ಮಡಿಕೇರಿ, ಅ. 1: ಜಿಲ್ಲೆಯ ವಿವಿಧೆಡೆ ಆಯುಧ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು.ನಾಪೋಕ್ಲು: ವಾಹನ ಚಾಲಕರು, ಮಾಲಿಕರು ಸಂಚಾರಿ ನಿಯಮಗಳನ್ನು ಪಾಲಿಸುವದರೊಂದಿಗೆ ಸಾಮಾಜಿಕ ಕಾಳಜಿಯಿಂದ ವರ್ತಿಸಿದರೆ ಸಮಾಜದಲ್ಲಿ ಪರಸ್ಪರ ನೆಮ್ಮದಿ, ಸಾಮರಸ್ಯದಿಂದ ಬದುಕಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಹೇಳಿದರು.

ನಾಪೆÇೀಕ್ಲು ವಾಹನ ಚಾಲಕರ ಮತ್ತು ಮಾಲಿಕರ ಸಂಘದಿಂದ ಏರ್ಪಡಿಸಲಾಗಿದ್ದ 27ನೇ ವರ್ಷದ ಆಯುಧ ಪೂಜಾ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆಗ ಳಲ್ಲಿಯೂ ವಾಹನ ದಟ್ಟಣೆ ಹೆಚ್ಚಾಗು ತ್ತಿದೆ. ಎಲ್ಲಾ ವಾಹನ ಚಾಲಕರು, ಮಾಲಿಕರು ಸಂಚಾರಿ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಿದರೆ ಅನಗತ್ಯ ಸಮಸ್ಯೆಗಳಿಗೆ ಕಾರಣವಾಗುವದಿಲ್ಲ. ಎಲ್ಲದಕ್ಕೂ

(ಮೊದಲ ಪುಟದಿಂದ) ಪೆÇಲೀಸರನ್ನೇ ಕಾಯದೆ ನಮ್ಮ ನಮ್ಮ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಿದರೆ ನೆಮ್ಮದಿಯ ಬದುಕು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಶಿವಚಾಳಿಯಂಡ ಜಗದೀಶ್ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಮೂವೆರ ವಿನು ಪೂಣಚ್ಚ ವಹಿಸಿದ್ದರು. ವೇದಿಕೆಯಲ್ಲಿ ಕಾಳೆಯಂಡ ಸಾಬಾ ತಿಮ್ಮಯ್ಯ, ಹೆಚ್.ಎ. ಹಂಸ, ಬಿ.ಎಂ. ಪ್ರತೀಪ್, ಕಂಗಾಂಡ ಅರುಣಾ ಮಂದಣ್ಣ, ಕುಲ್ಲೇಟಿರ ಅರುಣ್ ಬೇಬ, ಎಂ.ಎ. ಮನ್ಸೂರ್ ಅಲಿ, ಎಂ.ಜಿ. ಜಾಹಿರ್, ಬೊಪ್ಪೇರ ಕಾವೇರಪ್ಪ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಪಿ.ಎಂ. ರಶೀದ್, ಕುಂಡ್ಯೋಳಂಡ ಸಂಪತ್ ದೇವಯ್ಯ ಇದ್ದರು.

ಕಾರ್ಯಕ್ರಮದ ಪ್ರಯುಕ್ತ ಅಪರಾಹ್ನ 2 ಗಂಟೆಗೆ ಹಳೇ ತಾಲೂಕುವಿನಿಂದ ಆರಂಭವಾದ ಅಲಂಕೃತ ವಾಹನಗಳ ಮೆರವಣಿಗೆಯನ್ನು ಬಲ್ಲಮಾವಟಿ ಗ್ರಾಮ ಪಂಚಾಯಿತಿ ಸದಸ್ಯ ಬೈರುಡ ಮುತ್ತಪ್ಪ ಉದ್ಘಾಟಿಸಿದರೆ, ಸಂಜೆ 7 ಗಂಟೆಗೆ ಆರಂಭವಾದ ರಸ ಮಂಜರಿ ಕಾರ್ಯಕ್ರಮವನ್ನು ಕಾಫಿ ಬೆಳೆಗಾರ ಮಚ್ಚೂರ ರವೀಂದ್ರ ಉದ್ಘಾಟಿಸಿದರು. ಪೆÇಲೀಸ್ ಮೈದಾನದಲ್ಲಿ ಎಲ್ಲಾ ವಾಹನಗಳಿಗೂ ಸಾಮೂಹಿಕವಾಗಿ ಪೂಜೆ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀರಕ್ಷಾ ಪ್ರಭಾಕರ್ ಪ್ರಾರ್ಥನೆ, ಸಂಘದ ಸದಸ್ಯ ಹರೀಶ್ ನಿರೂಪಿಸಿ, ಮಾಜಿ ಅಧ್ಯಕ್ಷ ಕೆ.ಎಂ. ರಮೇಶ್ ಸ್ವಾಗತಿಸಿ, ವಂದಿಸಿದರು.

