ಮಡಿಕೇರಿ, ಅ.5 : ಕೊಡವ ಸಮಾಜಗಳ ಒಕ್ಕೂಟದಿಂದ ವೀರಾಜಪೇಟೆ ಬಳಿಯ ಬಾಳುಗೋಡಿನಲ್ಲಿ ತಾ. 26 ರಿಂದ 28 ರವರೆಗೆ 6ನೇ ವರ್ಷದ ‘ಕೊಡವ ನಮ್ಮೆ’ ಕಾರ್ಯಕ್ರಮ ನಡೆಯಲಿದೆ. ಮೂರು ದಿನಗಳ ನಮ್ಮೆಯ ಕೊನೆಯಲ್ಲಿ 34 ಕೊಡವ ಸಮಾಜಗಳ ನಡುವೆ ಸಾಂಸ್ಕøತಿಕ ಪೈಪೆÀÇೀಟಿ ನಡೆಯಲಿದೆ ಎಂದು ಕೊಡವ ಸಮಾಜಗಳ ಒಕ್ಕೂಟದ ಸಾಂಸ್ಕøತಿಕ ಸಮಿತಿಯ ಅಧ್ಯಕ್ಷ ಹಾಗೂ ಮಕ್ಕಂದೂರು ಕೊಡವ ಸಮಾಜದ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡವ ಸಂಸ್ಕøತಿ, ಪರಂಪರೆ, ಜಾನಪದ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆÉಸುವುದರೊಂದಿಗೆ ಯುವ ಸಮೂಹಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ವಿವಿಧ ಸಾಂಸ್ಕøತಿಕ ಸ್ಪರ್ಧೆಗಳು ನಡೆÀಯಲಿದೆ ಎಂದರು.

ಕೊಡವ ನಮ್ಮೆಯ ಆರಂಭಿಕ ದಿನವಾದ ತಾ. 26 ರಂದು ‘ಪೆÀÇಮ್ಮಕ್ಕಡ ನಮ್ಮೆ, ತಾ. 27 ರಂದು ಬಾಳುಗೋಡುವಿನಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ನಿವೃತ್ತ ಸೇನಾ ಅಧಿಕಾರಿಗಳಿಂದ ನಮನ ಕಾರ್ಯಕ್ರಮ ನಡೆಯಲಿದೆ. ಕ್ರೀಡಾ ಸಮಿತಿ ವತಿಯಿಂದ ಹಾಕಿ ಮತ್ತು ಹಗ್ಗಜಗ್ಗಾಟ ಸ್ಪರ್ಧೆಯನ್ನು ಕೂಡ ಆಯೋಜಿಸಿರುವದಾಗಿ ತಿಳಿಸಿದರು.

ಸಾಂಸ್ಕøತಿಕ ಸಮಿತಿಯ ಮುಖ್ಯ ಸಂಚಾಲಕ ಕಾಳಿಮಾಡ ಎಂ. ಮೋಟಯ್ಯ ಮಾತನಾಡಿ, ಸ್ಪರ್ಧೆಗಳ ಕುರಿತು ಮಾಹಿತಿ ನೀಡಿದರು. ಕೊಡವ ನಮ್ಮೆಯಲ್ಲಿ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಯ 34 ಕೊಡವ ಸಮಾಜಗಳು ಪಾಲ್ಗೊಳ್ಳಲಿದ್ದು, 9 ವಿವಿಧ ಸ್ಪರ್ಧೆಗಳಿಗೆ ತಲಾ ಒಂದೊಂದು ತಂಡಗಳನ್ನು ಮಾತ್ರ ಪ್ರತಿ ಕೊಡವ ಸಮಾಜಗಳು ಕಳುಹಿಸಿಕೊಡಲು ಅವಕಾಶವಿದೆ ಎಂದರು.

ಸಾಂಸ್ಕøತಿಕ ಸ್ಪರ್ಧೆಯಲ್ಲಿ ಕೋಲಾಟ್, ಬೊಳಕಾಟ್, ಕತ್ತಿಯಾಟ್, ಉಮ್ಮತ್ತಾಟ್ ಸ್ಪರ್ಧೆಗಳು ನಡೆಯಲಿದ್ದು, ಪ್ರತಿ ಸ್ಪರ್ಧೆಯಲ್ಲಿ 12 ಮಂದಿಯ ತಂಡಕ್ಕೆ ಅವಕಾಶವಿರುತ್ತದೆ. 8 ನಿಮಿಷಗಳ ಕಾಲಾವಕಾಶವನ್ನು ನೀಡಲಾಗಿದ್ದು, ಸರ್ಧಾ ವಿಜೇತರಿಗೆ ಪ್ರಥಮ 5ಸಾವಿರ ರೂ., ದ್ವಿತೀಯ 4 ಸಾವಿರ ರೂ., ಮತ್ತು ತೃತೀಯ 3 ಸಾವಿರ ರೂ.ಗಳನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪರೆಯಕಳಿ ಸ್ಪರ್ಧೆಯಲ್ಲಿ ಇಬ್ಬರನ್ನು ಒಳಗೊಂಡ ಒಂದು ತಂಡಕ್ಕೆ ಅವಕಾಶವಿದ್ದು, 4 ನಿಮಿಷದ ಕಾಲಾವಕಾಶ ನೀಡಲಾಗಿದೆ. ಸಮ್ಮಂಧ ಅಡ್‍ಕುವೊ ಸ್ಪರ್ಧೆಯಲ್ಲಿ 2 ಮಂದಿಯ ತಂಡ ಮತ್ತು 6 ನಿಮಿಷ ಕಾಲಾವಕಾಶವಿರುತ್ತದೆ. ಈ ಎರಡೂ ಸ್ಪರ್ಧೆಗಳಲ್ಲಿ ಪ್ರಥಮ 1 ಸಾವಿರ ರೂ., ದ್ವಿತೀಯ 800 ರೂ., ತೃತೀಯ 600 ರೂ. ನಗದು ಬಹುಮಾನ ನೀಡಲಾಗುತ್ತದೆ ಎಂದರು.

