ಶ್ರೀಮಂಗಲ, ಸೆ. 29: ಭಾಷೆ ಜನಾಂಗದ ಮೂಲ ಬೇರು. ಆದ್ದರಿಂದ ಕೊಡವ ಭಾಷೆಯನ್ನು ಉಳಿಸುವದು ಎಲ್ಲರ ಕರ್ತವ್ಯವಾಗಿದೆ. ಭಾಷೆ ಬೆಳೆದರೆ ಸಾಹಿತ್ಯ, ಕಲೆ, ಸಂಸ್ಕøತಿ ಬೆಳೆಯುತ್ತದೆ. ‘ಕೊಡವ ತಕ್ಕ್ ಎಳ್ತ್ ಕಾರಡ ಕೂಟ’ದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಡವ ತಕ್ಕ್ ಎಳ್ತ್ ಕಾರಡ ಕೂಟ, ಅಪ್ಪಚ್ಚಕವಿ ಕೊಡವ ಕೂಟ ಪೊನ್ನಂಪೇಟೆ ಹಾಗೂ ಅಪ್ಪಚ್ಚಕವಿ ವಿದ್ಯಾಲಯ ಪೊನ್ನಂಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಅಪ್ಪಚ್ಚಕವಿ ವಿದ್ಯಾಲಯದಲ್ಲಿ ನಡೆದ ವಿಶೇಷ ಕೊಡವ ಸಾಹಿತ್ಯ-ಸಾಂಸ್ಕøತಿಕ ಹಾಗೂ ‘ಕೂಟ’ದ ‘ಜನಪ್ರಿಯ ಕೊಡವ ಸಾಹಿತ್ಯ ಮಾಲೆ ಯೋಜನೆಯ’ 148ನೇ ಹೆಜ್ಜೆಯ ಲೇಖಕಿ ಚೊಟ್ಟೆಯಾಂಡಮಾಡ ಲಲಿತಾ ಕಾರ್ಯಪ್ಪ ಬರೆದ ‘ತುಳಿ ಕವನ’ ಪುಸ್ತಕದ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಚೊಟ್ಟೆಯಾಂಡಮಾಡ ಎಸ್.ತಮ್ಮಯ್ಯ ನಮ್ಮ ಸಂಸ್ಕøತಿಯನ್ನು ಉಳಿಸಿ ಬೆಳೆಸುವದು ನಮ್ಮದೇ ಜವಾಬ್ದಾರಿ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಪ್ಪಚ್ಚಕವಿ ಕೊಡವ ಕೂಟದ ಅಧ್ಯಕ್ಷ ಮಚ್ಚಮಾಡ ನಂಜಪ್ಪ, ಮತ್ತೋರ್ವ ಮುಖ್ಯ ಅತಿಥಿ ಅಪ್ಪಚ್ಚಕವಿ ವಿದ್ಯಾಲಯದ ಅಧ್ಯಕ್ಷ ಪೊನ್ನಿಮಾಡ ಸುರೇಶ್, ‘ಕೂಟ’ದ 148ನೇ ಹೆಜ್ಜೆಯ ಪುಸ್ತಕದ ಲೇಖಕಿ ಚೊಟ್ಟೆಯಾಂಡಮಾಡ ಲಲಿತಾ ಕಾರ್ಯಪ್ಪ ಮಾತನಾಡಿದರು.

ಈ ಸಂದರ್ಭ ಕೊಡವ ಭಾಷೆಯಲ್ಲಿ ಹಾಡುಗಾರಿಕೆ, ಹಾಸ್ಯ ಹಾಗೂ ಓದುವ ಸ್ಪರ್ಧೆಯನ್ನು ಪ್ರಾಥಮಿಕ, ಫ್ರೌಡಶಾಲೆ, ಕಾಲೇಜು ಹಾಗೂ ಸಾರ್ವಜನಿಕರಿಗೆ ನಡೆಸಿ ಬಹುಮಾನ ನೀಡಲಾಯಿತು.

ಅಪ್ಪಚ್ಚಕವಿ ವಿದ್ಯಾಲಯದ ವಿದ್ಯಾರ್ಥಿಗಳು ಪ್ರಾರ್ಥಿಸಿ, ವಿದ್ಯಾಲಯದ ಮುಖ್ಯೋಪದ್ಯಾಯಿನಿ ಮಲ್ಚೀರ ತನುಜಾ ತಿಮ್ಮಯ್ಯ ಸ್ವಾಗತಿಸಿ, ನಿರ್ದೇಶಕ ಬೊಜ್ಜಂಗಡ ನಿತಿನ್ ನಂಜಪ್ಪ ಲೇಖಕಿಯ ಪರಿಚಯ ಮಾಡಿದರು. ಖಜಾಂಚಿ ಬೋಡಂಗಡ ಜಗದೀಶ್ ತಿಮ್ಮಯ್ಯ ಸಾಂಸ್ಕøತಿಕ ಸ್ಪರ್ಧೆ ನಡೆಸಿಕೊಟ್ಟರು. ನಿರ್ದೇಶಕ ಕಾಳಿಮಾಡ ಮೋಟಯ್ಯ ನಿರೂಪಿಸಿ, ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ವಂದಿಸಿದರು.