ಮಡಿಕೇರಿ, ಅ.3 : ಕೊಡವ ಭಾಷಾ ಸಾಹಿತ್ಯ ಪರಂಪರೆಯಲ್ಲಿ ಆದಿ ಕವಿಯಾಗಿ ಪರಿಗಣಿಸಲ್ಪಡುವ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿಯವರ 150ನೇ ಜನ್ಮ ದಿನಾಚರಣೆಯನ್ನು ವಿವಿಧ ಕೊಡವ ಸಮಾಜಗಳ ಸಹಕಾರದೊಂದಿಗೆ ಅಖಿಲ ಕೊಡವ ಸಮಾಜದ ವತಿಯಿಂದ ಆಚರಿಸಲ್ಪಡುತ್ತಿದೆ. ಈ ಪ್ರಯುಕ್ತ ಕವಿಯ ಬದುಕು ಬರಹ, ಸಾಹಿತ್ಯ ಕೃಷಿಯ ಕುರಿತು ವಿದ್ಯಾರ್ಥಿ ಸಮೂಹದಲ್ಲಿ ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಅಖಿಲ ಕೊಡವ ಸಮಾಜದ ಅಪ್ಪಚ್ಚಕವಿ ಜನ್ಮೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಪ್ರೊ| ಇಟ್ಟೀರ ಕೆ. ಬಿದ್ದಪ್ಪ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಸೆ.21 ರಂದು ನಾಪೋಕ್ಲು ಕೊಡವ ಸಮಾಜದ ಸಹಕಾರದೊಂದಿಗೆ ಅಪ್ಪಚ್ಚಕವಿಯ ಜನ್ಮೋತ್ಸವ ಕಾರ್ಯಕ್ರಮಗಳಿಗೆ ವಿಧ್ಯುಕ್ತ ಚಾಲನೆ ನೀಡಲಾಗಿದೆ. ಇದೀಗ ತಾ. 11 ರಂದು ವೀರಾಜಪೇಟೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮುಂದಿನ 2018 ಸೆ.21 ರಂದು ಅಪ್ಪಚ್ಚಕವಿಯ ಜನ್ಮೋತ್ಸವದ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಪ್ರತಿ ತಿಂಗಳು ವಿವಿಧ ಕೊಡವ ಸಮಾಜಗಳ ಸಹಕಾರದೊಂದಿಗೆ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ನಾಡಿನ ಜನತೆಗೆ ಅಪ್ಪಚ್ಚಕವಿಯ ಸಾಹಿತ್ಯದ ಕುರಿತು ಅರಿವು ಮತ್ತು ಅವರ ಸಂದೇಶಗಳನ್ನು ಪಸರಿಸುವ ಮಹತ್ವದ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಬಿದ್ದಪ್ಪ ಮಾಹಿತಿ ನೀಡಿದರು.
ಗ್ರಂಥಾಲಯಕ್ಕೆ ಕವಿ ಹೆಸರು
ಹರದಾಸ ಅಪ್ಪಚ್ಚಕವಿಯ ಜನ್ಮೋತ್ಸವದ ಹಿನ್ನೆಲೆಯಲ್ಲಿ ಕೊಡಗಿನ ಜಿಲ್ಲಾ ಕೆÉೀಂದ್ರ ಗ್ರಂಥಾಲಯಕ್ಕೆ ಮತ್ತು ಕವಿಯ ಹುಟ್ಟೂರು ನಾಪೆÀÇೀಕ್ಲು ಸರಕಾರಿ ಪದವಿ ಕಾಲೆÉೀಜಿಗೆ ಅಪ್ಪಚ್ಚಕವಿಯ ಹೆಸರನ್ನು ಇಡಬೇಕು, ಅಪ್ಪಚ್ಚಕವಿಯ ಹೆಸರಿನಲ್ಲಿ ಸರಕಾರ ಅಧ್ಯಯನ ಪೀಠವನ್ನು ಮಂಗಳೂರು ಇಲ್ಲವೇ ಮೈಸೂರು ವಿವಿಗಳಲ್ಲಿ ಆರಂಭಿಸಬೇಕು, ಕೊಡಗು ಜಿಲ್ಲಾಡಳಿತದಿಂದ ಅಪ್ಪಚ್ಚಕವಿಯ ಜನ್ಮ ದಿನವನ್ನು ಸೆ.21 ರಂದು ಸರಕಾರಿ ಆಚರಣೆಯನ್ನಾಗಿ ಪ್ರತಿವರ್ಷ ಆಚರಣೆ ಮಾಡಬೇಕೆಂದು ನಿರ್ಣಯ ಕೈಗೊಳ್ಳಲಾಗಿದೆ. ಇದನ್ನು ಕವಿಯ ಜನ್ಮೋತ್ಸವದ ವಾರ್ಷಿಕ ಕಾರ್ಯಕ್ರಮ ಸಮಾರೋಪದ
(ಮೊದಲ ಪುಟದಿಂದ) 2018ರ ಸೆ.21 ರ ಒಳಗೆ ಕಾರ್ಯಗತಗೊಳಿಸುವಂತೆ ಬಿದ್ದಪ್ಪ ಮನವಿ ಮಾಡಿದರು.
