ಮಡಿಕೇರಿ, ಸೆ. 28: ಮಡಿಕೇರಿಯ ಹಿಂದೂ ಮಲೆಯಾಳಿ ಸಂಘದ ವತಿಯಿಂದ ವರ್ಷಂಪ್ರತಿಯಂತೆ ಓಣಂ ಹಬ್ಬವನ್ನು ಅಕ್ಟೋಬರ್ 15ರಂದು ಕೆಳಗಿನ ಗೌಡಸಮಾಜದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಅಂದು ಬೆಳಿಗ್ಗೆ 9.30 ಗಂಟೆಗೆ ನಗರದ ಟೋಲ್‍ಗೇಟ್‍ನ ಮೈಸೂರು ರಸ್ತೆಯಿಂದ ಭವ್ಯ ಸಾಂಪ್ರದಾಯಿಕ ಓಣಾಗೋಶ ಮೆರವಣಿಗೆಯನ್ನು ಕಲಾತಂಡ, ಮಾವೇಲಿ ಮತ್ತು ಚಂಡೆ ವಾದ್ಯದೊಂದಿಗೆ ನಡೆಸಲಾಗುವದು. ಪೂಕಳಂ ಸ್ಪರ್ಧೆ ಬೆಳಿಗ್ಗೆ 6ರಿಂದ 9 ಗಂಟೆಯವರೆಗೆ. ತಂಡದಲ್ಲಿ ನಾಲ್ಕು ಜನರು (ಸೀಮಿತ), 5x5 ಚೌಕಾಕಾರ ಪೂಕಳಂ ವಿಸ್ತೀರ್ಣ, ಹೂಗಳನ್ನು ಮಾತ್ರ ಬಳಸತಕ್ಕದ್ದು. ವಿಜೇತರಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಗುವದು. ಪೂಕಳಂಗೆ ಲತಾ ರಾಜನ್ (8762515621) ಅವರನ್ನು ಸಂಪರ್ಕಿಸಬಹುದಾಗಿದೆ.
ಹಿಂದೂ ಮಲೆಯಾಳಿ ಸಮಾಜದ ಸದಸ್ಯತ್ವ ಹೊಂದಿರುವ ಸದಸ್ಯರ, ಕಳೆದ ಸಾಲಿನ 10ನೇ ತರಗತಿ ಮತ್ತು 12ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ವಿಶೇಷ ಗೌರವ ಸನ್ಮಾನ ಮತ್ತು ನಗದು ನೀಡಲಾಗುವದು. ಅಂಕಪಟ್ಟಿಯ ಪ್ರತಿಯೊಂದಿಗೆ ಕೆ.ವಿ. ಧರ್ಮೇಂದ್ರ ಪ್ರಧಾನ ಕಾರ್ಯದರ್ಶಿ (9481069188), ಸುಬ್ರಮಣಿ ನಿರ್ದೇಶಕರು (9449768767), ರವಿ ಅಪ್ಪುಕುಟ್ಟನ್ ಓಣಂ ಪ್ರಚಾರಕರು (9900126664), ಪ್ರಮೋದ್ ಸಂಘಟನಾ ಕಾರ್ಯದರ್ಶಿ (8762898225) ಇವರನ್ನು ಸಂಪರ್ಕಿಸಬಹುದಾಗಿದೆ.
12.30 ಗಂಟೆಗೆ ಸಾಂಪ್ರದಾಯಿಕ ವಿವಿಧ ರೀತಿಯ ಭಕ್ಷ್ಯ ಓಣಂ ಸದ್ಯ. 2 ಗಂಟೆಗೆ ಸಭಾ ಕಾರ್ಯಕ್ರಮ ನಂತರ ಮಲೆಯಾಳಿ ಸಮಾಜ ಮಕ್ಕಳ ಬಾಂಧವರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ, ನಾಡಂಪಾಟ್, ತಿರುವಾದಿರ ನೃತ್ಯ, ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ಸಂಜೆಯವರೆಗೆ ನಡೆಯಲಿದೆ. ಕಾರ್ಯಕ್ರಮದ ಕೊನೆಯಲ್ಲಿ ಲಕ್ಕಿಡಿಪ್ ಡ್ರಾ ಮಾಡಲಾಗುವದು ಎಂದು ಸಂಘದ ಅಧ್ಯಕ್ಷ ಕೆ.ಎಸ್. ರಮೇಶ್ ತಿಳಿಸಿದ್ದಾರೆ.