ಗೋಣಿಕೊಪ್ಪಲು, ಸೆ. 29: ಮನ ತಣಿಸಿದ ಭಾವಗೀತೆ, ವೈಭವ ಸೃಷ್ಠಿಸಿದ ಜನಪದ ಗೀತೆ, ಯುವಕರನ್ನು ಕುಣಿಸಿದ ಚಿತ್ರ ಗೀತೆ, ದೇಶಾಭಿಮಾನ ಮೂಡಿಸಿದ ನೃತ್ಯ, ಜನಮನ ಗೆÉದ್ದ ಸಾಂಸ್ಕøತಿಕ ವೈಭವ.
ಕಾವೇರಿ ದಸರಾ ಸಮಿತಿ ವತಿಯಿಂದ ಕನ್ನಡ, ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಇಲ್ಲಿನ ಪ್ರೌಢಶಾಲಾ ಮೈದಾನದಲ್ಲಿ ನಡೆಯುತ್ತಿರುವ 39ನೇ ವರ್ಷದ ದಸರಾ ಜನೋತ್ಸವದ 8ನೇ ದಿನ ಗೋಣಿಕೊಪ್ಪದ ಕಾವೇರಿ ಕಲಾ ಸಿರಿ ತಂಡದಿಂದ ಮೂಡಿಬಂದ ಸಾಂಸ್ಕøತಿಕ ವೈವಿದ್ಯಗಳು ಜನಮೆಚ್ಚುಗೆಗೆ ಪಾತ್ರವಾಯಿತು.
ನೆಲ್ಲಮಕ್ಕಡ ಬೋಪಣ್ಣ ಗಣಪತಿ, ಉದಯೋನ್ಮುಖ ಹಾಡುಗಾರ ಅಕ್ಷಯ್ ಕಂಠದಲ್ಲಿ ಮೂಡಿಬಂದ ಹಾಡುಗಳು ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು.
ಪವನ್ ಕುಮಾರ್ ತಂಡದಿಂದ ಜನಪದ ಗೀತೆಗಳನ್ನು ಪ್ರೇಕ್ಷಕರು ಆನಂದಿಸಿದರು. ಕಾರ್ಯಕ್ರಮದ ನಿರೂಪಣೆ ಮಾಡಿದ ಕಲಾವಿದ ಚೆನ್ನನಾಯಕ್ ಖ್ಯಾತ ಖಳನಟ ರವಿಶಂಕರ್ ಧ್ವನಿಯನ್ನು ಅನುಕರಿಸಿ ಮನಗೆದ್ದರು.
ಚಂದ್ರಶೇಖರ್ ಮತ್ತು ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ಮೂಡಿಬಂತು.
ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಕುಶಾಲನಗರ ಉಪನಿರೀಕ್ಷಕ ಮಹೇಶ್, ಸೆಸ್ಕಾಂ ಜೂನಿಯರ್ ಇಂಜಿನಿಯರ್ ಕೃಷ್ಣಕುಮಾರ್, ಹಿಂದುಳಿದ ವರ್ಗಗಳ ಅಧಿಕಾರಿ ಸುರೇಶ್, ಕೂಡಿಗೆ ಡಯಟ್‍ನ ಮುಖ್ಯಸ್ಥ ಮಲ್ಲೇಸ್ವಾಮಿ, ಸಂತ ಥೋಮಸ್ ಶಾಲೆಯ ಧರ್ಮಗುರು ಫಾದರ್ ಅಲೆಕ್ಸ್, ಉಮಾಮಹೇಶ್ವರಿ ಬಡವಾಣೆಯ ಅಧ್ಯಕ್ಷ ವಿಶ್ವನಾಥ್, ಕಾವೇರಿ ವೆಂಕಟಪ್ಪ ಬಡವಾಣೆ ಅಧ್ಯಕ್ಷ ರಜನ್ ತಿಮ್ಮಯ್ಯ, ವಿಜಯನಗರ ಬಡಾವಣೆ ಅಧ್ಯಕ್ಷ ಲಕ್ಷ್ಮಣ, ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್, ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಎನ್ ಪ್ರಕಾಶ್ ಇದ್ದರು.