ಮೂರ್ನಾಡು: ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಆಯುಧ ಪೂಜಾ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಇಲ್ಲಿನ ಪಾಂಡಾಣೆ ಶಾಲಾ ಮೈದಾನದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಅಲಕೃಂತ ವಾಹನಗಳಿಗೆ ಸಾಮೂಹಿಕ ಪೂಜೆ ಸಲ್ಲಿಸಲಾಯಿತು. ಬಳಿಕ ಪಟ್ಟಣದ ಮುಖ್ಯ ಬೀದಿಯಲ್ಲಿ ಕೀಲು ಕುದುರೆ, ಕರಗ, ಹಾಸ್ಯ ಗೊಂಬೆ, ಯಕ್ಷಗಾನ ಬೇತಾಳ ಗೊಂಬೆ ನೃತ್ಯದೊಂದಿಗೆ ಅಲಕೃಂತ ವಾಹನಗಳ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಗಜಾಸುರ ವಧೆ, ಗಣಪತಿ, ಡ್ರ್ಯಾಗನ್, ಅಪಘಾತದಲ್ಲಿ ಬಲಿ, ಕಾವೇರಿ ಮಾತೆ, ದೋಣಿ ಚಿತ್ರಣಗಳನೊಳ್ಳಗೊಂಡ ಅಲಕೃಂತ ವಾಹನಗಳು ಸಾರ್ವಜನಿಕರ ಗಮನ ಸೆಳೆಯಿತು.

ಸಭಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಲುಮುಟ್ಲು ಜಮುನ, ಚೇಂಬರ್ ಆಫ್ ಕಾರ್ಮಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಬಡುವಂಡ ಅರುಣ್ ಅಪ್ಪಚ್ಚು, ಆರ್‍ಎಂಸಿ ಸದಸ್ಯ ವಾಂಚೀರ ಜಯ ನಂಜಪ್ಪ, ಗ್ರಾಮ ಪಂಚಾಯಿತಿ ಸದಸ್ಯೆ ಮೀನಾಕ್ಷಿ ಕೇಶವ, ಕೊಡಗು ಜಿಲ್ಲಾ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಎಂ.ಎಂ. ಉಸ್ಮಾನ್, ಜನತಾದಳ ಜಿಲ್ಲಾ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿದರು.

ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಬುಟಂಡ ಸುನಿಲ್ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಕಲಾವತಿ ಪೂವಪ್ಪ, ತಾಲೂಕು ಪಂಚಾಯಿತಿ ಸದಸ್ಯೆ ಶಶಿ ಪ್ರಕಾಶ್, ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪೆಮ್ಮಂಡ ಪವಿತ್ರ ಕುಂಞಪ್ಪ, ಕ್ರೀಡಾಪಟು ಬಲ್ಲಚಂಡ ಗೌತಮ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಭಾರ ಸಹಾಯಕ ಆಡಳಿತ ಅಧಿಕಾರಿ ಕಚೇರಿ ಅಧೀಕ್ಷಕ ಪಂದಿಯಂಡ ರಮೇಶ್, ಕಿಗ್ಗಾಲು ಚಾಮುಂಡೇಶ್ವರಿ ಯುವಕ ಸಂಘ ಅಧ್ಯಕ್ಷ ಪುದಿಯೊಕ್ಕಡ ವಿಪನ್ ಸೋಮಯ್ಯ, ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಗೌರವಾಧ್ಯಕ್ಷ ಕುಂಞÂರಾಮ, ಗ್ರಾಮ ಪಂಚಾಯಿತಿ ಸದಸ್ಯ ನಂದಕುಮಾರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ವೆಂಕಟರಮಣ ಭಟ್ ಅವರನ್ನು ಸನ್ಮಾನಿಸಲಾಯಿತು. ಅಲಕೃಂತ ವಾಹನ ಹಾಗೂ ಅಂಗಡಿಗಳಿಗೆ ಬಹುಮಾನ ವಿತರಿಸಲಾಯಿತು.

