ಮಡಿಕೇರಿ, ಅ. 4: ಮಡಿಕೇರಿ ದಸರಾ ನಾಡಹಬ್ಬದಂದು ಮುಂಜಾವಿನಲ್ಲಿ ಇಲ್ಲಿನ ಮಹದೇವಪೇಟೆ ಕನ್ನಿಕಾ ಪರಮೇಶ್ವರಿ ದೇವಾಲಯದ ಎದುರು ಚಂದ್ರಶೇಖರ್ (26) ಎಂಬಾತನ ಕೊಲೆ ಪ್ರಕರಣ ಸಂಬಂಧ ಪೊಲೀಸರು ಮೂವರವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಕೆಳಗಿನಂತೆ ದುಷ್ಕøತ್ಯದ ವಿವರ ನೀಡಿದ್ದಾರೆ.

ದಸರಾ ಹಬ್ಬದ ದಿನದಂದು ನಗರದ ಮಹದೇವಪೇಟೆ ರಸ್ತೆಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಧಿಸಿದಂತೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಮೊ.ಸಂ. 135/2017 ಕಲಂ 302 ರೆ/ವಿ 34 ಐಪಿಸಿರಂತೆ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪತ್ತೆ ಮಾಡುವ ಬಗ್ಗೆ ಮಡಿಕೇರಿ ನಗರ ವೃತ್ತ ನಿರೀಕ್ಷಕ ಹಾಗೂ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ಅಧೀಕ್ಷಕರು ಎರಡು ತಂಡಗಳನ್ನು ರಚಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿಂತೆ ಮಾಹಿತಿ ಕಲೆಹಾಕಿದ ಅಪರಾಧ ಪತ್ತೆದಳದ ಪೊಲೀಸ್ ನಿರೀಕ್ಷಕರ ತಂಡ ಆರೋಪಿತರು ತಾ. 30.09.2017ರಂದು ದಸರಾ ಆಚರಣೆಯ ವೇಳೆ ಕಾವೇರಿ ಬೇಕರಿಯ ಬಳಿ ಸೇರಿ ಜಗಳÀ ಅಡಿರುವ ಮಾಹಿತಿ ಬಂದ ಮೇರೆಗೆ ವಿಡಿಯೋಗ್ರಾಫರ್ ರೆಕಾರ್ಡ್ ಮಾಡಿದ್ದ ವಿಡಿಯೋವನ್ನು ಪರಿಶೀಲಿಸಲಾಗಿ ರಾಶಿದ್, ಇಮ್ರಾನ್ ಅಲಿಯಾಸ್ ಭಾಯಾ ಶಂಶೀರ್ ಇವರುಗಳ ಪೈಕಿ ರಾಶಿದ್ ಮತ್ತು ಇಮ್ರಾನ್ ಅಲಿಯಾಸ್ ಇಂಬು ಮೃತ ಚಂದ್ರಶೇಖರನೊಂದಿಗೆ ತಾಯಿಯನ್ನು ಬೈದನೆಂಬ ಕಾರಣಕ್ಕೆ ಜಗಳ ತೆಗೆದು ಕಾವೇರಿ ಬೇಕರಿಯ ಬಳಿ ಚಂದ್ರಶೇಖರ್‍ಗೆ ರಾಶಿದ ಹಲ್ಲೆ ಮಾಡಿದ್ದ. ಅದೇ ವೇಳೆಗೆ ಅಲ್ಲಿದ್ದ ನಗರಸಭೆ ಸದಸ್ಯ ಪ್ರಕಾಶ್ ಆಚಾರ್ಯ ಹಾಗೂ ಇತರರು ಮಧ್ಯೆ ಪ್ರವೇಶಿಸಿ ಜಗಳ ಬಿಡಿಸಿ ಕಳುಹಿಸಿದ್ದಾರೆ.

