ಮಡಿಕೇರಿ, ಸೆ. 29: ಹದಿನಾರು ವರ್ಷಗಳ ದೀರ್ಘಾವಧಿ ಅಮರಣಾಂತ ಉಪವಾಸ ಸತ್ಯಾ ಗ್ರಹ ಕೈಗೊಂಡಿದ್ದ ಮಣಿವುರದ ಉಕ್ಕಿನ ಮಹಿಳೆ ಯೆಂದೇ ಹೆಸರು ವಾಸಿಯಾಗಿರುವ ಐರೋಮ್ ಶರ್ಮಿಳಾ ದಂಪತಿಗಳನ್ನು ಇತ್ತೀಚಿಗೆ ಕೊಡಗು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ತಮಿಳುನಾಡಿನ ಕೊಡೈಕನಾಲ್‍ನ ಅವರ ನಿವಾಸದಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಕೊಡಗಿನ ಮೂಲಭೂತ ಸಮಸ್ಯೆಗಳಿಗೆ ಹೋರಾಡುತ್ತಿರುವ ತನ್ನ ಹೋರಾಟಗಳಿಗೆ ಶರ್ಮಿಳಾ ಅವರ ಬೆಂಬಲವನ್ನು ಕೋರಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಪ್ರತಿಯೊಬ್ಬ ನಾಗರಿಕನು ಸಂಯಮ ಮತ್ತು ಶಾಂತಿಯುತ ಬದುಕನ್ನು ಕಟ್ಟಿಕೊಳ್ಳಲು ಪೂರಕವಾದ ಪರಿಸ್ಥಿತಿಯನ್ನು ಆಯಾ ಸರಕಾರಗಳು ಕಲ್ಪಿಸಿಕೊಡಬೇಕು. ಸಮಾಜದ ಕಟ್ಟಕಡೆಯ ನಾಗರಿಕನು ಕೂಡ ಸರಕಾರದ ಸೌಲಭ್ಯಗಳನ್ನು ಪಡೆದು ಅದರ ಫಲವನ್ನು ಅನುಭವಿಸುವ ನಿಟ್ಟಿನಲ್ಲಿ ಶಾಂತಿಯುತ ಹೋರಾಟಗಳನ್ನು ಮಾಡಲಾಗುವದು ಎಂದು ಮೇರಿಯಂಡ ಸಂಕೇತ್ ಪೂವಯ್ಯ ತಿಳಿಸಿದರು.
ತನ್ನ ದೀರ್ಘಾವಧಿ ಹೋರಾಟದ ಬಳಿಕೆ 2017ರ ಆಗಸ್ಟ್ 13 ರಂದು ತನ್ನ ಮನಸ್ಥಿತಿಗೆ ಹೊಂದುವ ಮತ್ತು ಹೋರಾಟಗಳಿಗೆ ಬೆಂಬಲಿಸುತ್ತದ್ದ ಬ್ರಿಟಿಷ್ ಮೂಲದ ಭಾರತೀಯ ಪ್ರಜೆ ಡೆಸ್ಮೆಂಡ್ ಕುಟಿನೊ ಅವರನ್ನು ವಿವಾಹವಾಗಿರುವ ಐರೋಮ್ ಶರ್ಮಿಳಾ ಅವರ ಬದುಕಿನ ಅನುಭವಗಳನ್ನು ಸಂಕೇತ್ ಹಂಚಿಕೊಂಡರು.
ಇದೆ ಸಂದರ್ಭ ಶರ್ಮಿಳಾ ಹಾಗೂ ಡೆಸ್ಮೆಂಡ್ ಕುಟಿನೂ ದಂಪತಿಗಳಿಗೆ ಸಂಕೇತ್ ಪೂವಯ್ಯ ಶುಭವನ್ನು ಹಾರೈಸಿದರು.