ಮಡಿಕೇರಿ, ಸೆ.28: ಮಡಿಕೇರಿ ದಸರಾ ಸಾಂಸ್ಕøತಿಕ ಸಮಿತಿಯಿಂದ ಆಯುಧಪೂಜಾ ದಿನ ಮತ್ತು ವಿಜಯದಶಮಿ ದಿನಗಳಂದು ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಮಡಿಕೇರಿಯ ಗಾಂಧಿ ಮೈದಾನದಲ್ಲಿನ ಕಲಾ ಸಂಭ್ರಮ ವೇದಿಕೆಯಲ್ಲಿ ಆಯೋಜಿಸಲಾಗಿದೆ.

ತಾ.29ರಂದು (ಇಂದು) ಸಂಜೆ 6.30 ಗಂಟೆಗೆ ಆಯುಧ ಪೂಜಾ ಸಮಾರಂಭದ ಅಂಗವಾಗಿ ಮಡಿಕೇರಿಯ ಲೈಟ್-ಕ್ಯಾಮರ-ಡ್ಯಾನ್ಸ್ ಹೌಸ್ ತಂಡದಿಂದ - ಹಿಪ್ ಅಪ್ ಡ್ಯಾನ್ಸ್, ಆಟಿಟ್ಯೂಡ್ ಡ್ಯಾನ್ಸ್ ತಂಡದಿಂದ ಡ್ಯಾನ್ಸ್ ಫೆಸ್ಟ್, ಮಡಿಕೇರಿಯ ಕಲಾಬಳಗ ತಂಡದಿಂದ ನಾಡಿನ ಯೋಧನ ಜೀವನ ಚರಿತ್ರೆಯನ್ನೊಳಗೊಂಡ ‘ವೀರಚರಿತ್ರೆ’ ನೃತ್ಯ ರೂಪಕ, ಗೋವಿಂದ ರಾಜು, ವಿನಯ್, ದೇವೇಂದ್ರ ಪತ್ತರ್, ಸುವೇದಿತಾ, ನೀಶ್ಮಾ ಜಗದೀಶ್ ಅವರಿಂದ ವೈವಿಧ್ಯಮಯ ಗೀತೆಗಳ ಪ್ರಸ್ತುತಿಯಿದೆ. ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ತಂಡದಿಂದ ನೃತ್ಯ, ಬೆಂಗಳೂರಿನ ‘ಡಿ’ ಕಂಪನಿಯಿಂದ ಡ್ಯಾನ್ಸ್-ಡ್ಯಾನ್ಸ್ ಕಾರ್ಯಕ್ರಮ ಆಯುಧಪೂಜಾ ವಿಶೇಷವಾಗಿದೆ.

ತಾ. 30 ರಂದು ವಿಜಯದಶಮಿ ಅಂಗವಾಗಿ ಸಂಜೆ 6.30 ಗಂಟೆಗೆ ಮಡಿಕೇರಿಯ ಎ ರಿಫ್ಲೆಕ್ಷನ್ ಡಾನ್ಸ್ ಕ್ರೂ ತಂಡದಿಂದ ಪ್ಯೂಷನ್ ಡ್ಯಾನ್ಸ್, ಮೈಸೂರು ತಾಂಡವಂ ಡ್ಯಾನ್ಸ್ ಟ್ರೂಪ್ ತಂಡದಿಂದ ನೃತ್ಯ ವೈವಿಧ್ಯ, ಕೊಡಗು ಗೌಡ ಯುವ ವೇದಿಕೆ ಪ್ರಸ್ತುತಿಯಾಗಿ ಕೊಡಗಿನಲ್ ತುಲಾ ಸಂಕ್ರಮಣದ ವೈಭವ ನೃತ್ಯ ರೂಪಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕರ್ನಾಟಕ ದರ್ಶನದ ಲೇಸರ್ ಶೋ, ಕೊಡಗಿನ ಮೂಲದ ಹೆಸರಾಂತ ಜಾದೂಗಾರ ವಿಕ್ರಮ್ ಜಾದೂಗಾರ್ ತಂಡದಿಂದ ಮ್ಯಾಜಿಕ್ ಶೋ ಪ್ರದರ್ಶಿತಗೊಳ್ಳಲಿದೆ. ಅಂತೆಯೇ ಮಕ್ಕಳಿಂದ ಆಕರ್ಷಕ ಸ್ಕೇಟಿಂಗ್ ಡಾನ್ಸ್, ಮೈಸೂರು ಜಿಲ್ಲೆಯ ಸನ್ಯಾಸಪುರದ ಗಣೇಶ್ ಮತ್ತು ತಂಡದಿಂದ ಕಂಸಾಳೆ ಹಾಗೂ ಡೊಳ್ಳು ಕುಣಿತವೂ ವಿಜಯದಶಮಿ ದಿನ ರಾತ್ರಿ ಪ್ರದರ್ಶಿತಗೊಳ್ಳಲಿದೆ. ದಸರಾ ದಿನ ರಾತ್ರಿ 11 ಗಂಟೆಯಿಂದ ಬೆಳÀಗ್ಗಿನವರೆಗೂ ಉಷಾಕೋಕಿಲ ತಂಡದಿಂದ ಆಕರ್ಷಕ ಸಂಗೀತ ರಸಮಂಜರಿ ಕಾರ್ಯಕ್ರಮ ಆಯೋಜಿತವಾಗಿದೆ.