ನಂತರ ಈ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಲಾಗಿ ರಾತ್ರಿ ಸುಮಾರು 12 ಗಂಟೆಗೆ ನಗರದ ಗುಜರಿ ಹಿಂಭಾಗದ ಈದ್ಗಾ ಮೈದಾನದ ಬಳಿ ಅಬ್ದುಲ್, ರೋಷನ್ ರೆಹಮಾನ್, ರಾಶಿದ್, ನÀಜೀರ್ ಅಲಿಯಾಸ್ ನÀಜ್ಜು, ಸಾಹುಲ್ ಹಮೀದ್, ಆಶಿಕ್, ಕಮಟಿ ರಿಸ್ವಾನ್, ಬೋಟಿ ಲತೀಫ್ ಇವರುಗಳು ಸೇರಿದ್ದಾರೆ. ಎಲ್ಲರೂ ಸೇರಿ ಗಾಂಜಾವನ್ನು ಬೀಡಿಯೊಳಗೆ ಹಾಕಿ ಸೇದಿ, ಮದ್ಯಪಾನ ಮಾಡುತ್ತಿರುವಾಗ್ಗೆ, ತಮ್ಮ ತಾಯಿಯನ್ನು

(ಮೊದಲ ಪುಟದಿಂದ) ಬೈದ ವಿಷಯದಲ್ಲಿ ಕಾವೇರಿ ಬೇಕರಿಯ ಬಳಿ ಗಲಾಟೆಯಾದ ಬಗ್ಗೆ ರಾಶಿದ್ ಅಲ್ಲಿದ್ದ ಸ್ನೇಹಿತರಿಗೆ ತಿಳಿಸಿದ್ದಾನೆ. ಇಷ್ಟೆಲ್ಲಾ ಘಟನೆಗಳು ನಡೆದಿದ್ದರೂ ಇಮ್ರಾನ್ ಅಲಿಯಾಸ್ ಇಂಬನು ಚಂದ್ರಶೇಖರ ಜೊತೆ ತಿರುಗುತ್ತಿರುವದಾಗಿ ರೋಷನ್, ರೆಹಮಾನ್, ರಾಶಿದ್ ಹಾಗೂ ನಜೀರ್ ಅಲಿಯಾಸ್ ನಜ್ಜು ಚಂದ್ರಶೇಖರ ಮೇಲೆ ಮರು ಹಲ್ಲೆ ಮಾಡಿದ್ದಾರೆ. ಇದನ್ನು ತಡೆಯಲು ಬಂದ ಇಮ್ರಾನ್ ಅಲಿಯಾಸ್ ಇಂಬನಿಗೆ ನಜೀರ್, ಸಾಹುಲ್ ಹಮೀದ್ ಹಲ್ಲೆ ಮಾಡಿದ್ದು, ಆತನ ಮೂಗಿಗೆ ಹಾಗೂ ಕಣ್ಣಿಗೆ ಪೆಟ್ಟಾಗಿ ಆತನು ಪೊಲೀಸರಿಗೆ ದೂರು ನೀಡುವದಾಗಿ ಮೊಬೈಲ್‍ನಿಂದ ಕರೆ ಮಾಡಿದ್ದಾನೆ. ಆ ಮೇರೆಗೆ ಅಲ್ಲಿಗೆ ಪೊಲೀಸ್ ವಾಹನವೊಂದು ಬಂದಿದ್ದು, ಎಲ್ಲರು ಅಲ್ಲಿಂದ ಓಡಿ ಹೋಗಿರುತ್ತಾರೆಂದು ಮಾಹಿತಿ ತಿಳಿದು ಬಂದಿರುತ್ತದೆ.

ನಂತರ ಚಂದ್ರಶೇಖರನು ತನ್ನ ಸ್ನೇಹಿತರಾದ ರಾಶಿದ್, ಮುಸ್ತಫಾ, ಕಮಟಿ ರಿಜ್ಜು, ಫಾಸಿಲ್, ಸಾಹುಲ್ ಹಮೀದ್ ಹಾಗೂ ನಜೀರ್, ಜಮೀರ್, ಕಲಂದರ್ ಅವರೊಂದಿಗೆ ಮಹದೇವಪೇಟೆಯ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಎದುರಿನ ಅಂಗಡಿಯ ಕಟ್ಟೆಯ ಮೇಲೆ ಬಂದು ಕುಳಿತಿದ್ದಾನೆ. ಅಲ್ಲಿಗೆ ಬಂದ ರೋಷನ್ ರೆಹಮಾನ್ ಮತ್ತ್ತೆ ಜಗಳ ತೆಗೆದಿದ್ದು, ಚಂದ್ರಶೇಖರನು ರೋಷನ್‍ನಿಗೆ ತಳ್ಳಿದಾಗ ಸಿಟ್ಟಿಗೆದ್ದ ರೋಷನ್ ತನ್ನ ಸ್ನೇಹಿತರಾದ ರಾಶಿದ್ ಹಾಗೂ ನಜೀರ್ ಸಹಾಯದಿಂದ ತನ್ನೊಂದಿಗೆ ತಂದಿದ್ದ ಚಾಕೂವಿನಿಂದ ಚಂದ್ರಶೇಖರನ ಕಿವಿಯ ಕೆಳಗೆ ಚುಚ್ಚಿದ್ದಾನೆ. ಈ ವೇಳೆ ಚಂದ್ರಶೇಖರನು ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದುದನ್ನು ನೋಡಿದ ಎಲ್ಲರೂ ಬೇರೆ ಬೇರೆಯಾಗಿ ಓಡಿ ಹೋಗಿದ್ದಾರೆ. ನಂತರ ಆರೋಪಿ ರೋಷನ್ ರೆಹಮಾನ್ ತಮ್ಮ ದೊಡ್ಡಪ್ಪನ ಮಗ ಕಿಫಾಯತ್ತುಲ್ಲಾ ಎಂಬವರ ಇಮಾರತ್ ಹೊಟೇಲ್‍ಗೆ ಹೋಗಿದ್ದಾನೆ. ಈ ಬಗ್ಗೆ ಸುಳಿವು ಪಡೆದ ಪೊಲೀಸರು ಹೊಟೇಲ್‍ಗೆ ತೆರಳಿ ಅಲ್ಲಿನ ಸಿಸಿಟಿವಿಯ ವಿಡಿಯೋವನ್ನು ಪರಿಶೀಲಿಸಿದಾಗ ಆರೋಪಿ ಅಲ್ಲಿಗೆ ಹೋಗಿ ಅಲ್ಲಿನ ಸಿಬ್ಬಂದಿಯೊಂದಿಗೆ ಮಾತನಾಡಿದ ಬಗ್ಗೆ ತಿಳಿದು ಬಂತು. ಸದರಿ ಆರೋಪಿಯ ಪತ್ತೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾಗ ಆರೋಪಿತನು ಕುಶಾಲನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ ಇರುವದಾಗಿ ದೊರೆತ ಖಚಿತ ವರ್ತಮಾನದ ಮೇರೆಗೆ ಈ ದಿನ ಬೆಳಿಗ್ಗೆ 5.30 ಗಂಟೆಗೆ ಆರೋಪಿ ರೋಷನ್ ರೆಹಮಾನ್‍ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ, ಮೃತ ಚಂದ್ರಶೇಖರನು ತಮ್ಮೊಂದಿಗೆ ಹಲವಾರು ವರ್ಷಗಳಿಂದ ಸ್ನೇಹಿತನಾಗಿದ್ದ ಬಗ್ಗೆ ಒಪ್ಪಿಕೊಂಡಿದ್ದಾನೆ. ಅಲ್ಲದೆ ತಮ್ಮ ತಾಯಿಗೆ ಬೈದ ಕಾರಣಕ್ಕಾಗಿ ಆತನ ಮೇಲೆ ದ್ವೇಷವಿಟ್ಟುಕೊಂಡು ದಸರಾ ದಿನದಂದು ಮಡಿಕೇರಿಯಲ್ಲಿ ಜನಜಂಗುಳಿಯಲ್ಲಿ ಆತನನ್ನು ಕೊಲೆ ಮಾಡಿದರೆ ಯಾರಿಗೂ ಗೊತ್ತಾಗುವದಿಲ್ಲವೆಂದು ಈದ್ಗಾ ಮೈದಾನದ ಬಳಿ ರಾಶಿದ್ ಹಾಗೂ ನಜೀರ್‍ರೊಂದಿಗೆ ಸೇರಿ ಒಳಸಂಚು ರೂಪಿಸಿದ್ದಾಗಿ ಪ್ರಮುಖ ಆರೋಪಿ ವಿಚಾರಣೆಯಲ್ಲಿ ಬಾಯಿ ಬಿಟ್ಟಿದ್ದಾನೆ. ಅಲ್ಲದೆ ಚಂದ್ರಶೇಖರನನ್ನು ತಮ್ಮ ಜೊತ್ತೆಯಲ್ಲಿಯೇ ಇರಿಸಿಕೊಳ್ಳುವಂತೆ ಹೇಳಿ ತಾನು ಮನೆಯಿಂದ ಚಾಕು ತಂದು ತನ್ನ ಸ್ನೇಹಿತರೊಂದಿಗೆ ಸೇರಿ ಕೊಲೆ ಮಾಡಿರುವದಾಗಿ ತಪ್ಪೊಪ್ಪಿಕೊಂಡಿರುತ್ತಾನೆ. ಈತನು ನೀಡಿದ ಮಾಹಿತಿಯನ್ನಾಧರಿಸಿ ಆರೋಪಿಗಳಾದ ರಾಶಿದ್ ಹಾಗೂ ನಜೀರ್‍ನನ್ನು ಬಂಧಿಸಲಾಗಿರುತ್ತದೆ.

