ಗೋಣಿಕೊಪ್ಪಲು, ಅ. 5: ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕಾಪ್ಸ್ ಕಾಲೇಜುವಿನ ವಿದ್ಯಾರ್ಥಿನಿಯರು ಟೇಬಲ್ ಟೆನ್ನಿಸ್ ಹಾಗೂ ಬ್ಯಾಡ್‍ಮೆಂಟನ್‍ನಲ್ಲಿ ಸಾಧನೆ ಮಾಡಿದ್ದಾರೆ.

ಟೇಬಲ್ ಟೆನ್ನಿಸ್‍ನಲ್ಲಿ ಜ್ಞಾನ ಹಾಗೂ ಅನಿಶಿಕ ಮತ್ತು ಬ್ಯಾಡ್ಮಿಂಟನ್‍ನಲ್ಲಿ ಶಮ ಗಣೇಶ್ ಹಾಗೂ ಎನ್.ಡಿ ಆರ್ಯ ಗೆಲುವು ಪಡೆದಿದ್ದಾರೆ.

ಬಾಲಕರ ವಿಭಾಗದ ಟೆನ್ನಿಕಾಯ್ಟ್‍ನಲ್ಲಿ ಪ್ರಥಮ ಹಾಗೂ ಟೇಬಲ್ ಟೆನ್ನಿಸ್ ಮತ್ತು ಶಟಲ್ ಬ್ಯಾಡ್‍ಮಿಂಟನ್‍ನಲ್ಲಿ ದ್ವಿತೀಯ, ಬಾಲಕಿಯರ ವಿಭಾಗದ ಶಟಲ್ ಬ್ಯಾಡ್‍ಮಿಂಟನ್, ಟೇಬಲ್ ಟೆನ್ನಿಸ್ ಮತ್ತು ಟೆನ್ನಿಕಾಯ್ಟ್‍ನಲ್ಲಿ ಪ್ರಥಮ, ಚೆಸ್, ಬಾಸ್ಕೆಟ್ ಬಾಲ್, ಹ್ಯಾಂಡ್‍ಬಾಲ್ ಮತ್ತು ಥ್ರೋಬಾಲ್‍ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಬಾಲಕರ ವಿಭಾಗದ ಅಥ್ಲೆಟಿಕ್ಸ್‍ನಲ್ಲಿ ಪ್ರಸಿದ್ದ್ ಅಯ್ಯಪ್ಪ 100 ಮೀ ಹಾಗೂ 200 ಮೀ ಓಟದಲ್ಲಿ ಹಾಗೂ ತ್ರಿವಿಧÀ ಜಿಗಿತದಲ್ಲಿ ಪ್ರಥಮ, ಹೆಚ್ ಎಸ್ ಸಾರ್ಥಕ್ 400 ಮೀ ಓಟದಲ್ಲಿ ಪ್ರಥಮ, 800 ಮೀ ಮತ್ತು ಗುಡ್ಡಗಾಡು ಓಟದಲ್ಲಿ ದ್ವಿತೀಯ, ಕೆ ರೋಹನ್ ಹ್ಯಾಮರ್ ಎಸೆತದಲ್ಲಿ ಪ್ರಥಮ, ತಸ್ಮಯ್‍ಗೌಡ 3000 ಮೀ ಓಟದಲ್ಲಿ ದ್ವಿತೀಯ, ಸಂದೀಪ್ ಪ್ರಸಾದ್ 5 ಕಿ.ಮೀ ನಡಿಗೆ ಹಾಗೂ ಹ್ಯಾಮರ್ ಎಸೆತದಲ್ಲಿ ತೃತೀಯ, ಡಾನ್ ಕುಟ್ಟಯ್ಯ 800 ಮೀ ಓಟದಲ್ಲಿ ತೃತೀಯ, 4*400 ಮೀ ಓಟದಲ್ಲಿ ಕಾಪ್ಸ್ ತಂಡ ಪ್ರಥಮ ಸ್ಥಾನ ಪಡೆದಿದೆ.

ಬಾಲಕಿಯರ ವಿಭಾಗದ ಅಥ್ಲೆಟಿಕ್ಸ್‍ನಲ್ಲಿ ನಿಮಿಷ ಬೋಪಯ್ಯ ಎತ್ತರ ಜಿಗಿತದಲ್ಲಿ ಪ್ರಥಮ, ಎನ್ ಡಿ ಆರ್ಯನ್ ಎತ್ತರಜಿಗಿತ ಹಾಗೂ ಉದ್ದ ಜಿಗಿತದಲ್ಲಿ ದ್ವಿತೀಯ, ಸುಹಾನ ಚೆಂಗಪ್ಪ ತ್ರಿವಿದ ಜಿಗಿತದಲ್ಲಿ ದ್ವಿತೀಯ, ಭೂಮಿಕಾ ಮುತ್ತಪ್ಪ 800 ಮೀ ಓಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.