ರಾತ್ರಿ ಮಕ್ಕಳ ನೃತ್ಯ, ಹನಿ ಟ್ರ್ಯಾಕ್ ಮೆಲೋಡಿಸ್ ಕೂರ್ಗ್ ತಂಡದಿಂದ ರಸಮಂಜರಿ, ಕುಶಾಲನಗರ ಟೈಂ ಬ್ರೇಕರ್ ಡ್ಯಾನ್ಸ್ ತಂಡದವರಿಂದ ಡ್ಯಾನ್ಸ್ ಕಾರ್ಯಕ್ರಮ ನೆರದ ಸಭಿಕರ ಮನತಣಿಸಿತು.

ಸುಂಟಿಕೊಪ್ಪ: ಸುಂಟಿಕೊಪ್ಪದ ಆಯುಧಪೂಜಾ ಆಚರಣೆಯು ಪ್ರತೀವರ್ಷ ವಿಭಿನ್ನ ಶೈಲಿಯಲ್ಲಿ ವಾಹನ ಚಾಲಕರ ಸಂಘದವರು ಆಚರಿಸಿಕೊಂಡು ಬರುತ್ತಿದ್ದು, ಮಿನಿ ದಸಾರ ಖ್ಯಾತಿಯ ಆಯುಧಪೂಜೆಯು ಅಂಗಡಿ, ಕಛೇರಿ, ವರ್ಕ್‍ಶಾಫ್, ವಾಹನಗಳ ಅಲಂಕೃತ ಮಂಟಪದಲ್ಲಿ ದೇವಾನುದೇವತೆಗಳ ಕಲಾಕೃತಿ ಚಲನವಲನಗಳು ನೆರೆದಿದ್ದ ಸಾವಿರಾರು ಜನರ ಕಣ್ಮನ ಸೆಳೆಯಿತು.

ವಾಹನ ಚಾಲಕರ ವೇದಿಕೆಯಲ್ಲಿ ನಡೆದ ಆಯುಧಪೂಜಾ ಸಾಂಸ್ಕøತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನಪರೀಷತ್ ಸದಸ್ಯೆ ವೀಣಾಅಚ್ಚಯ್ಯ ಮಾತನಾಡಿ ಬಹಳ ವರ್ಷಗಳಿಂದ ಸುಂಟಿಕೊಪ್ಪ ವಾಹನಚಾಲಕರು ಜಾತ್ಯತೀತ ನಿಲುವಿನಲ್ಲಿ ಎಲ್ಲ ವರ್ಗದವರು ಸೇರಿಕೊಂಡು ಆಯುಧಪೂಜಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ ಸುಂಟಿಕೊಪ್ಪ ವಿಭಾಗದ ಬಹಳಷ್ಟು ಬೇಡಿಕೆ ಈಡೇರಿಸಿದ್ದೇನೆ. ಕೂಲಿ ಕಾರ್ಮಿಕರಿಗೆ ನಿವೇಶನ ಗುರುತಿಸಿ ಸೂರು ಕಲ್ಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಿದ್ದೇನೆ. ಗ್ರಾಮ ಪಂಚಾಯಿತಿಯ 11 ಬಿ ಸಮಸ್ಯೆ ಬಗ್ಗೆ ಸರ್ಕಾರದೊಂದಿಗೆ ವ್ಯವಹರಿಸಿ ನ್ಯಾಯ ದೊರಕಿಸುತ್ತೇನೆ. ಚಾಲಕರು ಮದ್ಯ ಸೇವಿಸಿ ವಾಹನ ಚಾಲಿಸಬಾರದು, ರಾಷ್ಟ್ರೀಯ ಹೆದ್ದಾರಿ ಆಗಲಿದ್ದು ಸುಂಟಿಕೊಪ್ಪ ಪಟ್ಟಣದಲ್ಲಿ ಬೈಪಾಸ್ ರಸ್ತೆ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ, ಇದು ಕಾರ್ಯರೂಪಕ್ಕೆ ಬರಲಿದೆ, ಸುಂಟಿಕೊಪ್ಪ ವಾಹನ ಚಾಲಕರ ಸಂಘದವರು ಜಾತಿ ಮತ ಧರ್ಮ ಭೇದವಿಲ್ಲದೆ ಎಲ್ಲರೂ ಸೇರಿ ಆಯುಧಪೂಜೆ ಆಚರಣೆ ನಡೆಸಿಕೊಂಡು ಬರುತ್ತಿರುವದು ಸಮಾಜಕ್ಕೆ ಮಾದರಿಯಾಗಿದೆ ಎಂದು ಅವರು ಹೇಳಿದರು.

ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಮಾತನಾಡಿ ಆಯುಧ ಪೂಜೆಯನ್ನು ಅತ್ಯಂತ ಶ್ರದ್ಧೆಯಿಂದ ವಾಹನ ಚಾಲಕರು ಹಲವಾರು ವರ್ಷದಿಂದ ಆಚರಿಸಿಕೊಂಡು ಬರುತ್ತಿರುವದು ಶ್ಲಾಘನೀಯವಾದುದು, ಸುಂಟಿಕೊಪ್ಪ ವಿಭಾಗಕ್ಕೆ ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್‍ನಿಂದ 60 ಲಕ್ಷ ರೂ ಅಭಿವೃದ್ಧಿ ಕಾರ್ಯಕ್ಕೆ ಬಿಡುಗಡೆಯಾಗಿದೆ. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ 11 ಬಿ ನಿವೇಶನ ಸಮಸ್ಯೆಯನ್ನು ಸರಕಾರದ ಮಟ್ಟದಲ್ಲಿ ವಿಧಾನ ಪರಿಷತ್ ಸದಸ್ಯರು ಶಾಸಕÀರೊಂದಿಗೆ ಸೇರಿ ಚರ್ಚಿಸಿ ಬಗೆ ಹರಿಸಲಾಗುವದು ಎಂದರು.

ಜಿ.ಪಂ. ಸದಸ್ಯ ಪಿ.ಎಂ. ಲತೀಫ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಆಯುಧಪೂಜಾ ಸಮಾರಂಭವು ದಿನದಿಂದ ದಿನಕ್ಕೆ ಕಳೆಗುಂದುತ್ತಿದೆ ಎಂದು ವಿಷಾದಿಸುತ್ತಾ, ಪ್ರೋತ್ಸಾಹಿಸುವ ದಿಸೆಯಲ್ಲಿ 7 ಸಾವಿರ ರೂ. ಸಹಾಯ ಧನ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಾಸನ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆ ಅಧ್ಯಕ್ಷರಾದ ಎ.ಲೋಕೇಶ್‍ಕುಮಾರ್ ಮಾತನಾಡಿ, ಸುಂಟಿಕೊಪ್ಪದಲ್ಲಿ ದಿ. ಗುಂಡೂರಾಯರ ಕಾಲದಿಂದಲೂ ಆಯುಧಪೂಜೆ ಯಶಸ್ವಿಯಾಗಿ ನಡೆಯುತ್ತಾ ಬರುತ್ತಿದೆ ಎಂದು ಸ್ಮರಿಸಿದರು.

ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ವಿ.ಪಿ. ಶಶಿಧರ್, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ತಾಲೂಕು ಪಂಚಾಯಿತಿ ಸದಸ್ಯೆ ಓಡಿಯಪ್ಪನ ವಿಮಾಲಾವತಿ ಸುಧೀಶ್, ಎಚ್.ಎಂ. ಸೋಮಪ್ಪ ಮಾತನಾಡಿದರು.

ಕೊಡಗು ಜಿಲ್ಲಾ ವಾಹನ ಚಾಲಕರ ಸಂಘದ ಅಧ್ಯಕ್ಷರಾದ ಎಂ.ಎ. ಉಸ್ಮಾನ್ ಊರಿನ ವಿವಿಧ ಬೇಡಿಕೆಯೊಂದಿಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ವಾಹನ ಚಾಲಕರ ಸಂಘದ ಅಧ್ಯಕ್ಷ ಬಿ.ಎಂ. ಪೂವಪ್ಪ, ವಿಎಸ್‍ಎಸ್‍ಎನ್ ಅಧ್ಯಕ್ಷÀ ಎನ್.ಸಿ. ಪೊನ್ನಪ್ಪ, ಡಿವೈಎಸ್‍ಪಿ ಸಂಪತ್ ಕುಮಾರ್, ಗುಪ್ತಚಾರ ಇಲಾಖೆ ಡಿವೈಎಸ್‍ಪಿ ದಿನೇಶ್, ಪಂಚಾಯಿತಿ ಸದಸ್ಯರುಗಳಾದ ಜಿ.ಜಿ. ಹೇಮಂತ್, ಎ.ಶ್ರೀಧರ್ ಕುಮಾರ್, ಕೆ.ಇ. ಕರೀಂ, ರತ್ನಾ ಜಯನ್, ನಾಗರತ್ನ ಸುರೇಶ್, ಶಿವಮ್ಮ ಮಹೇಶ್, ದಾನಿಗಳಾದ ಪಟ್ಟೆಮನೆ ಉದಯಕುಮಾರ್, ಬೈಮನ ತಲಾಮಧು, ಗುತ್ತಿಗೆದಾರ ಮನಿಯಪ್ಪ, ವ್ಯಾಪಾರಿ ಮೊಯ್ದು, ತಲೆಹೊರೆ ಕಾರ್ಮಿಕ ಸಂಘದ ಅಧ್ಯಕ್ಷ ಎಂ.ಎಸ್.ರವಿ, ಮಾಜಿ ಪಂಚಾಯಿತಿ ಅಧ್ಯಕ್ಷ ಸದಾಶಿವ ರೈ, ಜೆಸಿಐ ಸಂಸ್ಥೆಯ ಮಾಜಿ ಪ್ರೇಮಲತಾ ಸದಾಶಿವ ರೈ, ವಾಹನ ಚಾಲಕರ ಸಂಘದ ಮಾಜಿ ಅಧ್ಯಕ್ಷ ಹಂಸ, ಜಬ್ಬಾರ್ ಉಪಸ್ಥಿತರಿದ್ದರು.

