ನಾಪೆÇೀಕ್ಲು, ಅ. 2: ನಾಪೆÇೀಕ್ಲು ವ್ಯಾಪ್ತಿ ಸೇರಿದಂತೆ ಇಡೀ ಜಿಲ್ಲೆಯ ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ಕೂಡಲೇ ಸಂಬಂಧಿಸಿದವರು ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ನಾಪೆÇೀಕ್ಲು ಬಿಜೆಪಿ ವತಿಯಿಂದ ನಾಪೆÇೀಕ್ಲು ಪೆÇಲೀಸ್ ಠಾಣೆಯ ಬಳಿ ಮುಖ್ಯ ರಸ್ತೆಯ ಗುಂಡಿಯಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯ ಜನತೆಗೆ ಗುಂಡಿ ಭಾಗ್ಯದೊಂದಿಗೆ ಸುಳ್ಳು ಭಾಗ್ಯ ಕರುಣಿಸಿದ್ದಾರೆ. ಲೋಕೋಪಯೋಗಿ ಇಲಾಖೆ ಕಣ್ಮರೆಯಾಗಿದೆ. ರಸ್ತೆಗಳಲ್ಲಿ ಮನುಷ್ಯರ ಶವ ಸಂಸ್ಕಾರ ಮಾಡಬಹುದಾದ ಗುಂಡಿಗಳಿದ್ದರೂ, ನಾವು ರಸ್ತೆ ದುರಸ್ತಿಗೆ ಕೋಟಿ ಹಣ ನೀಡಿರುವದಾಗಿ ಸರಕಾರ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದರು. ರಸ್ತೆಯಲ್ಲಿ ವಾಹನ ಸಂಚಾರ ಸಾಧ್ಯವೇ ಇಲ್ಲ. ಕಾಲ್ನಡಿಗೆಯಲ್ಲಿಯೂ ಸಾಗಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದ ಅವರು ಒಂದು ವಾರದ ಒಳಗೆ ರಸ್ತೆ ದುರಸ್ತಿಗೆ ಲೋಕೋಪಯೋಗಿ ಇಲಾಖೆ ಕ್ರಮಕೈಗೊಳ್ಳದಿದ್ದರೆ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಗುವದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ನಾಪೆÇೀಕ್ಲು ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಪಾಡಿಯಮ್ಮಂಡ ಮನು ಮಹೇಶ್, ಶಿವಚಾಳಿಯಂಡ ಜಗದೀಶ್, ಕಂಗಾಂಡ ಜಾಲಿ ಪೂವಪ್ಪ, ಕೇಲೇಟಿರ ಸಾಬು ನಾಣಯ್ಯ, ಕುಂಡ್ಯೋಳಂಡ ವಿಶು ಪೂವಯ್ಯ, ಚೀಯಕಪೂವಂಡ ಅಪ್ಪಚ್ಚು, ಶಿವಚಾಳಿಯಂಡ ಕಿಶೋರ್, ಕುಟ್ಟಂಜೆಟ್ಟಿರ ಪೂಣಚ್ಚ, ತಿರೋಡಿರ ರಾಜ ಉತ್ತಯ್ಯ, ಮತ್ತಿತರರು ಇದ್ದರು.