪ್ರವೀಣ್, ಬೊಳ್ಳಜೀರ ಸುಶೀಲಾ, ನಾಮೇರ ಧರಣಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸೇರಿದಂತೆ ಇತರ ಸದಸ್ಯರು ಹಾಗೂ ಬೆಳೆಗಾರರು ಉಪಸ್ಥಿತರಿದ್ದರು.