ಕುಶಾಲನಗರದ ವಾಯ್ಸ್ ಆಫ್ ಕೂರ್ಗ್ ಬ್ಲೂಸ್ಟಾರ್ ತಂಡದವರಿಂದ ಸಂಗೀತ ರಸಮಂಜರಿ ಹಾಗೂ ಮೈಸೂರಿನ ಜಗ್ಗು ಜಾದುಗಾರ ಅವರಿಂದ ಜಾದು ಪ್ರದರ್ಶನವು ನೆರೆದಿದ್ದ ಸಹಸ್ರಾರು ಮಂದಿಯ ಮನಸೂರೆಗೊಳಿಸಿತು.

ಸೂಕ್ತ ಪೊಲೀಸ್ ಬಂದೋಬಸ್ತ್‍ನ್ನು ಕುಶಾಲನಗರ ವೃತ್ತ ನಿರೀಕ್ಷಕರಾದ ಕ್ಯಾತೇಗೌಡ ಹಾಗೂ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಜಯರಾಂ ಹಾಗೂ ಸಿಬ್ಬಂದಿಗಳು ವಹಿಸಿದ್ದರು. ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಹಾಗೂಸ್ಪಂದನ್ ಎಸ್ ರೈ ಅವರನ್ನು ಆಯುಧಪೂಜಾ ಸಮಾರಂಭದ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಕೊಡಗು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಇತ್ತೀಚೆಗೆ 2 ಬಾರಿ ಮುಖ್ಯ ಮಂತ್ರಿ ಪದಕ ಹಾಗೂ ರಾಷ್ಟ್ರಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದು ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್ ಹಾಗೂ ವಿಧಾನ ಪರಿಷತ್ ಸದಸ್ಯೆ ವೀಣಾಅಚ್ಚಯ್ಯ ಹಾಗೂ ಅತಿಥಿಗಳು ಸನ್ಮಾನಿಸಿ ಗೌರವಿಸಿದರು. ಮುಂಬೈಯಲ್ಲಿ ನಡೆದ ಭಾಷಣ ಸ್ಪರ್ದೆಯಲ್ಲಿ ಭಾರತದ ಸ್ಪರ್ಧಿ ಸುಂಟಿಕೊಪ್ಪದ ಸ್ಪಂದನ್ ಎಸ್. ರೈ ಪ್ರಥಮ ಸ್ಥಾನವನ್ನು ಪಡೆದು ಭಾರತಕ್ಕೆ ಕೀರ್ತಿ ತಂದಿದ್ದು ಅವರ ಈ ಸಾಧನೆಯನ್ನು ಪ್ರಶಂಸಿಸಿ ಅತಿಥಿಗಳು ಸನ್ಮಾನಿಸಿದರು. ಶ್ವೇತಾ ಪ್ರಾರ್ಥಿಸಿ, ಸಂವೇದಿತ ಸ್ವಾಗತ ನೃತ್ಯ ನೇರವೇರಿಸಿ, ಎಂ.ಎ.ಉಸ್ಮಾನ್ ಸ್ವಾಗತಿಸಿ, ಡಿ.ಎಂ. ಮಂಜುನಾಥ್ ನಿರೂಪಿಸಿ ವಂದಿಸಿದರು.

