ಶ್ರೀಮಂಗಲ, ಸೆ. 28: ಕೊಡಗಿನಲ್ಲಿ ಹಬ್ಬ ಹರಿದಿನಗಳನ್ನು ಒಗ್ಗಟ್ಟಾಗಿ ಎಲ್ಲರು ಸೇರಿ ಆಚರಿಸು ವಂತೆ, ಕೊಡಗಿಗೆ ಮಾರಕವಾದ ಯೋಜನೆ, ಸಮಸ್ಯೆ ಬಂದಾಗಲು ರಾಜಕೀಯ ರಹಿತವಾಗಿ ಒಂದಾಗಿ ಎದುರಿಸುವಂತಾಗಬೇಕೆಂದು ಜಿ.ಪಂ. ಸದಸ್ಯ ಮುಕ್ಕಾಟೀರ ಶಿವು ಮಾದಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಟಿ. ಶೆಟ್ಟಿಗೇರಿ-ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದಲ್ಲಿ ಕೈಲ್‍ಪೆÉÇಳ್ದ್ ಒತ್ತೋರ್ಮೆ ಕೂಟದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಕೊಡಗಿನ ಪ್ರತಿಯೊಂದು ಹಬ್ಬಗಳು ಕೃಷಿಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಕೊಡಗು ಸಾಂಸ್ಕøತಿಕ ನಾಡಾಗಿದೆ. ಕೊಡಗಿನಲ್ಲಿ ಕೆಲವು ಪ್ರದೇಶಕ್ಕೆ ಸೀಮಿತವಾಗಿರುವ ಯೋಜನೆ ಹಾಗೂ ಸಮಸ್ಯೆಗಳಿಗೆ ಎಲ್ಲರೂ ಸೇರುತ್ತಿಲ್ಲ ಎಂದು ವಿಷಾದಿಸಿದ ಅವರು, 9 ಗ್ರಾಮಗಳನ್ನು ಸೇರಿಸಿರುವ ಹುಲಿ ಬಫರ್ ಜೋನ್, ಸೂಕ್ಮ ಪರಿಸರ ತಾಣ ಇತ್ಯಾದಿ ಹೋರಾಟಗಳನ್ನು ಉದಾಹರಿಸಿದರು.
ಮತ್ತೋರ್ವ ಮುಖ್ಯ ಅತಿಥಿ ತಾ.ಪಂ. ಸದಸ್ಯ ಪೊಯಿಲೇಂಗಡ ಪಲ್ವೀನ್ ಪೂಣಚ್ಚ ಮಾತನಾಡಿ, ಕೊಡವರಲ್ಲಿ ಒಗ್ಗಟ್ಟು ಮೂಡಿಸಲು ಹಾಗೂ ನಾಡಿನ ಜನರನ್ನು ಒಂದಾಗಿ ಸೇರಿಸಲು ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ ಸಮಾಜದ ಅಧ್ಯಕ್ಷ ಕೊಟ್ರಮಾಡ ಅರುಣ್ ಅಪ್ಪಣ್ಣ ಮಾತನಾಡಿ, ಕೈಲ್ ಪೊಳ್ದ್ ಹಬ್ಬ ಕೃಷಿಯೊಂದಿಗೆ ಬೆಸುಗೆ ಹೊಂದಿದೆ. ಈ ಹಬ್ಬದ ಹಿನ್ನೆಲೆಯನ್ನು ಅರಿತುಕೊಂಡು ಆಚರಣೆ ಮಾಡಿದಾಗ ಮಾತ್ರ ಈ ಹಬ್ಬ ಅರ್ಥಪೂರ್ಣ ವಾಗಿರುತ್ತದೆ. ಪೂಜೆ, ಮೀದಿ ಹಾಕುವ ಕಾರ್ಯಕ್ರಮಗಳು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಕೊಡವ ಸಮಾಜ ಕಟ್ಟಡ ಕೆಲಸಕ್ಕೆ ವಿಧಾನ ಪರಿಷತ್ ಸದಸ್ಯರುಗಳಾದ ಶಾಂತೆಯಂಡ ವೀಣಾ ಅಚ್ಚಯ್ಯ ರೂ. 