ಚೆಟ್ಟಳ್ಳಿ, ಅ. 4: ಚೆಟ್ಟಳ್ಳಿಯ ಹಿಂದೂ ಮಲೆಯಾಳಿ ಸಮಾಜದ ವತಿಯಿಂದ 9ನೇ ವರ್ಷದ ಓಣಂ ಹಬ್ಬವನ್ನು ಚೆಟ್ಟಳ್ಳಿಯ ಮಂಗಳ ಸಭಾಂಗಣದಲ್ಲಿ ಆಚರಿಸಲಾಯಿತು.

ಬೆಳಿಗ್ಗೆ 7 ರಿಂದ 9 ಗಂಟೆಯವರೆಗೆ ಹೂವಿನ ರಂಗೋಲಿ (ಪೂಕಳಂ) ಸ್ಫರ್ಧೆ ನೆರವೇರಿತು. ನಂತರ ಸಂಘದ ಗೌರವ ಅಧ್ಯಕ್ಷ ವಿ.ಕೆ ವಿನು ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕೊಂಗೇಟಿರ ಆಶಿಕ್ ಚಿಟ್ಟಿಯಪ್ಪ, ಕರ್ಣಯ್ಯನ ಸುರೇಶ್, ವಾಸುದೇವನ್ ಹಾಗೂ ಎಸ್‍ಎಲ್‍ಎನ್ ಪ್ಲಾಂಟೇಶನ್‍ನ ವ್ಯವಸ್ಥಾಪಕ ಕಣ್ಣನ್ ಅತಿಥಿಗಳಾಗಿ ಭಾಗವಹಿಸಿದ್ದರು.

ಪೂರ್ವಾಹ್ನ 10 ಗಂಟೆಗೆ ಮಂಗಳ ಸಭಾಂಗಣದಿಂದ ಚೆಟ್ಟಳ್ಳಿ ಪಟ್ಟಣದ ವರೆಗೆ ಓಣಂನ ಮಾವೇಲಿ, ಚಂಡೆವಾದ್ಯದೊಂದಿಗೆ ಶೋಭಾಯಾತ್ರೆ ನೆರವೇರಿತು. 11 ಗಂಟೆಗೆ ಸಮಾಜ ಬಾಂಧವರಿಗೆ ಹಗ್ಗಜಗ್ಗಾಟ, ಓಟ, ನಿದಾನ ಬೈಕ್ ಸವಾರಿ, ಕಪ್ಪೆ ಜಿಗಿತ, ಹಲವು ಮನೋರಂಜನಾ ಕ್ರೀಡೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಪ್ರಯುಕ್ತ ವಿಶೇಷ ಭೋಜನ ಏರ್ಪಡಿಸಲಾಗಿತ್ತು. ಮಧ್ಯಾಹ್ನ 2.30ಕ್ಕೆ ಸಮಾಜದ ಅಧ್ಯಕ್ಷ ಪಿ.ಕೆ. ಶಶಿಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಮೃತಪಟ್ಟ ಸದಸ್ಯರಿಗೆ ಮೌನಾಚರಿಸಲಾಯಿತು.

ಸ್ಥಳೀಯ ಮಕ್ಕಳಿಂದ ಹಾಗೂ ಇರ್‍ಟಿಯ ನಾಟ್ಯಾಲಯ ತಂಡದಿಂದ ಸಾಂಸ್ಕøತಿಕ ಕಾರ್ಯಕ್ರಮ ನೆರವೇರಿತು. ಅಯ್ಯಂಡ್ರ ಗಿರೀಶ್ ಕುಮಾರ್, ಅಯ್ಯಂಡ್ರ ಲೀಲಾ ಸುಬ್ರಾಯ, ಸೋಮವಾರಪೇಟೆ ಹಿಂದೂ ಮಲೆಯಾಳಿ ಸಮಾಜದ ಅಧ್ಯಕ್ಷ ಪಿ.ಡಿ. ಪ್ರಕಾಶ್ ಅತಿಥಿಗಳಾಗಿ ಉಪಸ್ಥಿತರಿದ್ದರು.

ಸಂಜೆ ಸಮಿತಿಯ ಅಧ್ಯಕ್ಷ ಓ.ಕೆ. ಶ್ರೀನಿವಾಸನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವತ್ಸಲ ಶ್ರೀಧರನ್, ಸಂಘದ ಉಪಾಧ್ಯಕ್ಷ ಎ.ಎನ್. ಚಂದ್ರನ್, ಹಿರಿಯ ಮಹಿಳಾ ಸದಸ್ಯರಾದ ಸರೋಜಿನಿ ಬಾಲನ್, ಸರೋಜಿನಿ ಗಂಗಾಧರ್, ಕಣ್ಣನ್, ಸಮಿತಿ ಸದಸ್ಯರಾದ ಪಿ.ಎನ್ ಧನಲಕ್ಷ್ಮಿ, ಸುರೇಶ್ ಬಾಬು, ಶೋಭ ಮಣಿಕಂಠನ್, ಎಂ.ಯು. ವಿನೋದ್, ಕೆ.ಎಸ್. ರಾಜನ್ ವಿಜೇತರಿಗೆ ಬಹುಮಾನ ವಿತರಿಸಿದರು. ಕಾರ್ಯದರ್ಶಿ ವಿ.ಕೆ. ಪ್ರಕಾಶ್ ನಿರೂಪಿಸಿ, ವಂದಿಸಿದರು.