ಜಿಲ್ಲಾಡಳಿತ ನೇರ ಹೊಣೆ
ಈ ಹಿಂದೆ ನಡೆದ ಅನಾಹುತಗಳ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆದ ಹಿನೆÀ್ನಲೆಯಲ್ಲಿ ಜಿಲ್ಲಾಧಿಕಾರಿಗಳು, ಪೆÇಲೀಸ್ ಉನ್ನತಾಧಿಕಾರಿಗಳು ಹಾಗೂ ವಿವಿಧ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮುಂದೆ ಕೈಗೊಳ್ಳುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಿಶೀಲಿಸಿದ್ದರು. ಈ ನಿಟ್ಟಿನಲ್ಲಿ ಜಿಲ್ಲಾ ಪ್ರವಾಸೋಧ್ಯಮ ಇಲಾಖೆ ಜಲಪಾತದ ಗುಂಡಿಗೆ ಕಲ್ಲು ಹಾಕುವ ಕೆಲಸ ಕೈಗೊಂಡಿದ್ದರೂ ಅದರಿಂದ ಯಾವದೇ ಪ್ರಯೋಜನ ಆಗಿಲ್ಲ. ಆದುದರಿಂದ ಈ ಅನಾಹುತಕ್ಕೆ ಜಿಲ್ಲಾಡಳಿತವೇ ನೇರ ಹೊಣೆಯಾಗಿದೆ.
-ನೆಲ್ಲಚಂಡ ಕಿರಣ್ ಕಾರ್ಯಪ್ಪ, ಜಿ.ಪಂ ಸದಸ್ಯ, ಚೆಯ್ಯಂಡಾಣೆಈ ವೇಳೆ ‘ಶಕ್ತಿ’ಯೊಂದಿಗೆ ಮಾತನಾಡಿದ ಕೋಡಿರ ಪ್ರಸನ್ನ ಈ ಹಿಂದೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಚೇಲಾವರ ಜಲಪಾತ ರಸ್ತೆ ರಕ್ಷಣೆಯ ಬಗ್ಗೆ ಗಮನ ಸೆಳೆಯಲಾಗಿತ್ತು. ರಸ್ತೆ ನಿರ್ಮಿಸಲು ಸ್ಥಳೀಯ ಜಾಗದ ಮಾಲಿಕರಾದ ಬಡಕಡ ಅರಸು ಅವರಲ್ಲಿ ವಿನಂತಿ ಮಾಡಿದ ಸಂದರ್ಭದಲ್ಲಿ ಸ್ಥಳದ ಹದ್ದುಬಸ್ತು ಸರ್ವೆ ನಡೆಸಿದ್ದಲ್ಲಿ ರಸ್ತೆ ಬಿಟ್ಟುಕೊಡುವದಾಗಿ ತಿಳಿಸಿದ್ದರು. ಆದರೆ ಜಿಲ್ಲಾಧಿಕಾರಿಗಳು ಈ ಬಗ್ಗೆ ಯಾವದೇ ಕ್ರಮಕೈಗೊಂಡಿಲ್ಲ ಎಂದು ದೂರಿದರು.
-ದುಗ್ಗಳ ಸದಾನಂದ, ಪ್ರಭಾಕರ್.