ಮಡಿಕೇರಿ, ಅ. 4: ದೇಶದ ಯುವಜನತೆ ಸಮಾಜದ ಡೊಂಕುಗಳನ್ನು ತಿದ್ದಿ ಸಮಾಜವನ್ನು ಪರಿವರ್ತನೆ ಮಾಡುವದರಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಆಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಕರೆ ನೀಡಿದರು. ಸಮೀಪದ ಪಾಲಿಬೆಟ್ಟ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕವು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 148ನೇ ಜನ್ಮದಿನದ ಅಂಗವಾಗಿ ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಹಾಗೂ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಯುವಜನತೆ, ದೇಹಬಲ, ಮನೋಬಲ ಮತ್ತು ಆತ್ಮಬಲವನ್ನು ಮೈಗೂಡಿಸಿಕೊಂಡು ಸಮಾಜವನ್ನು ಪರಿವರ್ತನೆ ಗೊಳಿಸಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾಜ ಪರಿವರ್ತನೆ ಮಾಡುವ ಸಂದರ್ಭದಲ್ಲಿ ಮೊದಲು ನಾವುಗಳು ಬದುಕಿನಲ್ಲಿ ಪಾರದರ್ಶ ಕತೆಯನ್ನು ಅ¼ವಡಿಸಿಕೊಳ್ಳಬೇಕು ಎಂಬ ಕಿವಿ ಮಾತನ್ನಾಡಿದರು.
ಕಾವೇರಿ ಟೈಮ್ಸ್ನ ಉಪಸಂಪಾದಕ ಸನ್ನು ಕಾವೇರಪ್ಪ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿಯೇ ಸಮಾಜಮುಖಿಯಾಗಿ ಕಾರ್ಯವನ್ನು ನಿರ್ವಹಿಸಬೇಕು; ಸಮಾಜ ಸೇವೆಯಿಂದ ಸಿಗುವಂತಹ ತೃಪ್ತಿ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ ಎಂದರು. ಪೊನ್ನಂಪೇಟೆ ರಾಮಕೃಷ್ಣ ಸೇವಾಶ್ರಮದ ನಿರ್ದೇಶಕ ಪರಹಿತಾನಂದ ಸ್ವಾಮೀಜಿ, ಕಾಲೇಜಿನ ಪ್ರಾಚಾರ್ಯ ಡಾ. ಕೆ. ಎಂ. ಭವಾನಿ ಮುಖ್ಯ ಅಥಿತಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಹಿತನುಡಿ ಗಳನ್ನಾಡಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಬೋಧಸ್ವರೂಪಾನಂದ ಮಹರಾಜ್ ವಹಿಸಿದರು. ವಿದ್ಯಾರ್ಥಿನಿ ಜಾಶ್ಮಿ ಪ್ರಾರ್ಥಿಸಿ, ವಿದ್ಯಾರ್ಥಿನಿ ಆಯಿಷಾ ಎಂ.ಎಂ. ವಂದಿಸಿದರು. ಕಾಲೇಜಿನ ಸಾಂಸ್ಕøತಿಕ ನಾಯಕ ಮಣಿ ಪ್ರತಿಜ್ಞಾವಿಧಿ ಬೋಧಿಸಿದನು.
ಸಭಾ ಕಾರ್ಯಕ್ರಮಕ್ಕಿಂತ ಮೊದಲು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಆಶ್ರಮ, ಆಸ್ಪತ್ರೆ ಆವರಣ ಹಾಗೂ ಮುಖ್ಯ ರಸ್ತೆಯ ಬದಿಗಳನ್ನು ಸ್ವಚ್ಛಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾz ಪಿ. ಆರ್. ಶಿವದಾಸ್, ಸೌಮ್ಯ ಮತ್ತು ಇಂದು, ಹಳೇ ವಿದ್ಯಾರ್ಥಿಗಳಾದ ಅಕ್ಷಯ್ ಮತ್ತು ವಿಕಿಲ್ ಪಾಲ್ಗೊಂಡಿದ್ದರು.