ಗೋಣಿಕೊಪ್ಪಲು, ಅ. 4: ಇಲ್ಲಿನ ವಿಜಯದಶಮಿ ಶೋಭಾಯಾತ್ರೆ ಹಿನ್ನೆಲೆ ವೀರಾಜಪೇಟೆ ಲೋಕೋಪ ಯೋಗಿ ಇಲಾಖೆಯಿಂದ ಗೋಣಿಕೊಪ್ಪಲು ಮುಖ್ಯರಸ್ತೆಯನ್ನು ಸಿಮೆಂಟ್ ಮಿಶ್ರಿತ ‘ವೆಟ್‍ಮಿಕ್ಸ್’ನಿಂದ ಮುಚ್ಚಲಾಗಿತ್ತಾದರೂ ಇದೀಗ ರಸ್ತೆಗೆ ಬಳಸಲಾದ ಕಲ್ಲುಕೋರೆ ಧೂಳಿನಿಂದ ವಾಹನ ಓಡಾಟ ಸಂದರ್ಭ ರಸ್ತೆಯಿಂದ ಧೂಳು ಗಾಢವಾಗಿ ಎಲ್ಲೆಡೆ ಮುಸುಕುತ್ತಿದ್ದು, ರಸ್ತೆ ಇಬ್ಬದಿಯ ವರ್ತಕರಿಗೂ ಕಿರಿಕಿರಿಯಾಗಿದೆ; ರಸ್ತೆಯ ಧೂಳೆಲ್ಲಾ ಅಂಗಡಿ ಮಳಿಗೆಯೊಳಗೆ ನುಗ್ಗುತ್ತಿದ್ದು ಇಂದು ಗೋಣಿಕೊಪ್ಪಲು ವರ್ತಕರ ಸಂಘದಿಂದ ನಗರದ ಅಂಗಡಿ ಮಳಿಗೆಗಳನ್ನು ಮುಚ್ಚಿ ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಗೋಣಿಕೊಪ್ಪಲಿನ ಎಲ್ಲ ವರ್ತಕರನ್ನು 11 ಗಂಟೆಯಿಂದ ಒಂದು ಗಂಟೆ ಅವಧಿ ತಮ್ಮ ತಮ್ಮ ಮಳಿಗೆಗಳನ್ನು ಮುಚ್ಚಿ ಪೆÇನ್ನಂಪೇಟೆ ಜಂಕ್ಷನ್‍ನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಗೋಣಿಕೊಪ್ಪಲು ವರ್ತಕರ ಸಂಘದ ಅಧ್ಯಕ್ಷ ಸುನೀಲ್ ಮಾದಪ್ಪ ಮತ್ತು ಪದಾಧಿಕಾರಿಗಳು ಮನವಿ ಮಾಡಿದ ಮೇರೆ ಸುಮಾರು 1 ಗಂಟೆ ಪ್ರತಿಭಟನೆ ಹಮ್ಮಿ ಕೊಳ್ಳಲಾಗಿತ್ತು.
ದಿಢೀರ್ ಬೆಳವಣಿಗೆಯಿಂದಾಗಿ ಮೈಸೂರು ರಾಜ್ಯ ಹೆದ್ದಾರಿ, ವೀರಾಜಪೇಟೆ ಮುಖ್ಯರಸ್ತೆ ಹಾಗೂ ಗೋಣಿಕೊಪ್ಪಲು-ಪೆÇನ್ನಂಪೇಟೆ ರಸ್ತೆ ಮೇಲೆ ವಾಹನ ದಟ್ಟಣೆ ಅಧಿಕವಾಗಿ ಎಲ್ಲ ವಾಹನಗಳು ಮುಖ್ಯರಸ್ತೆಯಲ್ಲಿ ಸಾಲಾಗಿ ನಿಂತು ಕಾಯಬೇಕಾಯಿತು.
ಇದೇ ಸಂದರ್ಭ ಪ್ರತಿಭಟನಾಕಾ ರರು ಮಾನವ ಸರಪಳಿ ರಚಿಸಿ, ಲೋಕೋಪಯೋಗಿ ಇಲಾಖೆ ವಿರುದ್ಧ ಧಿಕ್ಕಾರ ಕೂಗಿದರು.
