ಮಡಿಕೇರಿ, ಸೆ. 28: ಕೊಡವ ಲ್ಯಾಂಡ್ ಕೇಂದ್ರಾಡಳಿತ ಪ್ರದೇಶ, ಕೊಡವ ಲ್ಯಾಂಡ್ ಸ್ವಾಯತ್ತತೆ, ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ 340 - 342 ನೇ ವಿಧಿ ಪ್ರಕಾರ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಬೇಕು ಪಾಕಿಸ್ತಾನದ ಗುಪ್ತಚರ ದಳ ಐಎಸ್‍ಐ ಕೈ ಚಳಕದ ಮೂಲಕ ಭಾರತದಲ್ಲಿ ವಿದ್ವಂಸಕ ಕೃತ್ಯ ನಡೆಸಲು ರೊಹಿಂಗ್ಯಗಳನ್ನು ಬಳಸುತ್ತಿದ್ದು ಅವರುಗಳ ಮುಖಾಂತರ ನಕ್ಸಲ್ ಮಾವೊವಾದಿ ರೆಡ್ ಕಾರಿಡಾರ್, ಐಎಸ್‍ಐಎಸ್ ವಾದಿಗಳ ಗ್ರೀನ್ ಘಜ್ವಾ ತುರ್ ಹಿಂದ್ ಕಾರಿಡಾರ್ ಪಿತೂರಿಯ ಮೂಲಕ ಕೊಡವ ಕುಲವನ್ನು ಮೂಲೋತ್ಪಾಟನೆ ಮಾಡಲು ಹೊಂಚು ಹಾಕುತ್ತಿರುವ ಅಂತರರಾಷ್ಟ್ರೀಯ ಭಯೋತ್ಪಾದನೆ ನಿಗ್ರಹಿಸಬೇಕೆಂದು ಅದಕ್ಕಾಗಿ ಕೊಡವರಿಗೆ ಸಂವಿಧಾನ ಖಾತ್ರಿ ಬೇಕೆಂದು ಅಗ್ರಹಿಸಿ “ಹಾಲ್‍ಗುಂದ (ಪಾಲಂದ) ಮೇಕೇರಿರ ಐನ್‍ಮನೆಯಲ್ಲಿ ಸಿ.ಎನ್.ಸಿ ವತಿಯಿಂದ ಜನಜಾಗೃತಿ ಸಭೆ ಎನ್.ಯು ನಾಚಪ್ಪ ನೇತೃತ್ವದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ನಾಚಪ್ಪ ಅವರು ಕೊಡಗಿನ ಎಲ್ಲಾ ಗ್ರಾಮಗಳಲ್ಲೂ ಮಾವೋವಾದಿ ನಕ್ಸಲರು ಮತ್ತು ಐಎಸ್‍ಐಎಸ್ ಪಾತಕಿಗಳು ಭೂಮಿಯನ್ನು ಕಬ್ಜ ಮಾಡಲು ದಿಡ್ಡಳ್ಳಿಯ ಮಾದರಿಯಲ್ಲಿ ಕ್ಷಿಪ್ರದಾಳಿಗೆ ಸಜ್ಜಾಗಿದ್ದು, ಅದಕ್ಕಾಗಿ ಕೊಡಗಿನ ಎಲ್ಲಾ ಕಂದಾಯ ಕಚೇರಿಗಳಲ್ಲಿ ಪರಕಾಯ ಪ್ರವೇಶ ಮಾಡಿರುವ ಈ ಕೂಟ ಬೆದರಿಕೆ ತಂತ್ರ ಅನುಸರಿಸುತ್ತಾ ಕೊಡವರನ್ನು ಇಲ್ಲಿಂದ ಓಡಿಸಲು ಸಂಚು ರೂಪಿಸಲಾಗುತ್ತಿದೆ ಎಂದು ನಾಚಪ್ಪ ಹೇಳಿದರು.
ಜೀವನದಿ ಕಾವೇರಿ ಹುಟ್ಟುವ ಕೊಡಗಿನ ಉತ್ಪಾದನೆ 180 ಟಿಎಂಸಿ ನೀರಾಗಿದ್ದರೂ ನಮಗೆ ಕುಡಿಯಲು ನೀರು ನೀಡುತ್ತಿಲ್ಲ. ಕಾಫಿ ತೋಟಗಳಿಗೆ ಹೂ ಅರಳಲು ನೀರು ಅಗತ್ಯವಿದ್ದು, ನಮ್ಮದೆ ನದಿ, ತೊರೆ, ಕೆರೆಗಳಿಂದ ನೀರು ಹಾಯಿಸಲು ಜಿಲ್ಲಾಡಳಿತ ತಡೆ ಮಾಡುತ್ತಿದೆ. ಇವರ ದೃಷ್ಟಿಯಲ್ಲಿ ಕರ್ನಾಟಕವೆಂದರೆ ಬೆಂಗಳೂರು ಮಾತ್ರ. ಕೊಡಗು ಎಂದರೆ ಯುದ್ದದಲ್ಲಿ ಗೆದ್ದ ಪ್ರದೇಶವಾಗಿದ್ದು, ಇದೊಂದು ರೀತಿ ಕಪ್ಪ ಒಪ್ಪಿಸುವ ಸಾಮಂತ ಇದ್ದಹಾಗೆ. ಇಲ್ಲಿನ ಎಲ್ಲಾ ಹಕ್ಕು ಕಸಿದುಕೊಂಡು ಸಂಪನ್ಮೂಲ ಬಸಿದುಕೊಂಡು ನಮ್ಮನ್ನು ಬೀದಿಪಾಲು ಮಾಡುವ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ಆರೋಪಿಸಿದರು.
ಮೇಕೇರಿರ ಪಟ್ಟೆದಾರ ರಘು ನಾಣಯ್ಯ ಅಧ್ಯಕ್ಷತೆ ವಹಿಸಿದ್ದರು, ಮೇಕೇರಿರ ಕುಟುಂಬದ ಅಧ್ಯಕ್ಷ ವಿಜಯ ಸ್ವಾಗತಿಸಿದರು, ಮಚ್ಚೆಟಿರ ನಾಚಪ್ಪ ವಂದಿಸಿದರು, ಕಾರ್ಯಕ್ರಮದಲ್ಲಿ ಮೇಕೇರಿರ ಲತಾ, ಮೇಕೇರಿರ ಪೂವಿ, ಮೇಕೇರಿರ ಶಶಿ, ಮೇಕೇರಿರ ಪ್ರೇಮ, ಮೇಕೇರಿರ ಗೌರಿ, ಮೇಕೇರಿರ ಶೀಲಾ, ಮೇಕೇರಿರ ಜಲತಾ, ಮೇಕೇರಿರ ಪಾರ್ವತಿ, ಮೇಕೇರಿರ ನಂಜಮ್ಮ, ಮೇಕೇರಿರ ಯಶಿಕ, ಮೇಕೇರಿರ ಮೌನ, ಮೇಕೇರಿರ ಶಾಂತಿ, ಮಚ್ಚೆಟಿರ ಉದಯ, ತೇಲಪಂಡ ಕುಟ್ಟಪ್ಪ, ತೇಲಪಂಡ ನಂದ, ಅಪ್ಪಾರಂಡ ಸುರ, ಮೇಕೇರಿರ ಗಣಪತಿ, ಮೇಕೇರಿರ ಸನ್ನು ಮುಂತಾದವರು ಭಾಗವಹಿಸಿದ್ದರು.