ವೀರಾಜಪೇಟೆ: ಶ್ರಮ ಜೀವಿಗಳಾದ ಬಸ್ ಕಾರ್ಮಿಕರಿಗೆ ಯಾವದೇ ರೀತಿಯ ಸೌಲಭ್ಯಗಳ ಯೋಜನೆ ಅಥವಾ ಭದ್ರತೆ ನೀಡಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಫಲಗೊಂಡಿವೆ ಇದರಿಂದ ಬಸ್ ಕಾರ್ಮಿಕರ ಬದುಕು ದುಸ್ತರವಾಗಿದೆ ಎಂದು ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.

ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘದ ವತಿಯಿಂದ ವೀರಾಜಪೇಟೆ ಖಾಸಗಿ ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ 12ನೇ ವರ್ಷದ ಆಯುಧ ಪೂಜಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಭೆಯನ್ನುದ್ದೇಶಿ ಮಾತನಾಡಿದರು.

ಪ್ರತಿಭಾನ್ವಿತರನ್ನು ಗುರುತಿಸಿ ಸನ್ಮಾನದ ಮೂಲಕ ಸಮಾಜ ಸೇವೆಯಲ್ಲಿಯು ತೊಡಗಿರುವದು ಶ್ಲಾಘನೀಯ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ. ಜೀವನ್ ಮಾತನಾಡಿ, 12 ವರ್ಷಗಳಿಂದ ಬಸ್ ಕಾರ್ಮಿಕ ಸಂಘ ಪಟ್ಟಣದಲ್ಲಿ ನಡೆಸಿಕೊಂಡು ಬರುತ್ತಿರುವ ಆಯುಧ ಪೂಜೆ ಸಮಾರಂಭದೊಂದಿಗೆ ಆಯ್ದ ಸಮಾಜ ಸೇವಕರನ್ನು ಗುರುತಿಸಿ ಸನ್ಮಾನ ಮಾಡುತ್ತಿರುವದು ಉತ್ತಮ ಕಾರ್ಯ ಎಂದರು. ಜೆ.ಡಿ.ಎಸ್. ತಾಲೂಕು ಸಮಿತಿ ಅಧ್ಯಕ್ಷ ಎಸ್.ಹೆಚ್. ಮತೀನ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘದ ಅಧ್ಯಕ್ಷ ಎನ್.ಪಿ. ದಿನೇಶ್ ನಾಯರ್, ಆಯುಧ ಪೂಜಾವನ್ನು ಜಾತ್ಯತೀತವಾಗಿ ಆಚರಿಸಲಾಗುತ್ತಿದೆ. ಎಲ್ಲ ಜನಾಂಗದವರು ಮುಕ್ತವಾಗಿ ಸಂಘಟನೆಯ ಮೂಲಕ ಆಯುಧ ಪೂಜಾ ಸಮಾರಂಭವನ್ನು ಅದ್ದೂರಿಯಿಂದ ಪ್ರತಿವರ್ಷ ಆಚರಿಸಿಕೊಂಡು ಬರುತ್ತಿದ್ದೇವೆ ಎಂದರು.

ಖಾಸಗಿ ಬಸ್ಸು ಕಾರ್ಮಿಕರ ಸಂಘಟನೆಯನ್ನು ಕಾರ್ಮಿಕರ ಕಲ್ಯಾಣಕ್ಕಾಗಿ ಸಹಕಾರ ಸಂಘವನ್ನಾಗಿ ಪರಿವರ್ತಿಸಲು ಸಂಘ ಚಿಂತನೆ ನಡೆಸಿದ್ದು ಇದಕ್ಕಾಗಿ ಯೋಜನೆಯನ್ನು ರೂಪಿಸಲಾಗಿದೆ. ಇದರಿಂದ ಸರ್ಕಾರದ ವಿವಿಧ ಯೋಜನೆಗಳಿಂದ ಸೌಲಭ್ಯಗಳನ್ನು ಪಡೆಯಲು ಇದು ಸಹಕಾರಿಯಾಗಲಿದೆ ಇದರಿಂದ ಬಸ್ ಕಾರ್ಮಿಕರಿಗೂ ಎಲ್ಲ ರೀತಿಯ ಪ್ರಯೋಜನವಾಗಲಿದೆ ಎಂದರು.

ಸಮಾರಂಭದಲ್ಲಿ ಖಾಸಗಿ ಬಸ್ ನಿವೃತ್ತ ನಿರ್ವಾಹಕ ಬಲ್ಲಾಡಿಚಂಡ ರವಿ ಸೋಮಯ್ಯ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಪತ್ರಕರ್ತ ಡಿ.ಎಂ. ರಾಜ್‍ಕುಮಾರ್ ಇವರುಗಳಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.

ದ್ವಿತೀಯ ಪಿ.ಯು.ಸಿ. ಯಲ್ಲಿ ಶೆ. 97.5 ಅಂಕಪಡೆದ ಡಿ.ಸಿ. ಚಂದನ, ಹಾಗೂ ಕ್ಷಿಪ್ರಾ ಅರುಣ್, ಹತ್ತನೆ ತರಗತಿಯಲ್ಲಿ ಶೇ.97 ಅಂಕ ಪಡೆದ ಕು,ಅಲಿಶಾ ವಾಜ್. ಮತ್ತು ಎಸ್.ಎಲ್.ಪ್ರಗತಿ, ಇವರುಗಳನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಅಶೋಕ ಮೋಟಾರ್ಸ್ ಮಾಲಿಕ ಬಿ.ಬಿ. ಸತೀಶ್ ರೈ, ಉದ್ಯಮಿಗಳಾದ ಬಿ.ವಿ. ಹೇಮಂತ್, ಅಜೀಜ್, ಕಾಫಿ ಬೆಳೆಗಾರ ಇಟ್ಟಿರ ಸಿದ್ದು, ನಗರ ಬಿ.ಜೆ.ಪಿ. ಅಧ್ಯಕ್ಷ ಅಂಜಪರವಂಡ ಅನಿಲ್ ಮಂದಣ್ಣ, ಬಸ್ ಕಾರ್ಮಿಕ ಸಂಘದ ಉಪಾಧ್ಯಕ್ಷ ಬಿ.ಜಿ. ನಾಗೇಶ್, ಪ್ರಧಾನ ಕಾರ್ಯದರ್ಶಿ ಟಿ.ಎನ್. ಮಂಜುನಾಥ್, ಕೋಶಾಧಿಕಾರಿ ಜೂಡಿವಾಸ್, ಸಹಕಾರ್ಯದರ್ಶಿ ಎಂ.ಎಸ್. ಅಶೋಕ್ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಮಾರಂಭದ ನಂತರ ಪಯ್ಯನೂರ್ ಎಸ್.ಎಸ್. ಮೆಲೋಡಿ ಮೇಕರ್ಸ್ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.

ಇದಕ್ಕೂ ಮೊದಲು ಬೆಳಿಗ್ಗೆ 10 ಗಂಟೆಗೆ ಸಾಮೂಹಿಕ ಆಯುಧ ಪೂಜೆಯ ಉದ್ಘಾಟನೆಯನ್ನು ಸರ್ಕಲ್‍ಇನ್ಸ್ ಪ್ಯೆಕ್ಟರ್ ಎನ್.ಕುಮಾರ್ ಆರಾಧ್ಯ ನೆರವೇರಿಸಿದರು. ಈ ಸಂದರ್ಭ ಬಸ್ ಕಾರ್ಮಿಕ ಸಂಘದ ಗೌರವ ಅಧ್ಯಕ್ಷ ಬಿ.ಎಂ. ಗಣೇಶ್, ಸಂಘದ ಕಾನೂನು ಸಲಹೆಗಾರ ಟಿ.ಪಿ. ಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲಾಂ, ಪ.ಪಂ. ಸದಸ್ಯ ಮಹಮದ್ ರಾಫಿ ಉಪಸ್ಥಿತರಿದ್ದರು. ಅನ್ನದಾನ ನಡೆದು ಬಳಿಕ ಮೋಟರ್ ಬೈಕ್ ಸಾಹಸ ಪ್ರದರ್ಶನದ ನಂತರ ಸ್ಥಳೀಯ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

ಸೋಮವಾರಪೇಟೆ: ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವತಿಯಿಂದ ಸರ್ಕಾರಿ ಬಸ್ ನಿಲ್ದಾಣದ ಭವ್ಯ ವೇದಿಕೆಯಲ್ಲಿ ಮೂಡಿಬಂದ ಸಂಗೀತ ರಸ ಸಂಜೆ ಕಾರ್ಯಕ್ರಮ ನೆರೆದಿದ್ದ ಸಾವಿರಾರು ಮಂದಿಯ ಮನತಣಿಸುವಲ್ಲಿ ಯಶಸ್ವಿಯಾಯಿತ್ತು.

