ಮಡಿಕೇರಿ, ಅ. 5: ಪ್ರಗತಿ ಪಥದಲ್ಲಿ ವೀರಾಜಪೇಟೆ ಕೊಡಗು ಮಹಿಳಾ ಸಹಕಾರ ಸಂಘ ಸಾಧನೆಯೊಂದಿಗೆ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಸಂಘದ ಅಧ್ಯಕ್ಷೆ ಕುಸುಮ ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆಯಿತು. ವರದಿ ಸಾಲಿನಲ್ಲಿ ಸಂಘಕ್ಕೆ ರೂ. 654,687.00 ನಿವ್ವಳ ಲಾಭವಾಗಿರುತ್ತದೆ ಎಂದು ಸಂಘದ ಅಧ್ಯಕ್ಷರು ತಿಳಿಸಿದ್ದಾರೆ. ವೇದಿಕೆಯಲ್ಲಿ ಉಪಾಧ್ಯಕ್ಷೆ ಮೆಟಿಲ್ದಾ ಲೋಬೋ, ನಿರ್ದೇಶಕರುಗಳಾದ ಗೀತಾ ಬೆಳ್ಳಿಯಪ್ಪ, ಜಯಶೀಲಾ ಸತೀಶ್, ಯು.ಕೆ. ಪೊನ್ನಮ್ಮ, ಐ.ಎಂ. ಕಾವೇರಮ್ಮ, ಆಶಾ ಸುಬ್ಬಯ್ಯ, ಕಮಲ ಮೇದಪ್ಪ, ಬೇಬಿ ಚಿಣ್ಣಪ್ಪ, ಹೆಚ್.ಆರ್. ಪುಷ್ಪ, ಬಿ. ಯಶೋಧ ಬಾಬು, ಕಾರ್ಯದರ್ಶಿ ಪುಷ್ಪಲತ ಉಪಸ್ಥಿತರಿದ್ದರು.