ಭಾಗಮಂಡಲ, ಅ. 5: ಇಲ್ಲಿನ ಶ್ರೀ ಕಾವೇರಿ ಆಟೋ ಚಾಲಕ ಮತ್ತು ಮಾಲೀಕರ ಸಂಘ ಆಟೋ ಸ್ಥಗಿತಗೊಳಿಸಿ ಭಾಗಮಂಡಲ ಮುಖ್ಯ ದ್ವಾರದಿಂದ ತಲಕಾವೇರಿಯವರೆಗೆ ಸ್ವಚ್ಛತಾ ಕಾರ್ಯವನ್ನು ಹಮ್ಮಿ ಕೊಳ್ಳಲಾಯಿತು.ಕಾರ್ಯಕ್ರಮಕ್ಕೆ ಭಾಗಮಂಡಲ ಪೊಲೀಸ್ ಠಾಣಾಧಿಕಾರಿ ಸದಾಶಿವ ಚಾಲನೆ ನೀಡಿ ಶುಭ ಕೋರಿದರು. ಭಾಗಮಂಡಲದಿಂದ ತಲಕಾವೇರಿವರೆಗೆ ಸುಮಾರು 8 ಕಿ.ಮೀ. ಸ್ವಚ್ಛತಾ ಕಾರ್ಯದಲ್ಲಿ ಸಂಘದ 55 ಮಂದಿ ಸದಸ್ಯರು 3 ತಂಡಗಳಾಗಿ ಪಾಲ್ಗೊಂಡಿದ್ದರು. ಸ್ವಚ್ಛತೆಯ ಜೊತೆಗೆ ಕ್ಷೇತ್ರಕ್ಕೆ ಆಗಮಿಸಿ ಯಾತ್ರಾರ್ಥಿಗಳಿಗೆ ಸ್ವಚ್ಛತಾ ಜಾಗೃತಿಯ ಬಗ್ಗೆ ಕರಪತ್ರ ವಿತರಿಸಿದರು. ಬಳಿಕ ನಡೆದ ಸಭೆಯಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ ಭಾಸ್ಕರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅಶೋಕ್ ಮಾತನಾಡಿ, ಪ್ರತಿಯೋರ್ವ ಸ್ವಚ್ಛತೆಗೆ ಆದ್ಯತೆ ನೀಡಬೇಕು.
(ಮೊದಲ ಪುಟದಿಂದ) ತಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿ ಮಾಡಿದರೆ ದೇಶವೇ ಶುಚಿಯಾಗುತ್ತದೆ. ಸಾರ್ವಜನಿಕರು ಸ್ಥಳದಲ್ಲಿ ಅಂಜಿಕೆಯಿಲ್ಲದೆ ಸ್ವಚ್ಛತೆಗೆ ಮುಂದಾದಲ್ಲಿ ಇನ್ನೋರ್ವರು ಕೂಡ ಸ್ವಚ್ಛತೆಗೆ ಆದ್ಯತೆ ನೀಡುತ್ತಾರೆ.
ಈ ಸಂದರ್ಭ ಗ್ರಾ.ಪಂ. ಸದಸ್ಯರಾದ ರಾಜಾರೈ, ಪುರುಷೋತ್ತಮ, ಕಾಳನ ರವಿ, ಶ್ರೀಧರ್, ವಿದ್ಯಾಧರ್ ನಾಯರ್, ಕಾರ್ಯದರ್ಶಿ ಸಿರಿಕಜೆ ಭವಾನ್ ಕುಮಾರ್, ಖಜಾಂಚಿ ಪುನೀತ್, ನಂದಿನಿ ಹಾಗೂ ಇನ್ನಿತರರು ಇದ್ದರು.