ಮಡಿಕೇರಿ, ಅ. 1: ಮಡಿಕೇರಿ ದಸರಾ ನಾಡಹಬ್ಬ ವರ್ಣರಂಜಿತ ದೇವಲೋಕ ಸೃಷ್ಟಿಸುವದರೊಂದಿಗೆ ಅಸುರೀ ಶಕ್ತಿಯ ಸಂಹಾರದ ಸಂದೇಶ ನೀಡುವ ಮೂಲಕ ತೆರೆಕಂಡಿತು. ನಾಲ್ಕು ಶಕ್ತಿದೇವತೆಗಳ ಸಹಿತ ದಶಮಂಟಪಗಳ ಶೋಭಾಯಾತ್ರೆ ಯೊಂದಿಗೆ ವೈಭವದ ಬೆಳಕಿನ ಚಿತ್ತಾರದೊಂದಿಗೆ ಪ್ರೇಕ್ಷಕರ ಕಣ್ಮನ ಸೂರೆಗೊಂಡಿತು.
ಮಂಜಿನ ನಗರಿ ಮಡಿಕೇರಿಯಲ್ಲಿ ವರುಣನ ಕೃಪೆಯಿಂದ ನೆರೆದಿದ್ದ ಪ್ರೇಕ್ಷಕ ಸಮೂಹ ಕಿವಿಗಡಚ್ಚಿಕ್ಕುವ ವಾದ್ಯ ಸಹಿತ ವಿದ್ಯುತ್ ಅಲಂಕೃತ ಮಂಟಪೋತ್ಸವಗಳಿಂದ ವಿವಿಧ ಭಂಗಿಯ ದೇವಾನುದೇವತೆಗಳು ಅಸುರರನ್ನು ಮರ್ದಿಸುವ ದೃಶ್ಯಗಳನ್ನು ಎದುರುಗೊಂಡು ಹರ್ಷೋನ್ಮಾದ ದಿಂದ ಕುಣಿದು ಕುಪ್ಪಳಿಸುತ್ತಿದ್ದದ್ದು ಎಲ್ಲೆಡೆ ಗೋಚರಿಸಿತು.
ದೇವತೆಗಳು ದಾನವರನ್ನು ಸಂಹರಿಸುವ ದೃಶ್ಯಾವಳಿಯಿಂದ ಕೂಡಿದ ದಶ ಮಂಟಪಗಳ ಮುಂಭಾಗದಲ್ಲಿ ತಂಡೋಪತಂಡವಾಗಿ ಹರಿದು ಬಂದ ಜನಸಾಗರ ಶಬ್ಧ ವಾದ್ಯಕ್ಕೆ ತಕ್ಕಂತೆ ಬೇಧಭಾವ ಮರೆತು ಹೆಜ್ಜೆ ಹಾಕುತ್ತಿದ್ದ ಚಿತ್ರಣ 2017ರ ವೈಭವೋಪೇತ ದಸರಾ ನಾಡಹಬ್ಬಕ್ಕೆ ಸಾಕ್ಷಿಯಾಗಿತ್ತು. ಮುಸ್ಸಂಜೆಯ ನಡುವೆ ತುಂತುರು ನೀರಹನಿಗಳನ್ನು ತೊಟ್ಟಿಕ್ಕುತ್ತಲೇ ವರುಣ ವಿಜಯದಶಮಿ ಉತ್ಸವಕ್ಕೆ ಮಂಜಿನ ನಗರದೆಡೆಗೆ ಹರಿದು ಬಂದ ಜನ ಸಾಗರವನ್ನು ಸ್ವಾಗತಿಸುತ್ತಾ, ಅನಂತರದಲ್ಲಿ ಮಳೆ ಮಾತನಾಡಿ, ಸರಕಾರದಿಂದ ಸಕಾಲದಲ್ಲಿ ನೆರವು ಒದಗಿಸಲು ಕ್ರಮ ಕೈಗೊಂಡು ದಸರಾ ಉತ್ಸವವನ್ನು ಮತ್ತಷ್ಟು ಯಶಸ್ವಿಯಾಗಿ ನಡೆಸಲು ಸ್ಪಂದಿಸುವಂತೆ ನಿವೇದಿಸಿದರು. ನವರಾತ್ರಿ ಕಾರ್ಯಕ್ರಮಗಳ ಯಶಸ್ಸಿಗೆ ಶ್ರಮಿಸಿದ್ದ ಪೌರ ಕಾರ್ಮಿಕರಾದ ಅಕ್ರಂ, ಲೋಕೇಶ್ ಸೇರಿದಂತೆ ವಿವಿಧ ರೀತಿ ಸಹಕಾರ ನೀಡಿದ ಪ್ರಮುಖರನ್ನು ಗೌರವಿಸಲಾಯಿತು. ದಸರಾ ಸಮಿತಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಕಾರ್ಯಾಧ್ಯಕ್ಷ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿ ಚುಮ್ಮಿ ದೇವಯ್ಯ, ಖಜಾಂಚಿ ಸಂಗೀತ ಪ್ರಸನ್ನ ಸೇರಿದಂತೆ ಸಮಿತಿ ಪದಾಧಿಕಾರಿಗಳು ಆಸೀನ ರಾಗಿದ್ದರು. ದಸರಾ ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಹೆಚ್. ಟಿ. ಅನಿಲ್ ಕಾರ್ಯಕ್ರಮ ನಿರೂಪಿಸಿದರು.
ಆ ಬಳಿಕ ನಡೆದ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ವಾರ್ತಾ ಪ್ರಸಾರ ಇಲಾಖೆಯಿಂದ ಕರ್ನಾಟಕ ದರ್ಶನದ ಲೇಸರ್ ಶೋ, ಕೊಡಗು ಗೌಡ ಯುವ ವೇದಿಕೆಯ ತುಲಾ ಸಂಕ್ರಮಣ ವೈಭವ ರೂಪಕ, ವಿಕ್ರಂ ಜಾದೂಗಾರ್ ತಂಡ ಜಾದೂ ಪ್ರದರ್ಶನ, ಮಡಿಕೇರಿಯ ಎ ರಿಫೆಕ್ಷನ್ ತಂಡ ಪ್ಯೂಷನ್ ಡಾನ್ಸ್, ಮೈಸೂರು ತಾಂಡವಂ ತಂಡದಿಂದ ನೃತ್ಯವೈವಿಧ್ಯ ಇತ್ಯಾದಿ ಮೂಡಿ ಬಂತು. ಅನಂತರ ಮಧ್ಯರಾತ್ರಿಯಿಂದ ಮುಂಜಾನೆ ತನಕ ಬೆಂಗಳೂರಿನ ಹಾಸ್ಯನಟ ಸಾಧುಕೋಕಿಲ ಸಹೋದರಿ ಸುಧಾ ಕೋಕಿಲ ಸಂಗಡಿಗರಿಂದ ರಸಮಂಜರಿ ಕಾರ್ಯಕ್ರಮ ಆಕರ್ಷಣೆಯಿಂದ ನಡೆಯಿತು.