ಬಾಳೋಪಾಟ್-ದೇಶ ಕಟ್ಟ್ ಪಾಟ್ ಸ್ಪರ್ಧೆಯಲ್ಲಿ 4 ಮಂದಿಯ ತಂಡಕ್ಕೆ ಅವಕಾಶವಿದ್ದು, 6 ನಿಮಿಷ ಕಾಲಾವಕಾಶವಿದೆ. ಈ ಸ್ಪರ್ಧೆಯ ವಿಜೇತರಿಗೆ ಪ್ರಥಮ 2 ಸಾವಿರ ರೂ., ದ್ವಿತೀಯ 1500ರೂ. ಮತ್ತು ತೃತೀಯ 1 ಸಾವಿರ ರೂ. ಬಹುಮಾನವನ್ನು ನೀಡಲಾಗುತ್ತದೆ

(ಮೊದಲ ಪುಟದಿಂದ) ಎಂದು ಮೋಟಯ್ಯ ಮಾಹಿತಿ ನೀಡಿದರು.

ತಾಲಿಪಾಟ್ ಸ್ಪರ್ಧೆಯಲ್ಲಿ 4 ಮಂದಿಯ ತಂಡಕ್ಕೆ ಅವಕಾಶವಿದ್ದು, 6 ನಿಮಿಷ ಕಾಲಾವಕಾಶವಿದೆ. ಇದರಲ್ಲಿ ಪ್ರಥಮ ರೂ. 1600, ದ್ವಿತೀಯ ರೂ. 1200 ರೂ. ಮತ್ತು ತೃತೀಯ ರೂ. 1000 ಬಹುಮಾನವನ್ನು ನೀಡಲಾಗುತ್ತದೆ. ಕಪ್ಪೆಯಾಟ್ ಸ್ಪರ್ಧೆಯಲ್ಲಿ ಕೊಡವ ಸಮಾಜಗಳಿಂದ ತಲಾ ಒಬ್ಬರು ಸ್ಪರ್ಧಿಸಲು ಅವಕಾಶವಿದ್ದು, ಪ್ರಥಮ ರೂ. 500, ದ್ವಿತೀಯ ರೂ. 400ಮತ್ತು ತೃತೀಯ ರೂ. 300 ಬಹುಮಾನವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

ನೋಂದಣಿಗೆ ತಾ. 15 ಕೊನೆ ದಿನ

ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳ ಹೆಸರು ನೋಂದಣಿಗೆ ತಾ. 15 ಕೊನೆಯ ದಿನವಾಗಿದ್ದು, ಆಯಾ ಕೊಡವ ಸಮಾಜಗಳು ಸ್ಪರ್ಧೆಗೆ ತಾವು ಕಳುಹಿಸುವ ತಂಡಗಳ ವಿವರಗಳನ್ನು ಕಾಳಿಮಾಡ ಎಂ. ಮೋಟಯ್ಯ, ಮುಖ್ಯ ಸಂಚಾಲಕ, ಸಾಂಸ್ಕøತಿಕ ಸಮಿತಿ, ಸೆಂಟ್ ಆಂಟೋನಿ ಶಾಲೆಯ ಸಮೀಪ, ಪೆÀÇನ್ನಂಪೇಟೆ, ದಕ್ಷಿಣ ಕೊಡಗು-571216 ಈ ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಮೊ.ಸಂ. 98453 08228, 85848 46226, 94487 20865 ನ್ನು ಸಂಪರ್ಕಿಸಬಹುದಾಗಿದೆ.

ಸುದ್ದಿಗೋಷ್ಠಿಯಲ್ಲಿ ಸಾಂಸ್ಕøತಿಕ ಸಮಿತಿಯ ಸಹ ಸಂಚಾಲಕ ಹಂಚೆಟ್ಟೀರ ಮನು ಮುದ್ದಪ್ಪ ಹಾಗೂ ಸದಸ್ಯರಾದ ಕಾಳಚಂಡ ಪವನ್ ಉಪಸ್ಥಿತರಿದ್ದರು.