ಬಂಧಿತ ಆರೋಪಿತರಲ್ಲಿ ಪ್ರಮುಖ ಆರೋಪಿ ಅಬ್ದುಲ್ ರೋಷನ್ ರೆಹಮಾನ್ ಅಲಿಯಾಸ್ ರೋಷನ್ (32) ತಂದೆ ಮೊಹಮ್ಮದ್ ಖಲೀಲ್, ಮೊಬೈಲ್ ಟೆಕ್ನೀಷಿಯನ್, ಗಣಪತಿ ಬೀದಿ, ಮಡಿಕೇರಿ ನಿವಾಸಿಯಾಗಿದ್ದು, ಎರಡನೇ ಆರೋಪಿ ಎಂ.ಜಡ್. ಮೊಹಮ್ಮದ್ ರಾಶಿದ್ ಅಲಿಯಾಸ್ ರಾಶಿದ್ (34) ತಂದೆ ಎಂ.ಐ. ಜಕ್ರಿಯಾ, ಕಾರು ಚಾಲಕ, ವಿಘ್ನೇಶ್ ಮೆಡಿಕಲ್ಸ್ ಎದುರು, ಮಹದೇವಪೇಟೆ ಮಡಿಕೇರಿ, ಮೂರನೇ ಆರೋಪಿ ನಜೀರ್ ಅಲಿಯಾಸ್ ನಜ್ಜು (28) ತಂದೆ ನಿಸ್ಸಾರ್, ಆಟೋ ಚಾಲಕ, ಮಖಾನ್ ಗಲ್ಲಿ, ರಾಣಿಪೇಟೆ, ಮಡಿಕೇರಿ ನಿವಾಸಿಯಾಗಿದ್ದಾರೆ.

ಈ ಪ್ರಕರಣವನ್ನು ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಮಾರ್ಗದರ್ಶನ ಹಾಗೂ ಮಡಿಕೇರಿ ಉಪಾಧೀಕ್ಷಕ ಕೆ.ಎಸ್. ಸುಂದರ್‍ರಾಜ್ ನೇತೃತ್ವದಲ್ಲಿ ಮಡಿಕೇರಿ ನಗರ ವೃತ್ತ ನಿರೀಕ್ಷಕ ಐ.ಪಿ. ಮೇದಪ್ಪ ಹಾಗೂ ಡಿಸಿಐಬಿ ಪೊಲೀಸ್ ಇನ್ಸ್‍ಪೆಕ್ಟರ್ ಎಂ. ಮಹೇಶ್ ನೇತೃತ್ವದಲ್ಲಿ ಮಡಿಕೇರಿ ನಗರ ಪಿಎಸ್‍ಐ ವೆಂಕಟರಮಣ, ಎ.ಎಸ್.ಐ. ಕೆ.ವೈ. ಹಮೀದ್, ಎನ್.ಟಿ. ತಮ್ಮಯ್ಯ, ಸಿಬ್ಬಂದಿಗಳಾದ ವಿ.ಜಿ. ವೆಂಕಟೇಶ್, ಕೆ.ಎಸ್. ಅನಿಲ್‍ಕುಮಾರ್, ಎಂ.ಎನ್. ನಿರಂಜನ್, ಬಿ.ಎಲ್. ಯೋಗೇಶ್ ಕುಮಾರ್, ಕೆ.ಆರ್. ವಸಂತ, ದಿನೇಶ್, ಮುರುಳಿ, ಮಧುಸೂದನ್ ಹಾಗೂ ಚಾಲಕರಾದ ಕೆ.ಎಸ್. ಶಶಿಕುಮಾರ್, ಬಿ.ಸಿ. ಶೇಷಪ್ಪ ಪಾಲ್ಗೊಂಡಿದ್ದು, ಇವರ ಕಾರ್ಯವೈಖರಿಯನ್ನು ಶ್ಲಾಘಿಸಿ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ನಗದು ಬಹುಮಾನವನ್ನು ಘೋಷಿಸಿರುತ್ತಾರೆ.