ಮಡಿಕೇರಿ, ಸೆ. 28: ಪೊನ್ನಂಪೇಟೆ ಸಮೀಪದ ಜೋಡುಬೀಟಿ ಕೊಡವ ಕೂಟದಿಂದ 3ನೇ ವರ್ಷದ ಕೈಲ್ ಪೊಳ್ದ್ ಸಂತೋಷ ಕೂಟ ಇತ್ತೀಚೆಗೆ ನಡೆಯಿತು. ದಿನದ ಅಂಗವಾಗಿ ಮುಖ್ಯ ಅತಿಥಿಯಾಗಿದ್ದ ಹಿರಿಯರಾದ ಚೆಪ್ಪುಡೀರ ಸೋಮಯ್ಯ ತೋಕ್ ಪೂಜೆ ಮಾಡಿ. ಇಂತಹ ಕೂಟಗಳು. ನಡೆಯುವದರಿಂದ ಕೊಡವರ ಆಚಾರ-ವಿಚಾರ, ಭಾಷೆ, ಸಂಸ್ಕøತಿ ಇಂದಿನ ಯುವ ಪೀಳಿಗೆಗೆ ಗೊತ್ತಾಗುವದು. ಎಲ್ಲೇ ಇರಲಿ ನಮ್ಮ ಸಂಸ್ಕøತಿಯನ್ನು ಬಿಡಬಾರದು. ಪೋಷಕರು ಮಕ್ಕಳಿಗೆ ಒಳ್ಳೆಯ ಆಚಾರ-ವಿಚಾರ ಕಲಿಸಬೇಕೆಂದರು. ಸಭೆಯ ಅಧ್ಯಕ್ಷತೆಯನ್ನು ಕೂಟದ ಅಧ್ಯಕ್ಷ ಕಳ್ಳಿಚಂಡ ಮುತ್ತಪ್ಪ ವಹಿಸಿದ್ದರು. ದಿನದ ಅಂಗವಾಗಿ ತೆಂಗಿನಕಾಯಿಗೆ ಗುಂಡು ಹೊಡೆಯುವದು, ಕಲ್ಲು ಎಸೆಯುವದು ಸೇರಿ ಮಕ್ಕಳಿಗೆ-ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.