ವರ್ತಕರ ಸಂಘದ ಅಧ್ಯಕ್ಷ ಸುನೀಲ್ ಮಾದಪ್ಪ ಅವರು, ಲೋಕೋಪಯೋಗಿ ಇಲಾಖಾಧಿಕಾರಿ ಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ, ನಿರ್ಲಕ್ಷ್ಯ ವಹಿಸಿದ್ದಾರೆ. ರಸ್ತೆಯಿಂದ ಏಳುತ್ತಿರುವ ಧೂಳಿ ನಿಂದಾಗಿ ಸಾರ್ವಜನಿಕರ ಆರೋಗ್ಯ ಹದಗೆಡುತ್ತಿದೆ. ದಸರಾ ಹಬ್ಬದ ಅಂಗವಾಗಿ ಡಾಂಬರು ಮೂಲಕ ರಸ್ತೆಯ ಹೊಂಡಗಳನ್ನು ಮುಚ್ಚಲು ಹೇಳಿದ್ದರೂ ಕಲ್ಲುಕೋರೆ ಧೂಳನ್ನು ತಂದು ಸುರಿದಿರುವದೇ ನಗರದ ಜನತೆಗೆ ತೊಂದರೆಯಾಗಲು ಕಾರಣ ವಾಗಿದೆ. ಈ ನಿಟ್ಟಿನಲ್ಲಿ ವೀರಾಜಪೇಟೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ
(ಮೊದಲ ಪುಟದಿಂದ) ಬರುವವರೆಗೂ ಹೋರಾಟ, ರಸ್ತೆ ತಡೆ ಮುಂದುವರಿ ಸೋಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ಸಂದರ್ಭ ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷೆ, ರೀಟಾದೇಚಮ್ಮ ಅವರು ಮಾತನಾಡಿ, ಇದೀಗ ಹೊಂಡ ಮುಚ್ಚುವ ನೆಪದಲ್ಲಿ ಕಾಟಾಚಾರದ ಕೆಲಸ ಮಾಡಿರುವ ಹಿನ್ನೆಲೆ ಧೂಳಿನಿಂದ ಬವಣೆ ಪಡಬೇಕಾಗಿದೆ. ಅನಾರೋಗ್ಯ ಪೀಡಿತರು, ಆರೋಗ್ಯವಂತರಿಗೂ ರಸ್ತೆಯ ಧೂಳು ಸೇವನೆ ಅಪಾಯಕಾರಿ ಯಾಗಿದೆ ಎಂದು ನುಡಿದರು.
ಮಾಜಿ ಎಂಎಲ್‍ಸಿ ಅರುಣ್ ಮಾಚಯ್ಯ ಅವರು ಮಾತನಾಡಿ, ಮಳೆಹಾನಿ ಪರಿಹಾರದಲ್ಲಿ ಮುಖ್ಯರಸ್ತೆಯ ಹೊಂಡಮುಚ್ಚುವ ಕೆಲಸವನ್ನು ಅಧಿಕಾರಿಗಳು ಉತ್ತಮವಾಗಿ ನಿರ್ವಹಿಸಬಹುದಿತ್ತು. ದಸರಾ ಸಂದರ್ಭ ಮಳೆಯಾದ ಹಿನ್ನೆಲೆ ಧೂಳು ಇರಲಿಲ್ಲ. ಇದೀಗ ನಿಜಕ್ಕೂ ಪಾದಚಾರಿಗಳೂ ಒಳಗೊಂಡಂತೆ, ವರ್ತಕರ ವ್ಯವಹಾರಕ್ಕೂ ಕಷ್ಟವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಲ್ಲಿ ಮಾತನಾಡಿ ಮಳೆಹಾನಿ ಪರಿಹಾರ ನಿಧಿಯಿಂದ ತುರ್ತು ಡಾಂಬರೀಕರಣ ಕಾಮಗಾರಿಗೆ ಒತ್ತಾಯಿಸಲಾಗುವದು ಎಂದು ಹೇಳಿದರು.
ಮಾಜಿ ಜಿ.ಪಂ. ಸದಸ್ಯ ಕೊಲ್ಲೀರ ಧರ್ಮಜ, ಅನೀಶ್ ಮಾದಪ್ಪ, ಎಂ.ಜಿ. ಮೋಹನ್ ಮುಂತಾದವರು ಮುಖ್ಯ ರಸ್ತೆ ದುರವಸ್ಥೆ ಬಗ್ಗೆ ಮಾತನಾಡಿದರು.