ಕೊಡವ ಭಾಷೆಯಲ್ಲಿ ಸ್ಪರ್ಧೆಗಳು
ಜನ್ಮೋತ್ಸವ ಸಮಿತಿಯ ಪ್ರಧಾನ ಸಂಚಾಲಕ ಅಡ್ಡಂಡ ಸಿ. ಕಾರ್ಯಪ್ಪ ಸ್ಪರ್ಧೆಗಳ ಕುರಿತು ಮಾಹಿತಿ ನೀಡಿದರು. ಅಪ್ಪಚ್ಚಕವಿಯ ಜನ್ಮೋತ್ಸವದ ಹಿನ್ನೆಲೆಯಲ್ಲಿ 4 ರಿಂದ 7ನೇ ತರಗತಿವರೆಗಿನ ಪ್ರಾಥಮಿಕ ಶಾಲಾ ವಿಭಾಗಕ್ಕೆ ಅಪ್ಪಚ್ಚಕವಿಯ ನಾಲ್ಕು ನಾಟಕಗಳ ಸ್ಪರ್ಧೆ, ಕವಿಯ ನಾಲ್ಕು ನಾಟಕಗಳ ಪಾತ್ರಗಳ ಛದ್ಮವೇಷ ಸ್ಪರ್ಧೆ, ಪ್ರೌಢಶಾಲಾ ವಿಭಾಗದ 8 ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಕವಿಯ ನಾಲ್ಕು ನಾಟಕಗÀಳ ನಾಟಕ ಸ್ಪರ್ಧೆ (60 ನಿಮಿಷಕ್ಕೆ ಒಳಪಟ್ಟು), ನಾಟಕಗಳ ಹಾಡಿನ ಸ್ಪರ್ಧೆ, ನಾಲ್ಕು ನಾಟಕಗಳಲ್ಲಿ ಒಂದರ ವಿಷಯದ ಕುರಿತು ಭಾಷಣ ಸ್ಪರ್ಧೆ (10 ನಿಮಿಷ) ಯನ್ನು ಆಯೋಜಿಸಲಾಗಿದೆ. ಈ ಎಲ್ಲಾ ಸ್ಪರ್ಧೆಗಳು ಪ್ರಸಕ್ತ ಸಾಲಿನ ಡಿಸೆಂಬರ್ ಕೊನೆಯ ವಾರದಲ್ಲಿ ನಡೆಯಲಿದೆ ಎಂದು ಕಾರ್ಯಪ್ಪ ತಿಳಿಸಿದರು.
ಪದವಿ, ಸ್ನಾತಕೋತ್ತರ ಹಾಗೂ ಇತರೆ ವೃತ್ತಿ ಕೋರ್ಸ್ಗಳನ್ನು ಒಳಗೊಂಡ ಕಾಲೆÉೀಜು ವಿಭಾಗಕ್ಕೆ ಪ್ರಬಂಧ ಸ್ಪರ್ಧೆ(ವಿಷಯ- ಕವಿಯ ನಾಟಕಗಳ ಸಾಮಾಜಿಕ ಸುಧಾರಣೆ ಮತ್ತು ಭಕ್ತಿ ಪರಂಪರೆ), ನಾಟಕದ ಗುಂಪÀÅ ಹಾಡು ಸ್ಪರ್ಧೆ (ಕನಿಷ್ಟ 3 ಜನರ ಗುಂಪು), ಹಾಡಿಗೆ ಗುಂಪÀÅ ನೃತ್ಯ ಸ್ಪರ್ಧೆ (ಕನಿಷ್ಟ 5 ಜನರ ಗುಂಪÀÅ), ಕವಿಯ ನಾಟಕ ಸ್ಪರ್ಧೆ (60 ನಿಮಿಷಕ್ಕೆ ಒಳಪಟ್ಟು), ಭಾಷಣ ಸ್ಪರ್ಧೆ (ಕವಿಯ ನಾಟಕಗಳಲ್ಲಿ ಕಾವ್ಯ ಶ್ರೇಷ್ಠತೆ) ಮುಂದಿನ ಸಾಲಿನ ಜನವರಿ ತಿಂಗಳಿನಲ್ಲಿ ನಡೆಯಲಿದೆ.
