ಮಡಿಕೇರಿ, ಅ. 3: ಕೊಡವ ಲ್ಯಾಂಡ್ ಕೇಂದ್ರಾಡಳಿತ ಪ್ರದೇಶ, ಕೊಡವ ಲ್ಯಾಂಡ್ ಸ್ವಾಯತ್ತತೆ, ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ 340-342ನೇ ವಿಧಿ ಪ್ರಕಾರ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಬೇಕು, ರೊಹಿಂಗ್ಯಗಳನ್ನು ಗಡಿಪಾರು ಮಾಡಬೇಕು, ಕೊಡವರಿಗೆ ಸಂವಿಧಾನ ಖಾತ್ರಿ ಬೇಕೆಂದು ಅಗ್ರಹಿಸಿ ‘ಬೊಳ್ಳರಿಮಾಡ್’ ಪುಟ್ಟಿಚಂಡ ಐನ್‍ಮನೆಯಲ್ಲಿ ಸಿ.ಎನ್.ಸಿ. ವತಿಯಿಂದ ಜನಜಾಗೃತಿ ಸಭೆ ಅಧ್ಯಕ್ಷ ಎನ್.ಯು. ನಾಚಪ್ಪ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಎನ್.ಯು ನಾಚಪ್ಪ ಮಾತನಾಡಿದರು.

ಸಿ.ಎನ್.ಸಿ. ಸಂಘಟನೆ 27ನೇ ವರ್ಷದ ಕೊಡವ ನ್ಯಾಷನಲ್ ಡೇ ಯನ್ನು ನವೆಂಬರ್ 24 ರಿಂದ 26 ರವರೆಗೆ ನಡೆಸುವ ಉದ್ದೇಶದಿಂದ ಮಡಿಕೇರಿಯಲ್ಲಿ ಬೃಹತ್ ರ್ಯಾಲಿ ನಡೆಸಲಿದ್ದು ಈ ರ್ಯಾಲಿಯಲ್ಲಿ ಎಲ್ಲರೂ ಭಾಗವಹಿಸುವದರ ಮೂಲಕ ತಮ್ಮ ಧೀಶಕ್ತಿ ದಾಖಲಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪುಟ್ಟಿಚಂಡ ಸುಬ್ರಮಣಿ ಅಧ್ಯಕ್ಷತೆ ವಹಿಸಿದ್ದರು, ಪುಟ್ಟಿಚಂಡ ನರು, ಪುಟ್ಟಿಚಂಡ ನವೀನ್, ಪುಟ್ಟಿಚಂಡ ಭರತ್, ಪುಟ್ಟಿಚಂಡ ಪೂವಣ್ಣ, ಪುಟ್ಟಿಚಂಡ ಗಣಪತಿ, ಪುಟ್ಟಿಚಂಡ ಬೋಪಣ್ಣ, ತಾತಿರ ಜಗದೀಶ್, ತಾತಿರ ದಿನೇಶ್, ಪಟ್ರಪಂಡ ಜಗದೀಶ್, ಪಟ್ರಪಂಡ ನಾಚಪ್ಪ, ಪಟ್ರಪಂಡ ಪವಿತ್ರ, ಪಟ್ರಪಂಡ ಗುರು, ಅಮ್ಮೆಯಂಡ ವಿಠಲ, ಅಮ್ಮೆಯಂಡ ಕಾಶಿ, ಬಿದ್ದಂಡ ಮನು ಮಂದಪ್ಪ, ಬಳ್ಳುಡ ಡಾನ್ ಬೋಪಣ್ಣ ಮತ್ತು ಚಂಬಂಡ ಜನತ್ ಮುಂತಾದವರು ಭಾಗವಹಿಸಿದ್ದರು.