ಮಡಿಕೇರಿ, ಅ. 5: ಶೀರ್ಷಿಕೆ ನೋಡಿ ಹುಬ್ಬೇರಿಸಬೇಡಿ. ಜಿಲ್ಲಾಸ್ಪತ್ರೆಯ ಮಕ್ಕಳ ತಪಾಸಣಾ ವಿಭಾಗದಲ್ಲಿ ಮಕ್ಕಳಿಗೆ ತಪಾಸಣೆಯೊಂದಿಗೆ ಹೊಗೆಯ ದುರ್ಗಂಧವೂ ಉಚಿತವಾಗಿ ಸಿಗುತ್ತದೆ!

ಹೌದು ಇಂದು ಮಕ್ಕಳ ತಪಾಸಣಾ ವಿಭಾಗದ ಪಕ್ಕದಲ್ಲಿಯೇ ತೆರೆದ ಕೊಠಡಿಯೊಂದರಲ್ಲಿ ಅನುಪಯುಕ್ತ ವಸ್ತುಗಳನ್ನು ರಾಶಿ ಹಾಕಿ ಬೆಂಕಿ ಹಾಕಲಾಗಿತ್ತು. ಪರಿಣಾಮ ಭಾರೀ ಪ್ರಮಾಣದ ಹೊಗೆ ವಾತಾವರಣದಲ್ಲಿ ಹರಡಿತು. ಈ ಹೊಗೆಯಿಂದಾಗಿ ತಪಾಸಣೆಗೆ ಬಂದಿದ್ದ ಪುಟ್ಟ ಮಕ್ಕಳಾದಿಯಾಗಿ ಪೋಷಕರೂ ಕೂಡ ಕೆಲಕಾಲ ಪರದಾಡುವಂತಾಗಿತ್ತು. ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಸ್ಥಳೀಯರಾದ ಕವನ್ ಮುದ್ದಯ್ಯ ಸಣ್ಣ ಮಕ್ಕಳನ್ನು ತಪಾಸಣೆ ಮಾಡುವಂತಹ ಸ್ಥಳದಲ್ಲಿ ಈ ರೀತಿ ವಾತಾವರಣ ಹಾಳಾಗದಂತೆ ಸಂಬಂಧಿಸಿದವರು ಎಚ್ಚರ ವಹಿಸಬೇಕೆಂದು ಒತ್ತಾಯಿಸಿದ್ದಾರೆ.