ವಾರದಲ್ಲಿ ಡಾಂಬರೀಕರಣ
ರಸ್ತೆ ತಡೆಯನ್ನು ಗಮನಿಸಿ ಗೋಣಿಕೊಪ್ಪಲು ಪೆÇಲೀಸ್ ಉಪನಿರೀಕ್ಷಕ ಹೆಚ್.ವೈ.ರಾಜು ಸ್ಥಳಕ್ಕಾಗಮಿಸಿ ರಸ್ತೆ ತಡೆ ಮಾಡದಂತೆ ಮನವಿ ಮಾಡುತ್ತಿದ್ದ ಸಂದರ್ಭವೇ ವೀರಾಜಪೇಟೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್ ಸ್ಥಳಕ್ಕೆ ಆಗಮಿಸಿದರು. ಇದೇ ಸಂದರ್ಭ ಪ್ರತಿಭಟನಾಕಾರರು ಹಾಗೂ ಅರುಣ್ ಮಾಚಯ್ಯ ಅವರಲ್ಲಿ, ತಿಂಗಳ ಅವಧಿಯಲ್ಲಿ ಗೋಣಿಕೊಪ್ಪಲಿನ 1.2 ಕಿ.ಮೀ.ಮುಖ್ಯರಸ್ತೆ ರೂ.2 ಕೋಟಿ ವೆಚ್ಚದಲ್ಲಿ ರಾಜ್ಯ ಹೆದ್ದಾರಿ ಯೋಜನೆಯಲ್ಲಿ ಅಭಿವೃದ್ಧಿಗೊಳ್ಳಲಿದೆ. ಕಾವೇರಿ ಕಾಲೇಜಿನಿಂದ ನಗರದ ಮುಖ್ಯರಸ್ತೆ ಇಬ್ಬದಿಯಲ್ಲಿ ರೂ.1 ಕೋಟಿ ವೆಚ್ಚದ ಫುಟ್‍ಪಾತ್ ಕಾಮಗಾರಿ ಆರಂಭಗೊಳ್ಳಲಿದೆ. ಟೆಂಡರ್ ಪ್ರಕ್ರಿಯೆ ಮುಗಿದಿದೆ ಎಂದು ಮಾಹಿತಿ ನೀಡಿದರು.
ಇದರಿಂದ ತೃಪ್ತರಾಗದ ಪ್ರತಿಭಟನಾಕಾರರು, ನಮ್ಮನ್ನು ರಸ್ತೆಯ ಧೂಳಿನಿಂದ ಮುಕ್ತ ಮಾಡಿ. ಇಲ್ಲವೇ ಉಗ್ರ ಹೋರಾಟ ಮಾಡುತ್ತೇವೆ. ಡಾಂಬರೀಕರಣ ಮಾಡಿದ್ದಲ್ಲಿ ಇಂದು ಪ್ರತಿಭಟನೆಯ ಅಗತ್ಯವಿರಲಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.
ಧಾರಾಕಾರ ಮಳೆಯ ಹಿನ್ನೆಲೆ ಡಾಂಬರೀಕರಣ ಅಸಾಧ್ಯ ಎಂದು ಉತ್ತರಿಸಿದ ಅಧಿಕಾರಿ ಸುರೇಶ್ ಹಾಗೂ ಕಿರಿಯ ಅಭಿಯಂತರ ನವೀನ್ ಅವರು, ಇನ್ನು ವಾರದ ಅವಧಿಯಲ್ಲಿ ತಾತ್ಕಾಲಿಕವಾಗಿ ರಸ್ತೆಯ ಹೊಂಡವನ್ನು ಡಾಂಬರೀಕರಣ ಮೂಲಕ ಮುಚ್ಚಲಾಗುವದು. ಯಾವದೇ ಧೂಳು ಬಾರದಂತೆ ಕಾಮಗಾರಿ ನಡೆಸುತ್ತೇವೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನಾ ನಿರತರು ಸ್ಥಳದಿಂದ ವಾಪಾಸ್ಸಾದರು.
ಇಂದು ಪ್ರತಿಭಟನೆಯ ಸಂದರ್ಭ ಮರ್ಚೆಂಟ್ ಬ್ಯಾಂಕ್ ಅಧ್ಯಕ್ಷ ಕಿರಿಯಮಾಡ ಅರುಣ್ ಪೂಣಚ್ಚ, ವರ್ತಕರ ಸಂಘದ ಕಾಶಿ, ಮನೋಹರ್, ಟಿ.ಕೆ. ಕುಮಾರಸ್ವಾಮಿ, ಅಪ್ಪಣ್ಣ, ಕೃಷ್ಣಪ್ಪ, ಎಂ.ಜಿ. ಕಾಂತರಾಜ್, ಪ್ರಶಾಂತ್, ಮಹಮ್ಮದ್, ಉಮ್ಮರ್, ಸ್ಟಾರ್ ಇಲೆಕ್ಟ್ರಾನಿಕ್ಸ್ ಮಾಲೀಕರು, ಚಿನ್ನ ಬೆಳ್ಳಿ ವರ್ತಕರ ಸಂಘದ ಗಜಾನನ, ಪ್ರಶಾಂತ್ ಹಾಗೂ ವಿವಿಧ ವರ್ತಕರು ಪಾಲ್ಗೊಂಡಿದ್ದರು.
ವರದಿ: ಟಿ.ಎಲ್. ಶ್ರೀನಿವಾಸ್