ಮಡಿಕೇರಿ, ಅ. 3: ಇಲ್ಲಿಗೆ ಸಮೀಪದ ಬಲಮುರಿಯಿಂದ ಪಾರಾಣೆ ಕಡೆಗೆ ತೆರಳುವ ಹಳೆ ರಸ್ತೆ ಕುಸಿದು ಬಿದ್ದಿದೆ. ಕಳೆದೆರಡು ದಿನಗಳ ಹಿಂದೆ ರಸ್ತೆ ಇಭಾಗವಾಗಿದ್ದು, ರಸ್ತೆಯ ಕೆಳಭಾಗದಲ್ಲಿ ನೀರು ಹರಿದು ಹೋಗುತ್ತಿದ್ದುದರಿಂದ ಈ ಅನಾಹುತ ಸಂಭವಿಸಿದೆ. ಬಲಮುರಿಯ ಹಳೆ ಸೇತುವೆ ಮೂಲಕ ರಸ್ತೆ ಕುಸಿದಿದ್ದು, ಗ್ರಾಮಸ್ಥರು ಪರ್ಯಾಯ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ.