ಮಡಿಕೇರಿ, ಸೆ. 29 : ನಾಡಹಬ್ಬ ದಸರಾ ಉತ್ಸವದ ಪ್ರಯುಕ್ತ ನಿನ್ನೆ ದಿನ 3ಡಿ ಟೀಂ ವತಿಯಿಂದ ಗಾಂಧಿ ಮೈದಾನದಲ್ಲಿ ನಡೆದ ಯುವ ದಸರಾದಲ್ಲಿ ಯುವ ಸಮೂಹ ಸಂಭ್ರಮಿಸಿತು.ತಾಂಡವ ಕಲಾ ತಂಡದ ಸ್ವಾಗತ ನೃತ್ಯ, ಜೆಫ್ರಿ ಅಯ್ಯಪ್ಪ ಹಾಡುಗಾರಿಕೆ, ಇಂಡಿಯನ್‍ಗಾಟ್ ಟ್ಯಾಲೆಂಟ್ ತಂಡದ ಕಾರ್ಯಕ್ರಮ, ಬೀಟ್ ಬಾಕ್ಷಿಂಗ್, ಜಿಲ್ಲಾಮಟ್ಟದ ನೃತ್ಯ ಸ್ಪರ್ಧೆ ಹಾಗೂ ಡಿ.ಜೆ.ಶೋ ಈ ಎಲ್ಲ ಕಾರ್ಯಕ್ರಮಗಳ ಸವಿಯನ್ನು ಸವಿದ ಯುವ ಪಡೆ ಶಿಳ್ಳೆ ಚಪ್ಪಳೆ ಹಾಕಿ ಮೈಮರೆತು ಕುಣಿದು ಕುಪ್ಪಳಿಸಿತು. ಯುವಕ ಯುವತಿಯರಾದಿಯಾಗಿ ಮಕ್ಕಳೂ ಪಾಲ್ಗೊಂಡು ಸಂಭ್ರಮಿಸಿದರು. ಜಿಲ್ಲಾಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ಯುನೈಟೆಡ್ ಕಿಂಗ್‍ಡಮ್

(ಮೊದಲ ಪುಟದಿಂದ) ಡ್ಯಾನ್ಸ್ ಕ್ರಿವ್ ಪ್ರಥಮ, ಟೈಂ ಬ್ರೇಕರ್ ಡ್ಯಾನ್ಸ್ ಕ್ರಿವ್ ಕುಶಾಲನಗರ ದ್ವಿತೀಯ, ತೃತೀಯ ಸ್ಥಾನವನ್ನು ನಾಟಿಕಿಡ್ಸ್ ಸುಂಟಿಕೊಪ್ಪ ತಂಡ ಪಡೆಯಿತು. ನಾಟಿಕಿಡ್ಸ್ ಸುಂಟಿಕೊಪ್ಪ ಹಾಗೂ ರಿಪ್ಲೆಕ್ಷನ್ ಡ್ಯಾನ್ಸ್ ಕಂಪೆನಿ ತಂಡಗಳು ಸಮನಾದ ಅಂಕ ಪಡೆದ ಹಿನ್ನೆಲೆಯಲ್ಲಿ ಟಾಸ್ ಮೂಲಕ ನಾಟಿಕಿಡ್ಸ್ ತಂಡ ತೃತೀಯ ಸ್ಥಾನಕ್ಕೆ ಆಯ್ಕೆ ಆಯಿತು. ಸಾರ್ವಜನಿಕ ವಲಯದಿಂದ 6 ಮಂದಿ ಹಾಗೂ ಮೂರು ಮಂದಿ ಪರಿಣಿತರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಅರ್ಚನಾ ದೇಶ್‍ಮುಖ್ ಕಾರ್ಯಕ್ರಮ ನಿರೂಪಿಸಿದರು.