ಆಯುಧ ಪೂಜೋತ್ಸವದಂದು ರಾತ್ರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಟ್ಟಣ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಸಾವಿರಾರು ಮಂದಿ ಆಗಮಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.

ತಡರಾತ್ರಿಯವರೆಗೂ ಉದಯ ಟಿ.ವಿ. ರೂಪೇಶ್ ಅವರ ಜಾಲಿಬಾಯ್ಸ್ ತಂಡದಿಂದ ಮೂಡಿಬಂದ ಅದ್ದೂರಿ ರಸಸಂಜೆ, ಝೀ ಕನ್ನಡ ಸರಿಗಮಪ ಖ್ಯಾತಿಯ ದೀಕ್ಷಾ, ಧನುಶ್ ಮತ್ತು ಪ್ರಕೃತಿ, ಬ್ರಹ್ಮಗಂಟು ಧಾರಾವಾಹಿಯಲ್ಲಿನ ಗುಂಡಮ್ಮ, ಸೂಪರ್ ಡ್ಯಾನ್ಸರ್ ಪುಟಾಣಿ ಪಂಟ್ರು ಮಧುಸೂದನ್ ಅವರುಗಳಿಂದ ಮೂಡಿಬಂದ ಸಂಗೀತ ಸುಧೆ, ನೃತ್ಯ ಕಾರ್ಯಕ್ರಮಗಳು ಜನಮನಸೂರೆಗೊಂಡವು.

ಇದಕ್ಕೂ ಮುನ್ನ ನಡೆದ ಆಯುಧ ಪೂಜೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಜಿ.ಪಂ. ಮಾಜೀ ಅಧ್ಯಕ್ಷ ವಿ.ಎಂ. ವಿಜಯ, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಹಾನಗಲ್ಲು ಗ್ರಾ.ಪಂ. ಉಪಾಧ್ಯಕ್ಷ ಮಿಥುನ್, ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಎಸ್.ಎ. ಮುರಳೀಧರ್, ನಗರಾಧ್ಯಕ್ಷ ಡಿ.ಪಿ. ಲೋಕೇಶ್,ಉದ್ಯಮಿ ಜಯರಾಂ, ಚೌಡ್ಲು ಗ್ರಾ.ಪಂ. ಸದಸ್ಯ ನತೀಶ್ ಮಂದಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಆಯುಧ ಪೂಜೋತ್ಸವ ಪ್ರಯುಕ್ತ ಅಲಂಕೃತ ವರ್ಕ್‍ಶಾಪ್‍ಗಳ ಸ್ಪರ್ಧೆ, ಅಲಂಕೃತ ವಾಹನಗಳ ಸ್ಪರ್ಧೆಯನ್ನು ಆಯೋಜಿಸಿ ಬಹುಮಾನ ವಿತರಿಸಲಾಯಿತು. ಸಂಘದ ಅಧ್ಯಕ್ಷ ಸಿ.ಸಿ. ನಂದ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸದಸ್ಯರಾದ ಕೆ.ಎ. ಇಬ್ರಾಹಿಂ ಮತ್ತು ಮಾಜೀ ಸೈನಿಕ ಕೆ.ಯು. ಸುಬ್ಬಯ್ಯ, ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿನ ಉತ್ತಮ ಸೇವೆಗಾಗಿ ಬಾಲಕೃಷ್ಣ ನಂಬಿಯಾರ್, ಬೇಸ್ ಬಾಲ್ ಕ್ರೀಡೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ಆಟಗಾರ್ತಿ, ಸೋಮವಾರಪೇಟೆಯ ಭವ್ಯ ಅವರುಗಳನ್ನು ಸನ್ಮಾನಿಸಲಾಯಿತು.

ಆಯುಧ ಪೂಜೋತ್ಸವದ ಯಶಸ್ಸಿಗೆ ಸಂಘದ ಅಧ್ಯಕ್ಷ ಸಿ.ಸಿ. ನಂದ, ಉಪಾಧ್ಯಕ್ಷ ಡಿ.ಜೆ. ಪರಮೇಶ್, ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ, ಸಹ ಕಾರ್ಯದರ್ಶಿ ಎ.ಕೆ. ಪ್ರಕಾಶ್, ಖಜಾಂಚಿ ಕೆ.ಹೆಚ್. ಖಾದರ್, ಸಹ ಕಾರ್ಯದರ್ಶಿ ಚೆನ್ನಪ್ಪ ಸೇರಿದಂತೆ ಸಂಘದ ಪದಾಧಿಕಾರಿಗಳು ಶ್ರಮಿಸಿದರು.