ಮಡಿಕೇರಿ, ಅ. 3: ಮಡಿಕೇರಿ ನಗರದಲ್ಲಿ ಮನೆಗೆ ನುಗ್ಗಿ ಕಳವು ಪ್ರಕರಣಗಳು ಆಗಿಂದಾಗ್ಗೆ ನಡೆಯುತ್ತಿವೆ. ಕಳ್ಳರು ಹಣ, ಚಿನ್ನಾಭರಣಗಳನ್ನು ಅಪಹರಿಸುವದು ಸಾಮಾನ್ಯ. ಆದರೆ, ಇತ್ತೀಚೆಗೆ ಚಿನ್ನಾಭರಣದೊಂದಿಗೆ ಮನೆಯಲ್ಲಿರುವ ಕೋವಿಗಳನ್ನು ಅಪಹರಿಸುತ್ತಿರುವದು ಆತಂಕಕಾರಿ ಯಾಗಿದೆ. ಕಳೆದ ಒಂದು ತಿಂಗಳ ಹಿಂದೆ ನಗರದ ಜಯನಗರದ ನಿವಾಸಿ ಕಾಂಡಂಡ ಕಾರ್ಯಪ್ಪ ಅವರ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಬೀಗ ಒಡೆದು ನುಗ್ಗಿರುವ ಕಳ್ಳರು ರೂ. 6 ಲಕ್ಷ ಮೌಲ್ಯದ ಚಿನ್ನಾಭರಣದೊಂದಿಗೆ .22 ಇಂಡಿಯನ್ ಮೇಡ್ ರಿವಾಲ್ವರ್ ಹಾಗೂ 3 ಕಾಟ್ರಿಜ್‍ಗಳನ್ನು ಅಪಹರಿಸಿದ್ದಾರೆ.

ಈ ಬಗ್ಗೆ ಪೊಲೀಸ್ ದೂರು ದಾಖಲಾಗಿದ್ದು, ಪೊಲೀಸರು ಇದನ್ನು ಪತ್ತೆ ಹಚ್ಚಲು ಹರಸಾಹಸ ಪಡುತ್ತಿದ್ದಾರೆ. ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಮಾಜಿ ಸಚಿವೆ ಸುಮಾವಸಂತ್ ಅವರ ನಿವಾಸದ ಒತ್ತಿನಲ್ಲಿ ಬರುವ ಮನೆಯಲ್ಲಿಯೇ ಈ ಘಟನೆ ನಡೆದಿದೆ.

ಅವರ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಬೀಗ ಒಡೆದು ನುಗ್ಗಿರುವ ಕಳ್ಳರು ರೂ. 6 ಲಕ್ಷ ಮೌಲ್ಯದ ಚಿನ್ನಾಭರಣದೊಂದಿಗೆ .22 ಇಂಡಿಯನ್ ಮೇಡ್ ರಿವಾಲ್ವರ್ ಹಾಗೂ 3 ಕಾಟ್ರಿಜ್‍ಗಳನ್ನು ಅಪಹರಿಸಿದ್ದಾರೆ.

ಈ ಬಗ್ಗೆ ಪೊಲೀಸ್ ದೂರು ದಾಖಲಾಗಿದ್ದು, ಪೊಲೀಸರು ಇದನ್ನು ಪತ್ತೆ ಹಚ್ಚಲು ಹರಸಾಹಸ ಪಡುತ್ತಿದ್ದಾರೆ. ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಮಾಜಿ ಸಚಿವೆ ಸುಮಾವಸಂತ್ ಅವರ ನಿವಾಸದ ಒತ್ತಿನಲ್ಲಿ ಬರುವ ಮನೆಯಲ್ಲಿಯೇ ಈ ಘಟನೆ ನಡೆದಿದೆ.

ಮನೆಯವರಿಗೆ ಕಳವಾಗಿರುವದು ಅರಿವಾಗಿದ್ದು, ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಪ್ರಕರಣ ಬಗ್ಗೆಯೂ ಪೊಲೀಸ್ ತನಿಖೆ ಪ್ರಗತಿಯಲ್ಲಿದೆ. ಕಳವು ಮಾಡಿದ ಬಂದೂಕನ್ನು ಈ ಚೋರರು ಏನು ಮಾಡುತ್ತಾರೆ, ಎಂತಹ ಕೃತ್ಯದ ಉದ್ದೇಶ ಹೊಂದಿದ್ದಾರೆ ಎಂಬದು ನಿಗೂಢವಾಗಿದ್ದು, ಜನತೆ ಆತಂಕ ಪಡುವಂತಾಗಿದೆ. ಪೊಲೀಸರು ಇದನ್ನು ಭೇದಿಸಿದ ಬಳಿಕವಷ್ಟೆ ಸತ್ಯಾಂಶ ತಿಳಿಯಬೇಕಿದೆ.