ಸಾರ್ವಜನಿಕ ವಿಭಾಗಕ್ಕೆ ಕವಿಯ ನಾಟಕಗಳ ಹಾಡಿನ ಸ್ಪರ್ಧೆ, ಭಾಷಣ ಸ್ಪರ್ಧೆ (15 ನಿಮಿಷಕ್ಕೆ ಒಳಪಟ್ಟು. ವಿಷಯ- ಕವಿಯ ಬದುಕು ಬರಹ), ಕವಿಯ ನಾಟಕ ಸ್ಪರ್ಧೆ ( 90 ನಿಮಿಷಕ್ಕೆ ಒಳಪಟ್ಟು) ಹಾಗೂ ಕವಿಯ ನಾಟಕದ ಹಾಸ್ಯ ಪ್ರಸಂಗಗಳ ಏಕ ವ್ಯಕ್ತಿ ಪ್ರದರ್ಶನ (10 ನಿಮಿಷಕ್ಕೆ ಒಳಪಟ್ಟು) ಸ್ಪರ್ಧೆಗಳು ನಡೆಯಲಿದ್ದು, ಇದು ಮುಂದಿನ ಸಾಲಿನ ಮಾರ್ಚ್ ತಿಂಗಳಿನಲ್ಲಿ ನಡೆಯಲಿದೆ. ಎಲ್ಲಾ ಸ್ಪರ್ಧೆಗಳನ್ನು ಜಿಲ್ಲೆಯ ಮೂರು ತಾಲೂಕಿನ ವಿವಿಧೆಡೆಗಳಲ್ಲಿ ನಡೆಸಲಾಗುತ್ತದೆ ಎಂದರು.
ಕೊಡವ ಭಾಷೆಯಲ್ಲಿ ಸ್ಪರ್ಧೆಗಳು ನಡೆಯಲಿದ್ದು, ಈಗಾಗÀಲೆ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಮಾಹಿತಿಯನ್ನು ಕಳುಹಿಸಿ ಕೊಡಲಾಗಿದೆ. ಆಸಕ್ತ ಸ್ಪÀರ್ಧಿಗಳು ಅಖಿಲ ಕೊಡವ ಸಮಾಜ, ಕಾರ್ಯದರ್ಶಿಗಳು, ವೀರಾಜಪೇಟೆ ಈ ವಿಳಾಸಕ್ಕೆ ತಮ್ಮ ಪ್ರವೇಶವನ್ನು ಕಳುಹಿಸಿಕೊಡಬಹುದಾಗಿದ್ದು, ಹೆಚ್ಚಿನ ಮಾಹಿತಿಗಳಿಗಾಗಿ ಮೊ. 9448476004, ಸ್ಥಿರÀ ದೂರವಾಣಿ-08274-257247 ನ್ನು ಸಂಪರ್ಕಿಸಬಹುದೆಂದು ಕಾರ್ಯಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜನ್ಮೋತ್ಸವ ಸಮಿತಿಯ ಕಾರ್ಯ ಯೋಜನೆ ಸಹ ಸಂಚಾಲಕ ಅಮ್ಮುಣಿಚಂಡ ರಾಜ ನಂಜಪ್ಪ, ನಂದೇಟಿರ ರಾಜ ಮಾದಪ್ಪ ಸಂಯೋಜಕ ಅಜ್ಜಿಕುಟ್ಟಿರ ಸುಬ್ರಮಣಿ ಮಾದಯ್ಯ ಉಪಸ್ಥಿತರಿದ್ದರು.