ಗೋಣಿಕೊಪ್ಪಲು, ಅ. 4: ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ತಾ. 6 ರಿಂದ 8 ವರೆಗೆ ಆಧ್ಯಾತ್ಮಿಕ ಶಿಬಿರ ನಡೆಯಲಿದೆ.
ತಾ. 6 ಮತ್ತು 7 ರಂದು ಮುಂಜಾನೆ 5.30ಕ್ಕೆ ಮಂಗಳಾರತಿ, 6.15 ನಿರ್ದೇಶಿತ ಧ್ಯಾನ, 6.45 ಉಷಾಕೀರ್ತನೆ, 7.30 ಯೋಗಾಸನ, 8.30 ಭಜನೆ ನಡೆಯಲಿದೆ.
9 ಗಂಟೆಗೆ ಸ್ವಾಮಿ ಜಗದಾತ್ಮಾನಂದಜಿ ಮಹಾರಾಜ್ ಅವರಿಂದ ಉದ್ಘಾಟನೆ ನಡೆಯಲಿದೆ. ತಾ. 7 ರಂದು ಬೆಳಿಗ್ಗೆ 9 ಗಂಟೆಗೆ ಸ್ವಾಮಿ ತತ್ವಮಯಾನಂದಜಿ ಅವರಿಂದ ಉಪನ್ಯಾಸ, 9.45 ಸ್ವಾಮಿ ನಿತ್ಯಸ್ಥಾನಂದಜಿ ಅವರಿಂದ ಉಪನ್ಯಾಸ, 10.45 ಸ್ವಾಮಿ ಜಿತಕಾಮಾನಂದಜಿ ಅವರಿಂದ ಉಪನ್ಯಾಸ, 11.30 ಸ್ವಾಮಿ ಈಶಪ್ರೇಮಾನಂದಜಿ ಅವರಿಂದ ಉಪನ್ಯಾಸ, 12.15 ಶ್ರೀರಾಮಕೃಷ್ಣ ಅಷ್ಟೋತ್ತರ ಶತನಾಮಾವಳಿ, 12.45 ಭೋಜನ, 1.45 ಸ್ವಾಮಿ ತ್ಯಾಗೀಶ್ವರಾನಂದಜಿ ಅವರಿಂದ ಉಪನ್ಯಾಸ, 2.45 ಸ್ವಾಮಿ ಆತ್ಮಜ್ಞಾನಂದಜಿ ಅವರಿಂದ ಉಪನ್ಯಾಸ, 3.30 ಸ್ವಾಮಿ ತತ್ವಮಯಾನಂದಜಿ ಅವರಿಂದ ಉಪನ್ಯಾಸ, 5 ಭಜನೆ, 6.15 ಆರತಿ, ಭಜನೆ, 7.15 ಜಪ ಮತ್ತು ಜ್ಞಾನ, 8. ಶ್ರೀ ರಾಮಕೃಷ್ಣ ವಚನವೇದ ವಾಚನ, 8.15 ಭೋಜನ ಕಾರ್ಯಕ್ರಮಗಳು ನಡೆಯಲಿವೆÉ.
ಕೊನೆಯ ದಿನ ಅಕ್ಟೋಬರ್ 8 ರಂದು ಮುಂಜಾನೆ 5.30 ಕ್ಕೆ ಮಂಗಳಾರತಿ, 6.15 ನಿರ್ದೇಶಿತ ಧ್ಯಾನ, 6.45 ಉಷಾಕೀರ್ತನೆ, 7.30 ಯೋಗಾಸನ, 8.30 ಭಜನೆ, 9.00 ಸ್ವಾಮಿ ತ್ಯಾಗೀಶ್ವರಾನಂದಜಿ ಅವರಿಂದ ಉಪನ್ಯಾಸ, 9.45 ಸ್ವಾಮಿ ನಿತ್ಯಸ್ಥಾನಂದಜಿ ಅವರಿಂದ ಉಪನ್ಯಾಸ, 10.45 ಸಮಾರೋಪ ಸಮಾರಂಭ ನಡೆಯಲಿದೆ ಎಂದು ರಾಮಕೃಷ್ಣ ಶಾರದಾಶ್ರಮ ಅಧ್ಯಕ್ಷ ಬೋಧಸ್ವರೂಪ ನಂದಜಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.