4 ಲಕ್ಷ, ಮಂಡೇಪಂಡ ಸುನಿಲ್ ಸುಬ್ರಹ್ಮಣಿ ರೂ. 2 ಲಕ್ಷ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಅಲ್ಲದೆ, ಜಿ.ಪಂ. ಸದಸ್ಯ ಮುಕ್ಕಾಟೀರ ಶಿವು ಮಾದಪ್ಪ ಸಮಾಜ ಕಟ್ಟಡದ ಹೊರಭಾಗದ ರಸ್ತೆಯವರೆಗೆ ಸೋಲಿಂಗ್ ಹಾಕಿಕೊಡುವ ಹಾಗೂ ತಾ.ಪಂ. ಸದಸ್ಯ ಪೊಯಿಲೇಂಗಡ ಪಲ್ವೀನ್ ಪೂಣಚ್ಚ ಡಾಂಬರೀಕರಣಕ್ಕೆ ಅಗತ್ಯ ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ವೇದಿಕೆಯಲ್ಲಿ ದಾನಿಗಳಾದ ಮಾಯಣಮಾಡ ಪೂಣಚ್ಚ, ಬೋಜಮ್ಮ ಪೂಣಚ್ಚ, ಉಪಸ್ಥಿತರಿದ್ದರು. ಚೆÀಟ್ಟಂಗಡ ರವಿ ಸುಬ್ಬಯ್ಯ ನಿರೂಪಣೆ, ಚಂಗುಲಂಡ ಅಶ್ವಿನಿ ಸತೀಶ್, ತನುಷಾ ಸತೀಶ್, ಮನೀಶಾ ಸುರೇಶ್ ತಂಡದಿಂದ ಪ್ರಾರ್ಥನೆ, ಚೊಟ್ಟೆಯಂಡಮಾಡ ಬೋಸು ವಿಶ್ವಾನಾಥ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸಮಾಜದ ಕಾರ್ಯದರ್ಶಿ ಮನ್ನೆರ ರಮೇಶ್, ಖಜಾಂಚಿ ಚೊಟ್ಟೆಯಂಡಮಾಡ ವಿಶು, ನಾಡ್‍ತಕ್ಕ್ ಕೈಬೀಲಿರ ಹರೀಶ್ ಅಪ್ಪಯ್ಯ, ಸಲಹೆಗಾರ ಮಚ್ಚಮಾಡ ಸೋಮಯ್ಯ, ಸದಸ್ಯರಾದ ಕಟ್ಟೇರ ಈಶ್ವರ, ಮಾಣೀರ ವಿಜಯ್ ನಂಜಪ್ಪ, ತೀತಿರ ಧರ್ಮಜ ಉತ್ತಪ್ಪ, ತಡಿಯಂಗಡ ಕರುಂಬಯ್ಯ, ಆಂಡಮಾಡ ಸತೀಶ್, ತಡಿಯಂಗಡ ರಮೇಶ್, ಮನ್ನೇರ ಕಾವೇರಮ್ಮ, ತಡಿಯಂಗಡ ಉಮಾ ಆದರ್ಶ್ ಉಪಸ್ಥಿತರಿದ್ದರು.
ಆಯುಧ ಪೂಜೆ: ಸಭಾ ಕಾರ್ಯಕ್ರಮಕ್ಕೂ ಮೊದಲು ಕೋವಿ, ಕತ್ತಿ ಹಾಗೂ ಕೃಷಿ ಪರಿಕರಗಳಿಗೆ ಆಯುಧಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ಕ್ರೀಡಾ ಸ್ಪರ್ಧೆಗಳು, ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.